ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ಚಾಕವೇಲು ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದೆ.
ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಯಾವುದೇ ಅಹಿತರ ಘಟನೆಗಳು ನಡೆಯದೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ K.C. ಮಂಜುನಾಥ್ ಚುನಾವಣಾ ಅಧಿಕಾರಿಗಳ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು ಇದಕ್ಕೆ ಸಾತ್ ನೀಡಿದ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರಾದ PDO ಸಿದ್ದೀಕ್ ಕರವಸೂಲಿಗಾರ ಶ್ರೀರಾಮಪ್ಪ DEO ಆದರೆಡ್ಡಿ ಚುನಾವಣೆ ಕಾರ್ಯದಲ್ಲಿ ಪಾಲ್ಗೊಂಡಿದ್ದು ಪಂಚಾಯಿತಿ ಎಲ್ಲಾ ಸದಸ್ಯರು ಚುನಾವಣೆಗೆ ಹಾಜರಿದ್ದು ಕಾಂಗ್ರೆಸ್ ಪಕ್ಷದ ಶಾಸಕರಾದ S.N. ಸುಬ್ಬ ರೆಡ್ಡಿ ಬೆಂಬಲಿತ ಯುವ ಮುಖಂಡ ಪ್ರಕಾಶ್ ರೆಡ್ಡಿ ಬಣದಿಂದ G.M. ಗಂಗಾಧರ್ ಅವರು ನಾಮಪತ್ರ ಸಲ್ಲಿಸಿದರೆ ವಿರೋಧಿ ಬಣವಾದ ಪಂಚಾಯತಿ ಅಧ್ಯಕ್ಷರಾದ P.S.ವೆಂಕಟರೆಡ್ಡಿ ಬೆಂಬಲಿತ ಅಭ್ಯರ್ಥಿ ಗಂಗುಲಮ್ಮ ನಾಮಪತ್ರ ಸಲ್ಲಿಸಿರುವರು.
ಇಬ್ಬರಿಗೂ ಜಿದ್ದಾಜಿದ್ದಿ ಪೈಪೋಟಿ ನಡೆದಿದ್ದು 15 ಸದಸ್ಯರೂ ಮತ ಚಲಾಯಿಸಿ ಗಂಗುಲಮ್ಮಾಗೆ 7 ಮತ ಪಡೆದರೆ G.M. ಗಂಗಾಧರ್ 8 ಮತಗಳು ಪಡೆದು ಒಂದು ಮತ ಅಂತರದಿಂದ ಗೆದ್ದು ಉಪಾಧ್ಯಕ್ಷರಾಗಿ ಆಯ್ಕೆಯಾಗಿ ನಗುವಿನ ಅಲೆ ಬೀರಿರುತ್ತಾರೆ.
ಚುನಾವಣೆ ಫಲಿತಾಂಶ ಹೊರ ಬಿದ್ದ ತಕ್ಷಣವೇ ಕಾರ್ಯಕರ್ತರು ಬೆಂಬಲಿಗರು ಯುವ ಮುಖಂಡರಾದ ಪ್ರಕಾಶ್ ರೆಡ್ಡಿ, K.V.ಶೇಖರ್ ರೆಡ್ಡಿ, S.V..ಶ್ರೀರಾಮ ರೆಡ್ಡಿ, ಆಂಜನೇಯ ರೆಡ್ಡಿ, R.V. ಶೇಖರ್ ರೆಡ್ಡಿ K R. ಸುಧಾಕರ್ ರೆಡ್ಡಿ ರಾಮನ್ ಪಡಿ ಬಾಬು ಚೇಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ T. ಹರೀಶ್ ನಾಗರಾಜ್ ಶಂಕರರೆಡ್ಡಿ ಮತ್ತು ಅವರ ಎಲ್ಲಾ ಸದಸ್ಯರು ಇನ್ನೂ ಅನೇಕ ಬೆಂಬಲಿಗರು ಕಾರ್ಯಕರ್ತರು ಮತ್ತು ಗಂಗಾಧರ್ ಸ್ನೇಹಿತರು ಪುಷ್ಪಮಾಲೆಗಳನ್ನು ಅರ್ಪಿಸುತ್ತ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಬ್ರಮಿಸಿರುತ್ತಾರೆ.







0 Comments