ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಜುಲೈ 16, ಶನಿವಾರ ಮಲ್ಲೇಶ್ವರದಲ್ಲಿರುವ ಬೆಂಗಳೂರಿನ ಶ್ರೀ ಕಾಶೀ ಮಠದಲ್ಲಿ ಏರ್ಪಡಿಸಿದ್ದ "ಹರಿನಾಮ ಸಂಕೀರ್ತನೆ" ಗಾಯನ ಕಾರ್ಯಕ್ರಮದಲ್ಲಿ ಶ್ರೀಮತಿ ಮಾನಸಾ ಕುಲಕರ್ಣಿ ಅವರು ಅಪರೋಕ್ಷಿತ ಹರಿದಾಸರ ಪದಗಳನ್ನು ಪ್ರಸ್ತುತ ಪಡಿಸಿದರು.
ವಾದ್ಯ ಸಹಕಾರದಲ್ಲಿ, ವಿ|| ಶಿವಕುಮಾರ್ ಮಹಾಂತ್ ಅವರು ಹಾರ್ಮೋನಿಯಂ ವಾದನದಲ್ಲಿ ಮತ್ತು ವಿ|| ಪ್ರಸಾದ್ ಅವರು ತಬಲಾ ವಾದನದಲ್ಲಿ ಸಾಥ್ ನೀಡಿದರು. ಟಿಟಿಡಿಯ ಡಾ|| ಪಿ. ಭುಜಂಗರಾವ್ ಅವರು ಕಲಾವಿದರಿಗೆ ಅಭಿನಂದಿಸಿದರು.

0 Comments