Ticker

6/recent/ticker-posts

Ad Code

Responsive Advertisement

Flash News: ಜಮೀರ್ ಅಹ್ಮದ್ ಖಾನ್ ಫ್ಲ್ಯಾಟ್ನಲ್ಲಿ 24 ಜೀವಂತ ಗುಂಡುಗಳು ಪತ್ತೆ....?

ಬೆಂಗಳೂರು (ಜು.07): ಎಸಿಬಿ ಪೋಲಿಸ್ ಅಧಿಕಾರಿಗಳು ಸಿಲ್ವರ್ ಓಕ್ ಅಪಾರ್ಟ್ಮೆಂಟ್ನ ಫ್ಲ್ಯಾಟ್, ಮಲ್ಯ ರಸ್ತೆಯ ಯುಬಿ ಸಿಟಿ ಎದುರಿನ ಫ್ಲ್ಯಾಟ್ ನಾಲ್ಕನೇ ಪ್ಲೋರ್‌ನ 402ನೇ ಫ್ಲ್ಯಾಟ್ನಲ್ಲಿ ಪರಿಶೀಲನೆ ನಡೆದಿದೆ.


ಮನೆ, ಟ್ರಾವೆಲ್ಸ್ ಕಚೇರಿ, ಫ್ಲ್ಯಾಟ್ ಸೇರಿ ಇತರ ಕಡೆ ಅಧಿಕಾರಿಗಳ ಶೋಧ ನಡೆಸಿದ್ದಾರೆ. ಫ್ಲ್ಯಾಟ್ನಲ್ಲಿ 24 ಜೀವಂತ ಗುಂಡು ಪತ್ತೆಯಾಗಿದೆ. ಜಮೀರ್ ಅಹಮ್ಮದ್ ಪಿಸ್ತೂಲ್ ಪರವಾನಗಿ ಹೊಂದಿದ್ದಾರೆ. ಹಾಗಾಗಿ ಇದೇ ಪಿಸ್ತೂಲ್‌ನ ಗುಂಡುಗಳು ಇರಬಹುದು. ಆದರೆ ಇದೇ ಫ್ಲಾಟ್‌ನಲ್ಲಿ ಒಂದು ಖಾಲಿ ಬುಲೆಟ್‌ನ ಡಬ್ಬಿ ಪತ್ತೆಯಾಗಿದ್ದು, ಇದು ಕುತೂಹಲಕ್ಕೆ ಕಾರಣವಾಗಿದೆ. ಪಿಸ್ತೂಲ್ ನಿಂದ ಗುಂಡು ಹಾರಿದ್ರೆ ಮಾತ್ರ ಈ ಖಾಲಿ ಬುಲೆಟ್‌ನ ಡಬ್ಬಿ ಉಳಿಯುತ್ತದೆ.

ಯುಬಿ ಸಿಟಿ ಫ್ಲಾಟ್‌ನಲ್ಲಿ ಪತ್ತೆಯಾಗಿದೆ 30ಕ್ಕೂ ಹೆಚ್ಚು ಅಧಿಕ ಡಾಕ್ಯುಮೆಂಟ್ಸ್, ಬೇನಾಮಿ ದಾಖಲೆ ಪತ್ರ ಆಗಿರುವ ಸಾಧ್ಯತೆ ಇದೆ. ಯಾಕಂದ್ರೆ ಈ ಎಲ್ಲಾ ದಾಖಲೆಗಳು ಬೇರೆಯವರ ಹೆಸರಿನಲ್ಲಿ ಇವೆ. ಸೇಲ್ ಡೀಡ್, ಸೇಲ್ ಅಗ್ರಿಮೆಂಟ್ ಡಾಕ್ಯುಮೆಂಟ್ಸ್ ಪತ್ತೆಯಾಗಿದೆ. ಬೇರೆಯವರ ಹೆಸರಿನ ದಾಖಲೆಗಳು ಪತ್ತೆಯಾಗಿದೆ. ರಾಜಕಾರಣಿಗಳು ಸೇರಿ ಹಲವರ ಹೆಸರಿನ ದಾಖಲೆಗಳು ಪತ್ತೆಯಾಗಿದ್ದು, ಎಸಿಬಿ ಅಧಿಕಾರಿಗಳು ಫ್ಲ್ಯಾಟ್ನಲ್ಲಿ ಯಾಕಿಷ್ಟು ದಾಖಲೆ ಇಟ್ಟಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.

ಆನೇಕಲ್, ತುಮಕೂರು, ಹೆಬ್ಬಾಳ ಸೇರಿದಂತೆ ವಿವಿಧ ಕಡೆಗಳಲ್ಲಿ ಇರುವ ಎಕರೆಗಟ್ಟಲೆ ಜಮೀನಿಗೆ ಸಂಬ0ಧಿಸಿದ ದಾಖಲೆಗಳು ಪತ್ತೆಯಾಗಿದೆ. ಕೋಟ್ಯಾಂತರ ಮೌಲ್ಯದ ಬೇನಾಮಿ ಹೆಸರಿನಲ್ಲಿ ದಾಖಲೆಗಳು ಇರೋ ಶಂಕೆ ವ್ಯಕ್ತವಾಗಿದೆ.

Varthajala daily, Bengaluru

Post a Comment

0 Comments

Ad Code

Responsive Advertisement