ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮನೆ ಮುಂದೆ ಇಂದು (ಮಂಗಳವಾರ) ಮಧ್ಯಾಹ್ನ ಕಾರ್ಯಕರ್ತನೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಎಚ್ಚೆತ್ತ ಪೊಲೀಸರು ಅನಾಹುತ ತಪ್ಪಿಸಿದ್ದಾರೆ.
ಇಂದು ಬೆಳಗ್ಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್‌ಖಾನ್ ಮನೆ ಸೇರಿ 5 ಕಡೆ ಎಸಿಬಿ ಅಧಿಕಾರಿಗಳ ತಂಡ ಏಕ ಕಾಲದಲ್ಲಿ ದಾಳಿ ಮಾಡಿದೆ. 40ಕ್ಕೂ ಹೆಚ್ಚು ಅಧಿಕಾರಿಗಳ ತಂಡ, ಜಮೀರ್ ಅಹ್ಮದ್‌ಖಾನ್‌ರ ಕಂಟೋನ್ಮೆ0ಟ್ ಐಷಾರಾಮಿ ಮನೆ, ಒಕ್ ಅಪಾರ್ಟ್ಮೆಂಟ್ನ ಪ್ಲ್ಯಾಟ್, ಸದಾಶಿವನಗರದ ಗೆಸ್ಟ್ ಹೌಸ್, ಬನಶಂಕರಿಯ ಜಿ.ಕೆ. ಅಸೋಸಿಯೇಷನ್ ಕಚೇರಿ, ಕಲಾಸಿಪಾಳ್ಯದ ನ್ಯಾಷನಲ್ ಟ್ರಾವೆಲ್ ಕಚೇರಿಯುಲ್ಲಿ ಮಹತ್ವದ ದಾಖಲೆಗಳನ್ನ ಪರಿಶೀಲನೆ ನಡೆಸಿದೆ. ಮನೆ ಒಳಗೆ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದ ಸಂದರ್ಭ, ಅತ್ತ ಹೊರಗೆ ಜಮಾಯಿಸಿದ ನೂರಾರು ಕಾರ್ಯಕರ್ತರು ಎಸಿಬಿ ವಿರುದ್ಧ ಆಕ್ರೋಶ ಹೊರಹಾಕಿದರು. ಬೇಕಂತಲೇ ದಾಳಿ ಮಾಡಲಾಗಿದೆ ಎಂದು ರಾಜ್ಯ ಹಾಗು ಕೇಂದ್ರ ಸರಕಾರದ ವಿರುದ್ದ ಪ್ರತಿಭಟನೆಗೆ ಯತ್ನಿಸಿದರು. ಈ ವೇಳೆ ಜಮೀರ್ ಅಹ್ಮದ್‌ಖಾನ್‌ರ ಅಭಿಮಾನಿಯೊಬ್ಬ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಆತನನ್ನು ತಡೆದು ವಾಪಸ್ ಕಳುಹಿಸಿದರು ಎಂಬುದು ತಿಳಿದುಬಂದಿದೆ.
Varthajala daily, Bengaluru

0 Comments