ಶ್ರೀರಾಮಪುರ ಪೊಲೀಸ್ ಠಾಣೆಯ ಚಾಳಿಬಿದ್ದ ಆಸಾಮಿ ಅಕ್ರಮವಾಗಿ ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ನಾರಾಯಣ ಜೆ. ಬಿನ್ ಜನಾರ್ಧನ, 42 ವರ್ಷ, ಈತನನ್ನು PIT-NDPS ಕಾಯ್ದೆಯಲ್ಲಿ ಬಂಧಿಸಲಾಗಿದೆ. ಈತನು ಬೆಂಗಳೂರು ನಗರದ ನಂದಿನಿಲೇಔಟ್, ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಾಗೂ ಅಕ್ಕ-ಪಕ್ಕ ಪ್ರದೇಶಗಳಲ್ಲಿ ಸಕ್ರಿಯವಾಗಿ ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಮಾಡುವ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿದ್ದು, ಈತನ ವಿರುದ್ಧ ನಂದಿನಿಲೇಔಟ್ ಮತ್ತು ಶ್ರೀರಾಮಪುರ ಪೊಲೀಸ್ ಠಾಣೆಗಳಲ್ಲಿ ಕೊಲೆಪ್ರಯತ್ನ ಮತ್ತು CPÀÌ ಕಾಯ್ದೆಯಡಿಯಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ.
ಈತನು 2017 ನೇ ಸಾಲಿನಿಂದ ಅಕ್ರಮವಾಗಿ ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಮಾಡುವ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದು, ಈತನ ವಿರುದ್ಧ ಮೇಲ್ಕಂಡ ಪೊಲೀಸ್ ಠಾಣೆಗಳಲ್ಲಿ 2017 ರಿಂದ 2022 ನೇ ಸಾಲಿನ ಏಪ್ರಿಲ್ ಮಾಹೆಯವರೆಗೆ CPÀÌ ಕಾಯ್ದೆಯಡಿ-06 ಪ್ರಕರಣಗಳು ಮತ್ತು 01-ಕೊಲೆಪ್ರಯತ್ನ ಪ್ರಕರಣ ಸೇರಿದಂತೆ ಒಟ್ಟು 07 ಪ್ರಕರಣಗಳು ದಾಖಲಾಗಿರುತ್ತವೆ. ಆರೋಪಿಯು ದಿನಾಂಕ 14.01.2022 ರಂದು ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರವು ಶ್ರೀರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತು ಅಕ್ಕ ಪಕ್ಕ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ ಮಾದಕ ವಸ್ತುವನ್ನು ಮಾರಾಟ ಮಾಡಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಕೃತ್ಯವೆಸಗಿರುತ್ತಾನೆ. ಆರೋಪಿಯು ಮಾನ್ಯ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಹೊರಬಂದು ನ್ಯಾಯಾಲಯದ ಜಾಮೀನಿನ ಷರತ್ತುಗಳನ್ನು ಪದೇ ಪದೇ ಉಲ್ಲಂಘನೆ ಮಾಡಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿರುವುದರಿಂದ ಈತನನ್ನು PIT-NDPS ಕಾಯ್ದೆಯಡಿಯಲ್ಲಿ ಬಂಧನದಲ್ಲಿಡಲಾಗಿದೆ.
ಈತನನ್ನು PIT-NDPS ಕಾಯ್ದೆಯಡಿಯಲ್ಲಿ ಬಂಧಿಸಲು ಶ್ರೀ ಬಾಲಕೃಷ್ಣ ಆರ್., ಪೊಲೀಸ್ ಇನ್ಸ್‍ಪೆಕ್ಟರ್, ಶ್ರೀರಾಮಪುರ ಪೊಲೀಸ್ ಠಾಣೆ ರವರು ವರದಿಯನ್ನು ಸಲ್ಲಿಸಿದ್ದು, ವರದಿಯನ್ನು ಪರಿಶೀಲಿಸಿದ ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ಈತನನ್ನು PIT-NDPS ಕಾಯ್ದೆಯಡಿಯಲ್ಲಿ ಬಂಧಿಸಲು ಆದೇಶ ಮಾಡಿರುತ್ತಾರೆ. ನಂತರ ಘನ ಉಚ್ಚ ನ್ಯಾಯಾಲಯದ ಸಲಹಾ ಮಂಡಳಿಯ ಅಭಿಪ್ರಾಯ ವರದಿ ಮೇರೆಗೆ ಮಾನ್ಯ ಕರ್ನಾಟಕ ಸರ್ಕಾರವು ಆರೋಪಿಯನ್ನು ಒಂದು ವರ್ಷದ ಅವಧಿಯವರೆಗೆ ಬಂಧನದಲ್ಲಿರಿಸಲು ಆದೇಶ ಮಾಡಿರುತ್ತದೆ.
0 Comments