Ticker

6/recent/ticker-posts

Ad Code

Responsive Advertisement

ಖಾಯಂಮಾತಿಗೆ ಒತ್ತಾಯಿಸಿ ಮುನಿಸಿಪಲ್ ಕಾರ್ಮಿಕರ ಮುಷ್ಕರಕ್ಕೆ - ಸಿಐಟಿಯು ಬೆಂಬಲ

ನ್ಯಾಯಯುತ  ಬೇಡಿಕೆಗಳ  ಪರಿಗಣಿಸಲು  ಸರ್ಕಾರಕ್ಕೆ  ಅಗ್ರಹ

ನಗರ ಸ್ಥಳೀಯ ಸಂಸ್ಥೆಗಳಲ್ಲಿ   20-30 ವರ್ಷಗಳಿಂದ  ನಿರಂತರವಾಗಿ  ನಾಗರಿಕ ಸೌಲಭ್ಯಗಳಾದ ಸ್ವಚ್ಚತೆ, ಕುಡಿಯುವ ನೀರು, ಬೀದಿ ದಿಪನಿರ್ವಹಣೆಯ  ಕೆಲಸಗಳಲ್ಲಿ ದುಡಿಯುತ್ತಿರುವ  ಮುನಿಸಿಪಾಲ್ ಕಾರ್ಮಿಕರ ಸೇವೆಗಳನ್ನು   ಖಾಯಂಗೋಲಿಸದೆ  ಕಡಿಮೆ  ಕೂಲಿಗಾಗಿ  ದುಡಿಸಲು ಮತ್ತು  ಗುತ್ತಿಗೆ  ಕಮಿಷನ್ ಅಸೆಗಾಗಿ  ಸರ್ಕಾರ  ಜೀತದಾಳುಗಳಂತೆ   ದುಡಿತ್ತಿದೆ ಎಂದು  ಸಿಐಟಿಯು  ಕರ್ನಾಟಕ ರಾಜ್ಯ ಸಮಿತಿಯು ಅರೋಪಿಸಿದೆ. ಈ ಕಾರ್ಮಿಕರ ಸೇವೆಗಳ ಖಾಯಂಮಾತಿಗೆ  ಒತ್ತಾಯಿಸಿ  ಎಲ್ಲಾ  ಮುನಿಸಿಪಲ್  ಕಾರ್ಮಿಕ ಸಂಘಟನೆಗಳ  ಜಂಟಿ ಹೋರಾಟ ಸಮಿತಿಯು ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ  ತನ್ನ  ಬೆಂಬಲವನ್ನು  ಸೂಚಿಸಿದೆ.

 ಗುತ್ತಿಗೆ  ಪದ್ದತಿಯೆ  ಕಾರ್ಮಿಕರ ಶೋಷಣೆಗಾಗಿ  ಇರುವ  ಪದ್ದತಿ, ಖಾಯಂ [ನಿರಂತರ ಸ್ವರೂಪದ  ಕೆಲಸಗಳಲ್ಲಿ]  ಗುತ್ತಿಗೆ ಕಾರ್ಮಿಕ ನೇಮಕಾತಿ  ಕಾನೂನು ಬಾಹಿರವಾಗಿದ್ದರು ಸರ್ಕಾರಗಳು ಇದೆ  ಪದ್ದತಿಯನ್ನು ಮುಂದುವರಿಸುವ ಮೂಲಕ  ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿವೆ. ಈ ಕಾರ್ಮಿಕರಿಗೆ ನೇರ ಪಾವತಿ, ಗುತ್ತಿಗೆ- ಹೋರ ಗುತ್ತಿಗೆ, ದಿನಗೂಲಿ, ಸಮಾನ ವೇತನ ಹೀಗೆ  ಹಲವು  ಹೆಸರುಗಳಲ್ಲಿ  ಕಡಿಮೆ  ಕೂಲಿಗೆ ದುಡಿಸುಲಾಗುತ್ತಿದೆ.  ರಾಜ್ಯ ಸರ್ಕಾರೇತರಪಾವತಿ ಪೌರಕಾರ್ಮಿಕರು, ಹೊರಗುತ್ತಿಗೆ, ಕ್ಷೇಮಾಭಿವೃದ್ಧಿ, ಮನೆ-ಮನೆ ಕಸ ಸಂಗ್ರಹಿಸುವ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್ಸ್, ಕಸದ ವಾಹನ ಚಾಲಕರು, ಸಹಾಯಕರು, ಹಾಗೂ ಪೌರಕಾರ್ಮಿಕರ, ಪಾರ್ಕ, ಸ್ಮಶಾಣ, ಘನ ತ್ಯಾಜ್ಯ ಘಟಕ,  ಯು.ಜಿ.ಡಿ ನೀರು ಸಂಸ್ಕರಣಾ ಘಟಕದ ಕಾರ್ಮಿಕರನ್ನು ಮೇಲ್ವಿಚಾರಕರು ಎಂಬ ಅಸಂಬದ್ಧ ವಿಗಂಡಣೆಯನ್ನು ಕೈಬಿಟ್ಟು ಎಲ್ಲಾ ಸ್ವಚ್ಛತಾ ಕಾರ್ಮಿಕರನ್ನು, ನೀರು ಸರಬರಾಜು ಕಾರ್ಮಿಕರನ್ನು ಏಕ ಕಾಲಕ್ಕೆ ಖಾಯಂ ಮಾಡಲೇಬೇಕು ಎಂದು  ಸಿಐಟಿಯು  ರಾಜ್ಯ ಸಮಿತಿ ಸರ್ಕಾರವನ್ನು ಅಗ್ರಹ ಪೂರಕವಾಗಿ  ಒತ್ತಾಯಿಸಿದೆ. 


Post a Comment

0 Comments

Ad Code

Responsive Advertisement