ವಾರ್ತಾಜಾಲ ಸುದ್ದಿ ಮಧುಗಿರಿ: ತಾ.ಪುರವರ ಗ್ರಾ.ಪಂ ಗೆ ಪಕ್ಷೇತರ ಬೆಂಬಲಿತ ಮಹಿಳಾ ಅಭ್ಯರ್ಥಿಗಳು ಅವಿರೋಧ ವಾಗಿ,ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಈ ಹಿಂದಿನ ಅಧ್ಕಕ್ಷ ಮತ್ತು ಉಪಾಧ್ಯಕ್ಷರನ್ನ ಅವಿಶ್ವಾಸ ಮಂಡಿಸಿ ಕೆಳಗಿಳಿಸಲಾಗಿತ್ತು.ಆದ್ದರಿಂದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗಳು ನಡೆದವು. ಅದರಂತೆ ಪಕ್ಷೇತರವಾಗಿ ವನಜಾಕ್ಷಿ ಸಿದ್ದರಾಜು ಅಧ್ಯಕ್ಷರಾಗಿ ಮತ್ತು ಲೋಕಮ್ಮ ಶಿವ ಕುಮಾರ್ ರವರು ಉಪಾಧ್ಯಕ್ಷರಾಗಿ ಅವಿರೋಧ ವಾಗಿ ಆಯ್ಕೆಯಾದರು.ಚುನಾವಣಾಧಿಕಾರಿ ತಾ.ದಂಡಾಧಿಕಾರಿ ಸುರೇಶ್ ಆಚಾರ್ ಫಲಿತಾಂಶ ಘೋಷಿಸಿದರು.
ಚುನಾವಣಾ ಫಲಿತಾಂಶ ಘೋಷಣೆಯಾದ ನಂತರ ಅಧ್ಯಕ್ಷೆ ವನಜಾಕ್ಷಿ ಸಿದ್ದರಾಜು ಮಾತನಾಡಿ "ಮೊದಲು ನನಗೆ ಸಹಕರಿಸಿದ ಎಲ್ಲಾ ಮಿತ್ರರಿಗೂ ಧನ್ಯವಾದಗಳು ಅರ್ಪಿಸುತ್ತಾ ಈ ನನ್ನ ಅಧ್ಯಕ್ಷತೆಯಲ್ಲಿ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತೆನೆ. ಜೂತೆಗೆ ಪಂಚಾಯತಿಯ ಅಭಿವೃದ್ಧಿಗೆ ಹಾಗೂ ಪಂಚಾಯತಿ ವ್ಯಾಪ್ತಿಗೆ ಬರುವ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಕೈಕೊಳ್ಳುತ್ತೇನೆ ಇದಕ್ಕೆ ನಿಮ್ಮೆಲ್ಲರ ಸಹಕಾರ ಮುಖ್ಯ ಎಂದರು.
ಈ ಸಂಧರ್ಭದಲ್ಲಿ ಗ್ರಾ.ಪಂ ಸದಸ್ಯರುಗಳಾದ ಪುರವರ ಮೂರ್ತಪ್ಪ,ಕಮಲಮ್ಮ,ನಾಗಮ್ಮ,ಲಿಂಗರಾಜು,ನಾರಾಯಣ ಗೌಡ,ಬಿ.ಕೆ ರಾಧ ನರಸಿಂಹ ಮೂರ್ತಿ,ವಿಜಯಲಕ್ಷ್ಮಿ ಹರೀಶ್,ದಿಲೀಪ್ ಸಂಕಾಪುರ,ರವಿ ಡಿ.ಎ. ಮುಖಂಡರಾದ ಸಂಕಾಪುರ ಜಯರಾಂ,ಕೆ.ಪಿ.ಸಿ.ಸಿ.ಜನರಲ್ ಸೆಕ್ರೆಟರಿ ದಿನೇಶ್,ಪೋಸ್ಟ್ ಮುದ್ದಪ್ಪ,ನರಸಪ್ಪ,ರಂಗನಾಥಪ್ಪ,ಕೋಡಗದಾಲ ತಿಪ್ಪಯ್ಯ,ಹನುಮಂತರಾಯಪ್ಪ,ಅರಳಾಪುರ ಆನಂದ್ ,ಎಲ್.ಐ.ಸಿ ಮೂರ್ತಿ ಪುಟ್ಟ ಕಾಮಯ್ಯ,ಅಜಯ್ ಪುರವರ, ಹರೀಶ್ ಮುಂತಾದವರು ಇದ್ದರು.


.jpeg)
0 Comments