Ticker

6/recent/ticker-posts

Ad Code

Responsive Advertisement

ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಬಳ್ಳಾರಿ ಬಂದ್,ಪ್ರತಿಭಟನೆ : ಭಾಗಶ ಯಶಸ್ವಿ

ಬಳ್ಳಾರಿ ಜುಲೈ 04. ಬಿಜೆಪಿ ಮತ್ತು ಹಲವು ಹಿಂದೂ ಪರ ಸಂಘಟನೆಗಳ ಸಹಯೋಗದೊಂದಿಗೆ ಕನ್ನಯ್ಯ ಲಾಲ್ ಹತ್ಯೆ ಖಂಡಿಸಿ ಇಂದು ಬಳ್ಳಾರಿ ನಗರದ ಗಡಿಗಿ ಚನ್ನಪ್ಪ  ವೃತ್ತದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳಲಾಗಿತ್ತು.





ದೇಶದ ಮೂಲ ನಿವಾಸಿಗಳು ಮತ್ತು ಬಹುಸಂಖ್ಯಾತ ಹಿಂದೂಗಳ ಮೇಲೆ ಪ್ರಾಚೀನ ಕಾಲದಿಂದಲೂ ಹಲವರು ರೀತಿಯ ದೌರ್ಜನ್ಯಗಳು ನಿರಂತರವಾಗಿ ನಡೆದುಕೊಂಡು ಬಂದಿದೆ.ಆದರೆ ಇಂದು ಅಂದರೆ ಈ ಆಧುನಿಕ ಕಾಲದಲ್ಲಿ ಸಹ ಈ ರೀತಿಯ ದೌರ್ಜನ್ಯಗಳು ನಡೆಯುತ್ತಿವೆ ಎನ್ನುವುದಕ್ಕೆ ಮೊನ್ನೆ ರಾಜಸ್ಥಾನದ ಉದಯಪುರದಲ್ಲಿ ಬಡ ಟೈಲರ್ ಆದ ಕನ್ನಯ್ಯ ಲಾಲ್ ಮೇಲೆ ಮರಣಾಂತಿಕಾ ಹಲ್ಲೆ ನಡೆಸಿ ಕೊಲೆಮಾಡಿರುವ  ಘಟನೆ ಸಂಪೂರ್ಣ ಭಾರತ ದೇಶ ತಲೆತಗ್ಗಿಸುವಂತೆ ಮಾಡಿದೆ.ಈ ರೀತಿಯ ಬೆಳವಣಿಗೆಗಳು ಆಗಬಾರದು ಮತ್ತು ಕೇವಲ ಧಾರ್ಮಿಕ ಮತಪಂಥಗಳ ಹೆಸರಿನಲ್ಲಿ ಕೊಲೆ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ.ಈ ಕೃತ್ಯವೇಶಗಿದ ದುಸ್ಕರ್ಮಿಗಳನ್ನು ಕಾನೂನಾತ್ಮಕವಾಗಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ನಗರ ಶಾಸಕ ಜಿ. ಸೋಮಶೇಖರ್ ರೆಡ್ಡಿ ಅವರು ತಿಳಿಸಿದರು. 

 ಕೆಲವು ರಾಜಕೀಯ ಪಕ್ಷಗಳು ಈ ರೀತಿಯ  ಸಮಾಜ ಘತುಕಾ ಕಾರ್ಯದಲ್ಲಿ ಪಾಲ್ಗೊಂಡ ವ್ಯಕ್ತಿಗಳನ್ನು ಮತ್ತು ಅವರ ಧರ್ಮವನ್ನು ವೋಟ್ ಬ್ಯಾಂಕಿಗಾಗಿ ಓಲೈಕೆ ರಾಜಕೀಯ ಮಾಡಿಕೊಂಡು ಬಂದಿರುವುದೇ ಈ ರೀತಿಯ ಕೃತ್ಯಗಳು ನಡೆಯಲು ಕಾರಣ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಅನಿಲ್ ನಾಯ್ಡು ಅವರು ಮಾತನಾಡಿ ಕಟುವಾಗಿ ಟೀಕಿಸಿದರು.   ಸಹಸ್ರರು ಸಂಖ್ಯೆಯಲ್ಲಿ ನೆರೆದ ಪ್ರತಿಭಟನೆಗಾರರು ಭಾರತ್ ಮಾತಾ ಕೀ ಜೈ ಎಂದು ಹೇಳುತ್ತಿರುವುದು ಸಾಧಾರಣವಾಗಿತ್ತು. ಪ್ರತಿಭಟನೆಯ ನಡಿಗೆಯೂ  ಗಡಗಿ ಚನ್ನಪ್ಪ ವೃತ್ತದಿಂದ ಹಳೆ ಬೆಂಗಳೂರು ರಸ್ತೆಯ ಮೂಲಕ ಸಾಗಿ, ಬ್ರಾಹ್ಮಣ ಸ್ಟ್ರೀಟ್ ಕಡೆಯಿಂದ ಜಿಲ್ಲಾಧಿಕಾರಿಗಳ ಕಚೇರಿ ತಲುಪಿ, ಮಾನ್ಯ ಜಿಲ್ಲಾಧಿಕಾರಿಗಳ ಮುಖಂತರ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಸಂಸದೆ  ಜೆ.ಶಾಂತಾ ಬುಡಾ ಅಧ್ಯಕ್ಷ ಪಿ.ಪಾಲಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಿಗೌಡ, ಪ್ರಧಾನ ಕಾರ್ಯದರ್ಶಿ ಅನಿಲ್ ನಾಯ್ಡು, ಕಾಪೆರ್ರೇ ಟರ್ಗಳಾದ ಕೋನಂಕಿ ತಿಲಕ್, ಮೊತ್ಕೂರ್ ಶ್ರೀನಿವಾಸ್, ಹೇಮಣ್ಣ, ಇಬ್ರಾಹಿಂ ಬಾಬು,ಹನುಮಂತು ಗುಡಿಗಂಟೆ ಮತ್ತು ವೀರಶೇಖರ್ ರೆಡ್ಡಿ, ಗೋವರ್ಧನ್, ಗಾದಿಲಿಂಗನಗೌಡ, ಶ್ರೀರಾಮ್, ಸೇರಿದಂತೆ ಬೃಹತ್ ಪ್ರಮಾಣದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಹಿಂದೂ ಪರ ಸಂಘಟನೆಯ ಮುಖಂಡರು ಪಾಲ್ಗೊಂಡಿದ್ದರು.



 


Post a Comment

0 Comments

Ad Code

Responsive Advertisement