Ticker

6/recent/ticker-posts

Ad Code

Responsive Advertisement

ಮಾಜಿ ಶಾಸಕ ರಾಜಣ್ಣ ಕ್ಷಮೆಯಾಚನೆಗೆ ಜೆಡಿಎಸ್ ಎಸ್ಟಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಳ್ಳಿ ತಾಯಣ್ಣ ಒತ್ತಾಯ

ಬಳ್ಳಾರಿ ಜುಲೈ 04: ದೇಶದ ಮಾಜಿ ಪ್ರಧಾನ ಮಂತ್ರಿ, ಜೆಡಿಎಸ್ ವರೀಷ್ಠರು, ಹಿರೀಯ ನಾಯಕರಾದ ಎಚ್.ಡಿ.ದೇವೇಗೌಡ ಅವರ ಬಗ್ಗೆ ಹಗುರವಾಗಿ ಮಾತನಾಡಿದ ಮಾಜಿ ಶಾಸಕ ರಾಜಣ್ಣ, ದೇವೇಗೌಡರ ಕಾಲಿಗೆ ಬಿದ್ದು ಕ್ಷಮೆಯಾಚಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಎಸ್ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಳ್ಳಿ ತಾಯಣ್ಣ ಅವರು ಒತ್ತಾಯಿಸಿದರು. 


ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡ ಅವರ ಬಗ್ಗೆ ಮಧುಗಿರಿ ಮಾಜಿ ಶಾಸಕ ರಾಜಣ್ಣ ಅವರು ನಾಲಿಗೆ ಹರಿಬಿಟ್ಟಿದ್ದು, ಇದು ಅತ್ಯಂತ ಖಂಡನೀಯ. ಕೂಡಲೇ ರಾಜಣ್ಣ ದೇವೇಗೌಡ ಜೀ ಅವರ ಕಾಲಿಗೆಬಿದ್ದು  ಬಹಿರಂಗ ಕ್ಷಮೆಯಾಚಿಸಬೇಕು, ಕಾಂಗ್ರೆಸ್ ವರೀಷ್ಠರು ರಾಜಣ್ಣ ಅವರನ್ನು ಕೂಡಲೇ ಪಕ್ಷದಿಂದ ಉಚ್ಛಾಟಿಸಬೇಕು, ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಕೈ ನಾಯಕರು ಕೂಡಲೇ ರಾಜಣ್ಣ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು, ನಿರ್ಲಕ್ಷ್ಯ ವಹಿಸಿದರೇ ಜೆಡಿಎಸ್ ಆಶ್ರಯದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. 

ದೇವೇಗೌಡ ಅವರ ಆರ್ಶಿವಾದದಿಂದಲೇ ರಾಜಣ್ಣ ರಾಜಕೀಯದಲ್ಲಿ ಜನ್ಮ ಪಡೆದಿದ್ದಾರೆ, ಅವರ ಆರ್ಶಿವಾದದಿಂದಲೇ ಶಾಸಕರಾಗಿದ್ದಾರೆ, ಎಸ್ಟಿ ಸಮುದಾಯದವರಿಗೆ ದೇವೇಗೌಡ ಅವರು ನೀಡಿದ ಕೊಡುಗೆ ಅಪಾರವಾಗಿದೆ. ರಾಜಣ್ಣ ಶಾಸಕರಾಗಿ ಹೊರಬಂದಿದ್ದು, ದೇವೇಗೌಡ ಅವರೇ ಎಸ್ಟಿ ಮೀಸಲಾತಿಯನ್ನು ತಂದಿರುವುದು ಎಂಬುದನ್ನು ಮರೆಯಕೂಡದು. ಇಡೀ ದೇಶಕ್ಕೆ ದೇವೇಗೌಡ ಅವರ ಕೊಡುಗೆ ಅಪಾರವಾಗಿದೆ.  ದೇವೇಗೌಡ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ರಾಜಣ್ಣ ಅವರಿಗೆ ಟಿಕೇಟ್ ನೀಡಿದ್ದೇ ದೇವೇಗೌಡ ಜೀ ಅವರು, ಇದನ್ನು ಮರೆತು ರಾಜಕೀಯ ದರ್ಪದಿಂದ ಈ ರೀತಿ ಹೇಳಿಕೆ ನೀಡಿರುವುದು ಖಂಡನೀಯ. ಕೂಡಲೇ ರಾಜಣ್ಣ ದೇವೇಗೌಡ ಅವರ ಕಾಲಿಗೆ ಬಿದ್ದು ಬಹಿರಂಗ ಕ್ಷಮೆಯಾಚಿಸಬೇಕು, ನಿರ್ಲಕ್ಷ್ಯ ವಹಿಸಿದರೇ ರಾಜ್ಯಾದ್ಯಂತ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.



 

Post a Comment

0 Comments

Ad Code

Responsive Advertisement