Ticker

6/recent/ticker-posts

Ad Code

Responsive Advertisement

ಸರ್ಕಾರದ ವಿರುದ್ಧ ಡಿ.ಕೆ ಶಿವಕುಮಾರ್​ ಕಿಡಿ

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಿ ರಿಪೋರ್ಟ್ ವಿಚಾರಕ್ಕೆ ಪ್ರತಿಕ್ರಿಯಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ತನಿಖೆ ಸಂದರ್ಭದಲ್ಲೇ ಸಿಎಂ, ಗೃಹ ಸಚಿವರು, ಯಡಿಯೂರಪ್ಪ ಹೇಳಿದ್ದರು. ಅವರು ಹೊರಗಡೆ ಬರ್ತಾರೆಂದು ಸರ್ಟಿಫಿಕೇಟ್ ಕೊಟ್ಟಿದ್ದರು. ಆಗ ಇನ್ನೂ ತನಿಖೆ ಪ್ರಾರಂಭವಾಗಿರಲಿಲ್ಲ. ರಾಜೀನಾಮೆಗೂ ಮುನ್ನವೇ ಆ ರೀತಿ ಹೇಳಿದ್ದರು.



ಸರ್ಕಾರ ಗೌರವ ಕಳೆದುಕೊಳ್ಳಬಾರದೆಂದು ಬಿ ರಿಪೋರ್ಟ್ ಕೊಟ್ಟಿದ್ದಾರೆ. ಸಚಿವ ಕಾರಜೋಳ ಏನಂತ ಹೇಳಿಕೆ ಕೊಟ್ಟಿದ್ದರು?. ರಮೇಶ್ ಜಾರಕಿಹೊಳಿ ಯಾವ ಹೇಳಿಕೆ ಕೊಟ್ಟಿದ್ದರು? ಸಚಿವ ಮುರುಗೇಶ್ ನಿರಾಣಿ ಅಲ್ಲಿಗೆ ಹೋಗಿ ಏನು‌ ಹೇಳಿದ್ದರು? ಅವನು ಕೆಲಸ ಮಾಡಿದ್ದಾನೆ ಅಂದಿದ್ದರು. ಸಂತೋಷ್ ಪಾಟೀಲ್‌ ಎಲ್ಲರಿಗೂ ಕಾಗದ ಬರೆದಿದ್ದ. ರಾಜ್ಯಪಾಲರು, ಪ್ರಧಾನಿಗೆ ಕಾಗದ ಬರೆದಿದ್ದ. ಅವರ ಪತ್ನಿ ಕೂಡ ರಾಜ್ಯಪಾಲರಿಗೆ ಗೌರವ ಕೊಟ್ಟರು. ನಾವು ಇದರ ಬಗ್ಗೆ ಹೋರಾಟ ಮಾಡಿದ್ದೆವು. ಈಗ ಅವರ ರಾಜೀನಾಮೆ ಪಡೆದಿದ್ರು. ಈಗ ಬಿ ರಿಪೋರ್ಟ್ ಕೊಟ್ಟಿದ್ದಾರೆ. ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತ, ನೇರವಾಗಿಯೇ ತನ್ನ ನೋವನ್ನ ಹೊರಹಾಕಿದ್ದ. ಅವರು ಏನೇ ಮುಚ್ಚಿಟ್ರು ಜನರಿಗೆ ಎಲ್ಲ ಗೊತ್ತಿದೆ ಎಂದು ಡಿ.ಕೆ ಶಿವಕುಮಾರ್​ ಹೇಳಿದ್ದಾರೆ.

Post a Comment

0 Comments

Ad Code

Responsive Advertisement