ವಾರ್ತಾಜಾಲ ಸುದ್ದಿ : ಮಧುಗಿರಿ: ಪಟ್ಟಣದ ಡಿವೈಎಸ್ಪಿ ಕಚೇರಿಗೆ ವರ್ಗಾವಣೆಯಾಗಿ ಬಂದಿರುವ ವೆಂಕಟೇಶ್ ನಾಯ್ಡು ಅವರು ಇಂದು ಅಧಿಕಾರವನ್ನು ಸ್ವೀಕರಿಸಿದರು. ಮಧುಗಿರಿಯಲ್ಲಿ ಉತ್ತಮ ರೀತಿಯಿಂದ ಕಾರ್ಯನಿರ್ವಹಿಸಿದ್ದ ಡಿವೈಎಸ್ಪಿ ರಾಮಕೃಷ್ಣಪ್ಪ ನವರು ತಮ್ಮ ಅಧಿಕಾರವನ್ನು ವೆಂಕಟೇಶ್ ನಾಯ್ಡು ಅವರಿಗೆ ಹಸ್ತಾಂತರಿಸಿ. ಮಾತನಾಡಿದ ಡಿವೈಎಸ್ಪಿ ರಾಮಕೃಷ್ಣಪ್ಪ ನವರು ಮಧುಗಿರಿಯಲ್ಲಿ ನಾನು ಕಾರ್ಯನಿರ್ವಹಿಸಿದ್ದು ಖುಷಿ ನೀಡಿದ್ದು, ಕಾಯ ವಾಚ ಮನಸ ಕಾರ್ಯನಿರ್ವಹಿಸಿದ್ದೇನೆ ಹಾಗೂ ಮಧುಗಿರಿ ಪಟ್ಟಣದಲ್ಲಿ ಉತ್ತಮ ರೀತಿಯ ಕಾರ್ಯನಿರ್ವಹಿಸಿದ್ದು ನನಗೆ ತೃಪ್ತಿ ತಂದಿದೆ ಎಂದು ಹೇಳಿದರು.
ಜೊತೆಗೆ ಪೊಲೀಸ್ ಠಾಣೆಯ ಎಲ್ಲಾ ಅಧಿಕಾರಿಗಳು ಮತ್ತು ಕಚೇರಿಯ ಎಲ್ಲಾ ಅಧಿಕಾರಿಗಳು ಉತ್ತಮವಾದ ಸಹಕಾರ ನೀಡಿದ್ದು, ಪ್ರಸ್ತುತ ಆಗಮಿಸಿರುವ ಡಿವೈಎಸ್ಪಿ ವೆಂಕಟೇಶ್ ನಾಯ್ಡು ಅವರಿಗೂ ಸಹ ನನಗೆ ಸಹಕಾರ ನೀಡಿದಂತೆ ಇನ್ನು ಹೆಚ್ಚಾಗಿ ಅವರಿಗೆ ಸಹಕಾರವನ್ನು ನೀಡಬೇಕಾಗಿ ಸಹೋದ್ಯೋಗಿಗಳಲ್ಲಿ ವಿನಂತಿಸಿದರು.
ಮಧುಗಿರಿ ಪೊಲೀಸ್ ಠಾಣೆಯ ಸಿಪಿಐ ಆದ ಎಂ ಎಸ್ ಸರ್ದಾರ್ ಖಾನ್ ಅವರು ಮಾತನಾಡಿ, ರಾಮ ಕೃಷ್ಣಪ್ಪನವರು ಉತ್ತಮವಾದ ಕಾರ್ಯನಿರ್ವಹಿಸಿದ್ದು ಜನರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿದ್ದಾರೆ. ಹಾಗೆಯೇ ನಾವುಗಳು ಪ್ರಸ್ತುತ ಆಗಮಿಸಿರುವ ಡಿವೈಎಸ್ಪಿ ಅವರಿಗೆ ಸಹಕಾರ ನೀಡುವುದಾಗಿ ತಿಳಿಸಿದರು. ಮಧುಗಿರಿ ಠಾಣೆ ಮತ್ತು ಉಪಾಧೀಕ್ಷಕರ ಕಚೇರಿಯ ಸಹದ್ಯೋಗಿಗಳು ತಮ್ಮನ್ನು ಬರಮಾಡಿಕೊಂಡ ಬಗ್ಗೆ ಖುಷಿಯನ್ನು ವ್ಯಕ್ತಪಡಿಸಿದ ನೂತನ ಡಿವೈಎಸ್ಪಿ ಕೆ ಎಸ್ ವೆಂಕಟೇಶ್ ನಾಯ್ಡು ರವರು ಮಾತನಾಡಿ ಉತ್ತಮವಾಗಿ ಕಾರ್ಯನಿರ್ವಹಿಸುವುದಾಗಿ ತಮ್ಮೆಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು. ಈ ವೇಳೆಯಲ್ಲಿ ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ, ಪಾವಗಡ ಗ್ರಾಮಂತರ ಸಿಪಿಐ ಕಾಂತರಾಜು, ಬಡವನಹಳ್ಳಿ ಸಿಪಿಐ ಹನುಮಂತರಾಯಪ್ಪ, ಹಾಗೂ ಪಿಎಸ್ಐ ಗಳಾದ ಮಧುಗಿರಿ ರಮೇಶ್, ಕೊಡಿಗೇನಹಳ್ಳಿ ನಾಗರಾಜ್, ಕೊರಟಗೆರೆಯ ನಾಗರಾಜು, ಮಂಜುಳಾ, ಕೊಳಲ ಮಹಾಲಕ್ಷ್ಮಿ ಸಿಬ್ಬಂದಿ ವರ್ಗದವರು ಮತ್ತು ಕೆಲವರು ಮುಖಂಡರುಗಳು ಮತ್ತಿತರರಿದ್ದರು.
ವರದಿ:ನಾಗೇಶ್ ಜೀವಾ ಮಧುಗಿರಿ.
ವಾರ್ತಾಜಾಲ ಸುದ್ದಿ.
.jpeg)


0 Comments