Ticker

6/recent/ticker-posts

Ad Code

Responsive Advertisement

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಈಶ್ವರಪ್ಪಗೆ ಕ್ಲೀನ್ ಚೀಟ್

ಶಿವಮೊಗ್ಗ (ಜು.20): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ (Santhosh Patil) ಪ್ರಕರಣದಲ್ಲಿ (Suicide Case)  ಕೆ.ಎಸ್​ ಈಶ್ವರಪ್ಪಗೆ ಕ್ಲೀನ್ ಚೀಟ್ (Clean Chit)) ಸಿಕ್ಕ ಹಿನ್ನಲೆ ಈಶ್ವರಪ್ಪ ನಿವಾಸದಲ್ಲಿ ಸಂತಸ ಮನೆ ಮಾಡಿದೆ.


ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಶಾಸಕ ಕೆ.ಎಸ್ ಈಶ್ವರಪ್ಪ, ಇವತ್ತು ಸಂತೋಷ್ ಆತ್ಮಹತ್ಯೆ ಪ್ರಕರಣ ಬಿ ರಿಪೋರ್ಟ್ ಬಂದಿದೆ.ಬಿ ರಿಪೋರ್ಟ್ ನಲ್ಲಿ ನಾನೂ ಆರೋಪ ಮುಕ್ತವಾಗಿ ಹೊರಬಂದಿದಿದ್ದೇನೆ. ಯಾವುದೇ ಪಾತ್ರವಿಲ್ಲ ಎಂದು ಬಂದಿರಿವುದು ತುಂಬಾ ಸಂತೋಷವಾಗಿದೆ ಎಂದ್ರು. ಇದೇ ರೀತಿಯೇ ರಿಪೋರ್ಟ್ ಬರುತ್ತದೆ ಎಂದು ಕೇಸ್ ಬಿದ್ದಿದ ದಿನನೇ ಗೊತ್ತಿತ್ತು. ಈ ಆತ್ಮಹತ್ಯೆಗೂ ನನಗೂ 1% ಸಂಬಂಧ ಇಲ್ಲ ಎಂದು ಹೇಳಿದ್ದೆ. ಈ ಆರೋಪದಿಂದ ಹೊರಬರುತ್ತೇನೆ ಎಂದು ಅವತ್ತು ಹೇಳಿದ್ದೆ.


ನನ್ನ ಮನೆ ದೇವರು ಮೇಲೆ ನನಗೆ ನಂಬಿಕೆ ಇದೆ. ನಾನೂ ಏನಾದರೂ ತಪ್ಪು ಮಾಡಿದ್ದರೆ ನನ್ನ ಮನೆ ದೇವರು ಚೌಡೇಶ್ವರಿ ಶಿಕ್ಷೆ ಕೊಡುತ್ತಿದ್ದಳು. ನನ್ನಿಂದ ನನ್ನ ಪಕ್ಷದ ನಾಯಕರಿಗೆ ಸರ್ಕಾರಕ್ಕೆ ಮುಜುಗರ ಆಗಿತ್ತು. ಇದರಿಂದ ಎಲ್ಲರೂ ಈ ಮುಜುಗರದಿಂದ ಮುಕ್ತರಾಗಿದ್ದಾರೆ ಎನ್ನುವುದು ಇವತ್ತಿನ ಸಂತೋಷ. ಎಲ್ಲ ಸಾಧೂ ಸಂತರು ನನ್ನ ಮನೆಗೆ ಬಂದು ಹರಸಿದ್ದರು. ಸಚಿವ ಸ್ಥಾನ ಕೊಡುವುದು ಬಿಡುವುದು ನನ್ನ ಕೈಯಲ್ಲಿ ಇಲ್ಲ, ಪಕ್ಷಕ್ಕೆ ಬಿಟ್ಟಿದ್ದು.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಿಎಂ ಕೆ.ಎಸ್​ ಈಶ್ವರಪ್ಪಗೆ ಕ್ಲೀನ್ ಚೀಟ್ ಸಿಕ್ಕ ಹಿನ್ನಲೆ ಮಾಜಿ ಸಚಿವ ಈಶ್ವರಪ್ಪ ನಿವಾಸದಲ್ಲಿ ಸಂತಸ ಮನೆ ಮಾಡಿದೆ. ಪತ್ನಿ, ಪುತ್ರನಿಗೆ ಸಿಹಿ ತಿನಿಸಿ ಸಂತೋಷ ಹಂಚಿಕೊಂಡ ಈಶ್ವರಪ್ಪ. ಏನೂ ತಪ್ಪು ಮಾಡದ ನನ್ನ ಮೇಲೆ ಬಂದ ಆರೋಪದಲ್ಲಿ ನನ್ನ ಪಾತ್ರವಿಲ್ಲ ಎಂದು ಮೊದಲೇ ಹೇಳಿದ್ದೇ. ಸಂತೋಷ್ ಪಾಟೀಲ್ ಪತ್ನಿಗೆ ಯಾರೋ ಪ್ರಚೋದಿಸಿ ರಾಜ್ಯಪಾಲರಿಗೆ ದೂರು ಕೊಡಿಸಿದ್ದಾರೆ.

ಪಕ್ಷ ನೀಡುವ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ನಾನು ಯಾವುದೇ ಹುದ್ದೆ ಬಯಸಿಲ್ಲ. ಬಯಸುವುದೂ ಇಲ್ಲ. ಪಕ್ಷದ ನಾಯಕರ ತೀರ್ಮಾನಕ್ಕೆ ನಾನು ಬದ್ಧ. ನಾನು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ಪಕ್ಷದ ಹಿರಿಯರ, ಮಠಾಧೀಶರ ಆಶೀರ್ವಾದ ನನಗೆ ಇದೆ. ಅನೇಕ ಹಿರಿಯರು ಮಠಾಧೀಶರು ನನಗೆ ಕರೆ ಮಾಡಿ ಶುಭಾಶಯ ಕೋರುತ್ತಿದ್ದಾರೆ. 

Post a Comment

0 Comments

Ad Code

Responsive Advertisement