ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್.ಷಡಾಕ್ಷರಿರವರ ಮನವಿಯಂತೆ ಗ್ರಾಮೀಣ ಕೃಪಾಂಕದಡಿ ವಿಶೇಷ ನಿಯಮದನ್ವಯ ನೇಮಕಗೊಂಡ ಶಿಕ್ಷಕರ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ದಿನಾಂಕ : 06-07-2022ರಂದು ಮಾನ್ಯ ಶಿಕ್ಷಣ ಸಚಿವರಾದ ಶ್ರೀ ಬಿ.ಸಿ.ನಾಗೇಶ್ ರವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಸಭೆ ಜರುಗಿತು . ಈ ಸಭೆಯಲ್ಲಿ ಈ ಕೆಳಕಂಡ ನಿರ್ಣಯಗಳನ್ನು ಕೈಗೊಳ್ಳಲಾಯಿತು .
1) ಗೌರವಾನ್ವಿತ ಸುಪ್ರೀಂ ಕೋರ್ಟ್ ಹಾಗೂ ಕೆ.ಎ.ಟಿ ನ್ಯಾಯಲಯದ ನಿರ್ದೇಶನದಂತೆ ಪರಿಷ್ಕøತ ಆಯ್ಕೆ ಪಟ್ಟಿಯನ್ನು ತಯಾರಿಸಿ ಅರ್ಹ ಕೃಪಾಂಕ ಶಿಕ್ಷಕರುಗಳಿಗೆ ನ್ಯಾಯ ದೊರಕಿಸಿಕೊಡಲು ಹಾಗೂ ಲಭ್ಯವಾಗುವ ಸೇವಾ ಸೌಲಭ್ಯಗಳನ್ನು ಪೂರ್ವಾನ್ವಯವಾಗುವಂತೆ ಮಂಜೂರು ಮಾಡುವ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಯಿತು.
2) ತತ್ಪರಿಣಾಮ, ಪರಿಷ್ಕøತ ಪಟ್ಟಿ ಸ್ಥಾನ ಪಡೆಯದೆ ಗ್ರಾಮೀಣ ಕೃಪಾಂಕದಡಿ ವಿಶೇಷ ನಿಯನಗಳನ್ವಯ ನೇಮಕಾತಿ ಹೊಂದುವಂತಹ ಶಿಕ್ಷಕರಿಗೆ ದಿಣಾಂಕ: 13-03-2013 ರಂದು ನಡೆದ ಸಚಿವ ಸಂಪುಟದ ನಿರ್ಣಯದಂತೆ 2 ವಾರ್ಷಿಕ ವೇತನ ಬಡ್ತಿಗಳನ್ನು ಪೂರ್ವಾನ್ವಯವಾಗುವಂತೆ ಮಂಜೂರು ಮಾಡುವ ಬಗ್ಗೆ ಅಗತ್ಯ ಮಾಹಿತಿ ಪಡೆದು ಕ್ರಮವಹಿಸಲು ಸೂಚಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿಯವರು, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಸೆಲ್ವಕುಮಾರ್, ಶಿಕ್ಷಣ ಇಲಾಖೆಯ ಅಧಿಖಾರಿಗಳು ಹಾಗೂ ಕೇಂದ್ರ ಸಂಘದ ಗೌರವಾಧ್ಯಕ್ಷರಾದ ಶ್ರೀ ವೆಂಕಟೇಶಯ್ಯ, ಹಿರಿಯ ಉಪಾಧ್ಯಕ್ಷರಾದ ಶ್ರೀ ಎಂ.ವಿ. ರುದ್ರಪ್ಪ, ಕಾರ್ಯದರ್ಶಿಗಳಾದ ಶ್ರೀ ಶಿವಲಿಂಗಯ್ಯ ಹಾಗೂ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
.jpeg)
0 Comments