ಉದ್ಯಮದಲ್ಲೇ ಮೊದಲು ಎನಿಸಿದ ‘ಆಧುನಿಕ - ರೆಟ್ರೊ' ಮೋಟಾರ್‍ಸೈಕಲ್ ಅನ್ನು ಬಿಡುಗಡೆ ಮಾಡುವ ಮೂಲಕ ಪ್ರೀಮಿಯಂ ಜೀವನಶೈಲಿಯ ವಿಭಾಗಕ್ಕೆ ಲಗ್ಗೆ
* ಟಿವಿಎಸ್ ರೋನಿನ್ ಮೋಟಾರ್‍ಸೈಕ್ಲಿಂಗ್ ಜಗತ್ತಿನಲ್ಲಿ ತನ್ನದೇ ಆದ ವಿಭಾಗವನ್ನು ರಚಿಸಲು ಟಿವಿಎಸ್ ಮೋಟಾರ್ ವತಿಯಿಂದ ಮೊದಲ ಪ್ರೀಮಿಯಂ ಜೀವನಶೈಲಿ ಕೊಡುಗೆ ಆಗಿದೆ * ಟಿವಿಎಸ್ ರೋನಿನ್: #ಅನ್‍ಸ್ಕ್ರಿಪ್ಟ್ ಜೀವನ ವಿಧಾನವನ್ನು ಅನುಸರಿಸುತ್ತಿರುವವರಿಗೆ
ಶೈಲಿ, ಸವಾರಿ ಸೌಕರ್ಯ ಮತ್ತು ತಂತ್ರಜ್ಞಾನದ ಪರಿಪೂರ್ಣ ಸಂಯೋಜನೆ
* ಟಿವಿಎಸ್ ರೋನಿನ್ ಕೇವಲ ಮತ್ತೊಂದು ಮೋಟಾರ್ ಸೈಕಲ್‍ಗಿಂತಲೂ ಹೆಚ್ಚಾಗಿರುವುದು ಮಾತ್ರವಲ್ಲದೇ ಇದು ವಿಶ್ವ ದರ್ಜೆಯ ಸರಕುಗಳು ಮತ್ತು ಪರಿಕರಗಳು, ಕಾನ್ಫಿಗರೇಟರ್ ಮತ್ತು ವಿಶೇಷ ಅನುಭವ ಕಾರ್ಯಕ್ರಮದೊಂದಿಗೆ ವಿಭಿನ್ನ ಪರಿಸರ ವ್ಯವಸ್ಥೆಯನ್ನು ನೀಡುತ್ತದೆ
ಜುಲೈ 06, 2022: ಜಾಗತಿಕವಾಗಿ ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳ ಪ್ರತಿಷ್ಠಿತ ತಯಾರಕರಾದ ಟಿವಿಎಸ್ ಮೋಟಾರ್ ಕಂಪನಿಯು ಉದ್ಯಮದ ಮೊದಲ ‘ಆಧುನಿಕ-ರೆಟ್ರೋ' ಮೋಟಾರ್‍ಸೈಕಲ್ - ಟಿವಿಎಸ್ ರೋನಿನ್ ಅನ್ನು ಬಿಡುಗಡೆ ಮಾಡುವುದರೊಂದಿಗೆ ಪ್ರೀಮಿಯಂ ಜೀವನ ಶೈಲಿ ವಿಭಾಗಕ್ಕೆ ಇಂದು ಲಗ್ಗೆಯಿಟ್ಟಿದೆ. ವಿನ್ಯಾಸಗೊಳಿಸಿದ ಗ್ರೌಂಡ್ ಅಪ್ ಹೊಂದಿದ ಟಿವಿಎಸ್ ರೋನಿನ್ ಒಂದು ಜೀವನಶೈಲಿಯ ವರ್ಣನೆ ಎನಿಸಿದ್ದು, ಆಧುನಿಕ, ಹೊಸ ಯುಗದ ಸವಾರರಿಂದ ಸ್ಫೂರ್ತಿ ಪಡೆದಿದೆ. ಟಿವಿಎಸ್ ರೋನಿನ್ ಅನ್ನು ಅವರ್ಣನೀಯ ಜೀವನಶೈಲಿಯನ್ನು ಉತ್ತೇಜಿಸಲು ಶೈಲಿ, ತಂತ್ರಜ್ಞಾನ ಮತ್ತು ವಿಶೇಷ ಸವಾರಿ ಅನುಭವದೊಂದಿಗೆ ವಿನ್ಯಾಸಗೊಳಿಸಲಾಗಿದೆ.
ಟಿವಿಎಸ್ ಮೋಟರ್‍ನ 110 ವರ್ಷಗಳ ಬಲವಾದ ಪರಂಪರೆ ಮತ್ತು ಪ್ರಮುಖ ತಂತ್ರಜ್ಞಾನ ಮತ್ತು ನಾವೀನ್ಯತೆ, ಇದೀಗ ಹೊಸ ಜೀವನ ವಿಧಾನವಾದ ಟಿವಿಎಸ್ ರೋನಿನ್‍ಅನ್ನು ಪ್ರಾರಂಭಿಸುವುದರೊಂದಿಗೆ ಇದನ್ನು ಮುಂದಕ್ಕೆ ಕೊಂಡೊಯ್ಯಲಾಗುತ್ತದೆ. ಪ್ರೀಮಿಯಂ ಲೈಫ್‍ಸ್ಟೈಲ್ ಮೋಟಾರ್‍ಸೈಕ್ಲಿಂಗ್‍ನ ವಿಭಾಗಕ್ಕೆ ಕಂಪನಿಯ ಪ್ರವೇಶವನ್ನು ಗುರುತಿಸುವ ಮೂಲಕ ಮೋಟಾರ್‍ಸೈಕಲ್ ಹೊಸ ರೈಡಿಂಗ್ ವಿಧಾನವನ್ನು ತರುವ ಬದ್ಧತೆಯ ವಿಸ್ತರಣೆಯಾಗಿದೆ. ಟಿವಿಎಸ್ ರೋನಿನ್‍ನ ಬಹುಮುಖ ವೈಶಿಷ್ಟ್ಯಗಳು, ವಿಶಿಷ್ಟ ವಿನ್ಯಾಸ ಮತ್ತು ಆಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸಲ್ಪಟ್ಟಿದ್ದು, ಭೂಪ್ರದೇಶಗಳಾದ್ಯಂತ ಒತ್ತಡ ಮುಕ್ತ ಸವಾರಿ ಅನುಭವಗಳನ್ನು ಖಚಿತಪಡಿಸುತ್ತದೆ. ಡ್ಯುಯಲ್- ಚಾನೆಲ್ ಎಬಿಎಸ್, ಧ್ವನಿ ನೆರವು ಮತ್ತು ವರ್ಧಿತ ಸಂಪರ್ಕದಂತಹ ಪ್ರಭಾವಶಾಲಿ ತಂತ್ರಜ್ಞಾನ ಮತ್ತು ಅನುಕೂಲತೆಯ ವೈಶಿಷ್ಟ್ಯಗಳೊಂದಿಗೆ ಮೋಟಾರ್‍ಸೈಕಲ್ ಪ್ರಪ್ರಥಮ ಎನಿಸಿದೆ. ಇನ್ನೊಂದು ಪ್ರಥಮ ವೈಶಿಷ್ಟ್ಯವೆಂದರೆ, ಟಿವಿಎಸ್ ರೋನಿನ್ ಬ್ರ್ಯಾಂಡೆಡ್ ವಿಶ್ವ ದರ್ಜೆಯ ಸರಕುಗಳು ಮತ್ತು ವಿಶೇಷ ಅಗತ್ಯತೆಗೆ ಅನುಗುಣವಾಗಿ ರೂಪಿಸಿದ ಬಿಡಿಭಾಗಗಳು, ಕಾನ್ಫಿಗರೇಟರ್ ಮತ್ತು ಮೀಸಲಾದ ಅನುಭವ ಕಾರ್ಯಕ್ರಮದ ವಿಶೇಷ ಶ್ರೇಣಿ.
ವಿನೂತನ ವಾಹನ ಬಿಡುಗಡೆಯ ಕುರಿತು ಪ್ರತಿಕ್ರಿಯಿಸಿದ ಟಿವಿಎಸ್ ಮೋಟಾರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸುದರ್ಶನ್ ವೇಣು, "ಹೊಸ ಟಿವಿಎಸ್ ರೋನಿನ್ ಬಿಡುಗಡೆಯು ಟಿವಿಎಸ್ ಮೋಟಾರ್‍ಗೆ ಮಹತ್ವದ ಮೈಲಿಗಲ್ಲು. ಟಿವಿಎಸ್ ರೋನಿನ್ ಮೋಟಾರ್‍ಸೈಕಲ್ ಅನ್ನು ಖಾಲಿ ಕ್ಯಾನ್ವಾಸ್‍ನಿಂದ ವಿನ್ಯಾಸಗೊಳಿಸಲಾಗಿದ್ದು, ಇಂದಿನ ಸ್ವಾಭಾವಿಕ, ದ್ರವ, ಮತ್ತು ಬಹುಮುಖಿ ಯುವ ರೈಡರ್‍ನ ಪ್ರತಿಬಿಂಬವಾಗಿದೆ. ಇದು ಪ್ರಯಾಸವಿಲ್ಲದ ಮತ್ತು ಅವರ್ಣನೀಯ ಸವಾರಿ ಅನುಭವವನ್ನು ಸೃಷ್ಟಿಸಲು ವಿನ್ಯಾಸಗೊಳಿಸಲಾಗಿದೆ. ಟಿವಿಎಸ್ ಬ್ರ್ಯಾಂಡ್‍ಗೆ ನಿಜವಾಗಿ ಇದು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಂಪರ್ಕವನ್ನು ಹೊಂದಿದೆ. ಟಿವಿಎಸ್ ರೋನಿನ್ ಜೀವನಶೈಲಿ ಪಾಲುದಾರರಾಗಿದ್ದು, ವಿಶೇಷ ಶ್ರೇಣಿಯ ಸರಕುಗಳು ಮತ್ತು ಪರಿಕರಗಳು, ಸವಾರಿ ಸಮುದಾಯ ಮತ್ತು ಪ್ರಯಾಸವಿಲ್ಲದ ಗ್ರಾಹಕೀಕರಣ ಪ್ರಕ್ರಿಯೆಯೊಂದಿಗೆ ಪೂರ್ಣಗೊಂಡಿದೆ" ಎಂದು ವಿವರ ನೀಡಿದರು.
ಟಿವಿಎಸ್ ಮೋಟಾರ್ ಕಂಪನಿಯ ಶ್ರೀ ವಿಮಲ್ ಸುಂಬ್ಲಿ, ಹೆಡ್ ಬ್ಯುಸಿನೆಸ್ - ಪ್ರೀಮಿಯಂ ಅವರು ಪ್ರತಿಕ್ರಿಯಿಸಿ, "ಜಾಗತಿಕ ಮಟ್ಟದಲ್ಲಿ ಮೋಟಾರ್‍ಸೈಕ್ಲಿಂಗ್ ಬದಲಾಗುತ್ತಿದೆ. ಇದು ಕ್ರಿಯಾತ್ಮಕ ಉದ್ದೇಶದಿಂದ ಸ್ವಯಂ ಅಭಿವ್ಯಕ್ತಿ, ಸ್ವಾತಂತ್ರ್ಯ ಮತ್ತು ಅನ್ವೇಷಿಸುವ ಇಚ್ಛೆಯನ್ನು ಸಕ್ರಿಯಗೊಳಿಸಲು ಚಲಿಸುತ್ತಿದೆ. ನಮ್ಮ ಗ್ರಾಹಕರು ಅವರ್ಣನೀಯ ಪ್ರಯಾಣಗಳನ್ನು ಪಟ್ಟಿ ಮಾಡುವ ಅಗತ್ಯದಿಂದ ಪ್ರೇರಿತರಾಗಿ, ಟಿವಿಎಸ್ ರೋನಿನ್ ಸ್ಟೀರಿಯೊ ಟೈಪ್‍ಗಳು, ದಿನಾಂಕದ ಕೋಡ್‍ಗಳು ಮತ್ತು ಪರಂಪರೆಯ ಸಾಮಾನು ಸರಂಜಾಮುಗಳಿಂದ ಮುಕ್ತವಾದ ಉದಯೋನ್ಮುಖ ಜೀವನಶೈಲಿಯ ಆಧಾರದ ಮೇಲೆ ಹೊಸ ವಿಭಾಗವನ್ನು ರೂಪಿಸಿದೆ. ಈ ಮೂಲಕ ಪ್ರೀಮಿಯಮೀಕರಣವನ್ನು ಹೆಚ್ಚು ಹೆಚ್ಚು ವೈಯಕ್ತೀಕರಣವಾಗಿ ಪರಿವರ್ತಿಸಿ, ದ್ವಿಚಕ್ರ ವಾಹನ ವಿಭಾಗದಲ್ಲಿ ಟ್ರೆಂಡ್ ಸೃಷ್ಟಿಸುತ್ತಿದೆ. ಮೋಟಾರ್‍ಸೈಕಲ್ ನಮ್ಮ ಗ್ರಾಹಕರಿಗೆ ಪ್ರೀಮಿಯಂ ಜೀವನಶೈಲಿಯ ಅನುಭವವನ್ನು ತರುತ್ತದೆ, ವಿಭಿನ್ನ ಬ್ರಾಂಡ್ ಪರಿಸರ ವ್ಯವಸ್ಥೆಯನ್ನು ನೀಡುತ್ತದೆ. ನಮ್ಮ ಗ್ರಾಹಕರು ಈ ಮೋಟಾರ್‍ಸೈಕಲ್‍ನ ವಿಶಿಷ್ಟ ರೈಡಿಂಗ್ ಪಾತ್ರವನ್ನು ಮೆಚ್ಚುತ್ತಾರೆ ಎಂದು ನನಗೆ ಖಾತ್ರಿಯಿದೆ" ಎಂದು ಅಭಿಪ್ರಾಯಪಟ್ಟರು.
ಟಿವಿಎಸ್ ರೋನಿನ್ ಮೂರು ರೂಪಾಂತರಗಳಲ್ಲಿ ಲಭ್ಯವಿರುತ್ತದೆ - ಟಿವಿಎಸ್ ರೋನಿನ್ SS, ಟಿವಿಎಸ್ ರೋನಿನ್ DS ಮತ್ತು ಉನ್ನತ ರೂಪಾಂತರವಾದ ಟಿವಿಎಸ್ ರೋನಿನ್ TD. ಇದು ಜುಲೈ 2022 ರಿಂದ ದೇಶಾದ್ಯಂತ ಆಯ್ದ ಡೀಲರ್‍ಶಿಪ್‍ಗಳಲ್ಲಿ ಲಭ್ಯವಿರುತ್ತದೆ.
ಹೊಸ ಟಿವಿಎಸ್ ರೋನಿನ್‍ನ ಮುಖ್ಯಾಂಶಗಳು
ಸಂಪೂರ್ಣ ಹೊಸ ಜೀವನಶೈಲಿ
* ಭೂಪ್ರದೇಶದಾದ್ಯಂತ ಆರಾಮದಾಯಕ ಸವಾರಿ ಅನುಭವ
* ಟಿವಿಎಸ್ ರೋನಿನ್ ಕಲ್ಟ್ - ಅಲ್ಲಿ ಸಂಸ್ಕøತಿ, ಜೀವನಶೈಲಿ ಮತ್ತು ಪ್ರಯಾಣವು ಜೀವಂತವಾಗಿದೆ
ಡಿಜಿಟಲ್ ರೈಡಿಂಗ್ ಅನುಭವ
* ಪ್ರಯಾಸವಿಲ್ಲದ ಗ್ರಾಹಕೀಕರಣಕ್ಕಾಗಿ ಸಂಯೋಜಿತ
* SmartXonnect ಜೊತೆಗೆ ಡಿಜಿಟಲ್ ಕ್ಲಸ್ಟರ್
* ಟಿವಿಎಸ್ ARIVE ಅಪ್ಲಿಕೇಶನ್ ಮೂಲಕ AR ಅನುಭವ
ವಿಶೇಷವಾದ ಮಚರ್ಂಡೈಸ್ ಮತ್ತು ಪರಿಕರಗಳು
* ವ್ಯಾಪಕ ಶ್ರೇಣಿಯ ಸರಕುಗಳು ಮತ್ತು ಸವಾರಿ ಗೇರ್
* ವಿಶೇಷ ಪರಿಕರಗಳೊಂದಿಗೆ ಕ್ಯುರೇಟೆಡ್ ಕಿಟ್‍ಗಳು
ಹೊಸ ಟಿವಿಎಸ್ ರೋನಿನ್‍ನ ಪ್ರಮುಖ ಲಕ್ಷಣಗಳು
ಶೈಲಿಯಲ್ಲಿ ಹೊಸ ಕಥೆ
* ಎಲ್ಲ ಎಲ್‍ಇಡಿ ಲ್ಯಾಂಪ್‍ಗಳು
* ವಿಶೇಷ ಟಿ - ಆಕಾರದ ಪೈಲಟ್ ದೀಪ
* ಅಸಮವಾದ ಸ್ಪೀಡೋಮೀಟರ್
* ಎಕ್ಸಾಸ್ಟ್ ಮತ್ತು ಮಫ್ಲರ್ ವಿನ್ಯಾಸ
* ಚೈನ್ ಕವರ್
* 9 ಸ್ಪೋಕ್ ಅಲಾಯ್ ವೀಲ್ಸ್
* ಬ್ಲಾಕ್ ಟ್ರೆಡ್ ಟೈರ್‍ಗಳು
ತಂತ್ರಜ್ಞಾನದ ಸ್ಥಿತಿ
* ಡಿಜಿಟಲ್ ಕ್ಲಸ್ಟರ್ (DTE- ಖಾಲಿ ಆಗಲು ಅಂತರ, ETA- ಆಗಮನದ ಅಂದಾಜು ಸಮಯ, ಗೇರ್ ಶಿಫ್ಟ್ ಅಸಿಸ್ಟ್, ಸೈಡ್ ಸ್ಟ್ಯಾಂಡ್ ಇಂಜಿನ್ ಇನ್ಹಿಬಿಟರ್, ಸರ್ವಿಸ್ ಡ್ಯು ಸೂಚನೆ, ಕಡಿಮೆ ಬ್ಯಾಟರಿ ಸೂಚಕ)
* ವಾಯ್ಸ್ ಅಸಿಸ್ಟ್
* ಟರ್ನ್ ಬೈ ಟರ್ನ್ ನ್ಯಾವಿಗೇಷನ್
* ಒಳಬರುವ ಕರೆ ಎಚ್ಚರಿಕೆ / ಸ್ವೀಕರಣೆ
* ಕಸ್ಟಮ್ ವಿಂಡೋ ಅಧಿಸೂಚನೆ
* ಟಿವಿಎಸ್ SmartXonnect ಅಪ್ಲಿಕೇಶನ್‍ನಲ್ಲಿ ಸವಾರಿ ವಿಶ್ಲೇಷಣೆ
ಪ್ರಯಾಸವಿಲ್ಲದ ಅನುಭವ ಸವಾರಿ
* ಮಳೆ ಮತ್ತು ನಗರ ಎಬಿಎಸ್ ವಿಧಾನಗಳು
* ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ (ISG) - ಕಡಿಮೆ ಶಬ್ದದ ಗರಿ ಸ್ಪರ್ಶ ಪ್ರಾರಂಭ
* ಅಪ್‍ಸೈಡ್ ಡೌನ್ ಫ್ರಂಟ್ ಫೋರ್ಕ್ (USD)
* ಹಿಂದಿನ ಬದಿಯ ಮೊನೊಶಾಕ್
* ಗ್ಲೈಡ್ ಥ್ರೂ ಟೆಕ್ನಾಲಜಿ (GTT)
* ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್
* 3-ಹಂತದ ಹೊಂದಾಣಿಕೆ ಮಾಡಬಹುದಾದ ಲಿವರ್
About TVS Motor Company
TVS Motor Company is a reputed two and three-wheeler manufacturer globally, championing progress through Sustainable Mobility with four state-of-the-art manufacturing facilities in Hosur, Mysuru and Nalagarh in India and Karawang in Indonesia. Rooted in our 100-year legacy of Trust, Value, and Passion for Customers and Exactness, we take pride in making internationally aspirational products of the highest quality through innovative and sustainable processes. We are the only two-wheeler company to have received the prestigious Deming Prize. Our products lead in their respective categories in the J.D. Power IQS and APEAL surveys. We have been ranked No. 1 Company in the J.D. Power Customer Service Satisfaction Survey for consecutive four years. Our group company Norton Motorcycles, based in the United Kingdom, is one of the most emotive motorcycle brands in the world. Our subsidiaries in the personal e-mobility space, Swiss E-Mobility Group (SEMG) and EGO Movement have a leading position in the e-bike market in Switzerland. TVS Motor Company endeavours to deliver the most superior customer experience across 80 countries in which we operate. For more information, please visit www.tvsmotor.com.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಸಂಪರ್ಕಿಸಿ:
ಕೆಎಸ್ ಹರಿಣಿ - ks.harini@tvsmotor.com
%20Mr%20Vimal%20Sumbly,%20Head%20Business%20-%20Premium,%20TVS%20Motor%20Company%20and%20Mr.%20R.%20Babu,%20Vice%20President,%20R&D,%20TVS%20Motor%20Company%20at%20the%20launch%20of%20TVS%20RONIN.jpg)


0 Comments