Ticker

6/recent/ticker-posts

Ad Code

Responsive Advertisement

ಏಒಈ ಕಚೇರಿಯಲ್ಲಿ ಅಗ್ನಿ ಅವಘಡ,!! ಲಕ್ಷಾಂತರ ಮೌಲ್ಯದ ಕಂಪ್ಯೂಟರ್ ಲೆಕ್ಕಪತ್ರ ಸಾಮಾಗ್ರಿಗಳ ಭಸ್ಮ

ಬಳ್ಳಾರಿ ಜುಲೈ 07. ನಗರದ ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಹಾಲು ಉತ್ಪಾದಕ ಅಡಳಿತ ಕಚೇರಿಯಲ್ಲಿ ಬುದುವಾರ ಬೆಳಗಿನ ಜಾವ ಆಕಸ್ಮಿಕ ಅಗ್ನಿ ಪ್ರಮಾದ ಸಂಭವಿಸಿದ್ದು, ಲಕ್ಷಾಂತರ ರುಗಳ ಸಾಮಗ್ರಿಗಳು ಭಸ್ಮ ಆಗಿವೆ. ಕಂಪ್ಯೂಟರ್, ಲೆಕ್ಕಪತ್ರಗಳ ಕಚೇರಿ ಸಂಪೂರ್ಣವಾಗಿ ಸುಟ್ಟು ಬೂದಿ ಆಗಿದೆ. ಏಒಈ ನ  ಮೂರು ಜಿಲ್ಲೆಗಳ ಲೆಕ್ಕಾಚಾರಗಳು ಇದೆ ಕಚೇರಿ ದಿಂದ ನೋಡಲಾಗುತ್ತದೆ. ಆಕಸ್ಮಿಕವಾಗಿ ನಡೆದ ಅಗ್ನಿ ಅವಘಡದಿಂದ ಕಚೇರಿಯ ಲೆಕ್ಕಾಚಾರಗಳು ಯಾಲ್ಲವು ಬೂದಿ ಯಾಗಿದ್ದು, ಅಧಿಕಾರಿಗಳು ಏನು ಮಾಡದೆ ಕೈ ಕಟ್ಟಿಕಂಡು ನೋಡುವ ಪರಿಸ್ಥಿತಿ ಆಗಿದೆ. 


ಈ ಅವಘಡ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ವಿದ್ಯುತ್ ಕಟ್ ಸಕ್ರ್ಯೂಟ್ ದಿಂದ ಅಪಾಯ ಆಗಿದ್ದರೆ, ಸ್ಥಳದಲ್ಲಿ ವಿದ್ಯುತ್ ಕಡಿತ ಆಗಬೇಕು ಆಗಿತ್ತು. ಈ ಅವಘಡ,ಆಕಸ್ಮಿಕ ಅಲ್ಲ ವೆಂದು ಇದು ಉದ್ದೇಶ ಪೂರ್ವಕವಾಗಿ ಮಾಡಿರಬಹುದು ಎಂಬ ಅನುಮಾನಗಳು ಕಾಣುತ್ತವೆ!!. ಕಚೇರಿ ತುಂಬಾ ಸಿಸಿ ಕ್ಯಾಮರಾ ಗಳು ಇದ್ದಾವೆ, ಉದ್ದೇಶ ಪೂರ್ವಕವಾಗಿ ಮಾಡಿದ್ದರೆ,ಯಾಲ್ಲವು ಅದರಲ್ಲಿ ಸಿಗಬೇಕು ಅಗಿದೆ. ಇತ್ತೀಚಿನ ದಿನಗಳಲ್ಲಿ ಒಕ್ಕೂಟದ ಮೇಲೆ ಕೆಲ ಲೆಕ್ಕಾಚಾರಗಳು ವಿಚಾರದಲ್ಲಿ ದೊಡ್ಡ ಮಟ್ಟದ ಅವ್ಯವಹಾರಗಳು ಕೇಳಿ ಬಂದಿದ್ದವು. ಕೆಲ ಸದಸ್ಯರು ಅದನ್ನು ತನಿಖೆ ನಡೆಸುವಂತೆ ಮೀಟಿಂಗ್ ನಲ್ಲಿ ಒತ್ತಾಯ ಮಾಡಿದ್ದರು, ಅದನ್ನು ಸರಿಪಡಿಸಲು ಏನಾದರೂ ಇಂತಹ ಪ್ರಯತ್ನ ಮಾಡಿರಬಹುದು ಅನ್ನುವ ಅನುಮಾನಗಳು ಇದ್ದಾವೆ. ಎರಡು ದಿನಗಳ ಹಿಂದೆ ಒಕ್ಕೂಟಕ್ಕೆ ಡೈರೆಕ್ಟರ್ ಹೊಸಬರು ಬಂದಿದ್ದಾರೆ. ಅವರು ಇನ್ನೂ ಲೆಕ್ಕಾಚಾರಗಳು ನೋಡದೆ ಇರುವ ಸಮಯದಲ್ಲಿ ಅವಘಡ ಸಂಭವಿಸಿದ್ದು, ಅಚ್ಚರಿ ಅಗಿದೆ.!!. ಈ ಕಥೆ ಏನಾಗುತ್ತದೆ ಎಂದು ಜನರು ಕಾದು ನೋಡಬೇಕಾಗಿದೆ.



 

Post a Comment

0 Comments

Ad Code

Responsive Advertisement