Ticker

6/recent/ticker-posts

Ad Code

Responsive Advertisement

ಗೊಲ್ಲರ ಯಾದವ ಸಂಘದ ಚುನಾವಣೆ ಪ್ರಚಾರ

 ಬಳ್ಳಾರಿ.ಜು.07: ಜೂಲೈ 10ನೇ ತಾರೀಖಿನಂದು ಬಳ್ಳಾರಿ ನಗರದ ಕುಮಾರಸ್ವಾಮಿ ಗುಡಿ ಹತ್ತಿರ ಇರುವ ನಂದಗೋಕುಲ ಶಾಲೆಯಲ್ಲಿ ನಡೆಯುವ ಬಳ್ಳಾರಿ ಜಿಲ್ಲಾ ಗೊಲ್ಲರ ಯಾದವ ಸಂಘದ ಚುನಾವಣೆ ಪ್ರಯುಕ್ತ ಪೂಜಾರಿ ಗಾದೆಪ್ಪ, ಚಿದಾನಂದಪ್ಪ ಮತ್ತು 25 ಜನರ ತಂಡದಿಂದ ಪ್ರಚಾರದ ಮೂರನೇ ದಿನವಾದ ಇಂದು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಪೋತನಾಳ್, ಕೊಂಚಿಗೇರಿ, ಶಾನವಾಸಪುರ, ಅರಳಿಗನೂರು, ದಾಸಪುರ, ಸಿಂದಿಗೇರಿ, ಮತ್ತು ದಮ್ಮೂರು ಗ್ರಾಮದ ಗೊಲ್ಲ ಸಂಘದ ಅಜೀವ ಸದಸ್ಯರನ್ನು ಭೇಟಿ ಮಾಡಿ ಗಾದೆಪ್ಪ ಮತ್ತು ಚಿದಾನಂದಪ್ಪ ತಂಡದ 25 ಮಂದಿ ಅಭ್ಯರ್ಥಿಗಳು ಮತ ಯಾಚಿಸಿದರು.  

ಈ ಸಂದರ್ಭದಲ್ಲಿ ಪೂಜಾರಿ ಗಾದೆಪ್ಪ, ಚಿದಾನಂದಪ್ಪ, ಗಿರಿಯಾದವ್, ಲಕ್ಷ್ಮಿ ನಾರಾಯಣ್, ಲಿಂಗರಾಜ್, ಸಿರುಗುಪ್ಪ ಪಟ್ಟಣದ ಖ್ಯಾತ ವೈದ್ಯರಾದ ಮಧುಸೂಧನ್ ಕಾರಿಗನೂರ್, ಹಚ್ಚೊಳ್ಳಿ ಗ್ರಾಮದ ಯಾದವ ಮುಖಂಡರಾದ ಫಕ್ಕೀರಪ್ಪ, ಸಿದ್ದಲಿಂಗಪ್ಪ, ನಾಗರಾಜ್ ಸೇರಿದಂತೆ ಹಲವಾರು ಯಾದವ ಸಮಾಜದ ಮುಖಂಡರಿದ್ದರು.  

ಕೆ ಇ ಚಿದಾನಂದಪ್ಪ, ಗೊಲ್ಲರ ಸಂಘದ ಹಾಲಿ ಜಿಲ್ಲಾ ಕಾರ್ಯದರ್ಶಿ ಇನ್ನಿತರರು ಉಪಸ್ಥಿತರಿದ್ದರು.




 

Post a Comment

0 Comments

Ad Code

Responsive Advertisement