Ticker

6/recent/ticker-posts

Ad Code

Responsive Advertisement

ಶ್ರೀ ಶಾರದಾಂಬ ಸಭಾಂಗಣ ಮತ್ತು ಶ್ರೀ ಶಂಕರ ಸೇವಾ ಸಮಿತಿ ರಸ್ತೆ ಲೋಕರ್ಪಣೆ

ಅಜ್ಞಾನದಿಂದ,ಜ್ಞಾನದ ಕಡೆಗೆ ಮತ್ತು ಸಂಕಲ ಸಂಕಷ್ಟ ನಿವಾರಣೆಗೆ ಶಂಕರಚಾರ್ಯರ ಮಾರ್ಗದರ್ಶನದಲ್ಲಿ ಸಾಗಬೇಕು-ಶೃಂಗೇರಿ ಮಠದ ಜಗದ್ದುರು ಶ್ರೀ ಶ್ರೀವಿಧುಶೇಖರಭಾರತೀ ಸ್ವಾಮೀಜಿ

ರಾಜಾಜಿನಗರ ಶ್ರೀ ಶಂಕರ ಸೇವಾ ಸಮಿತಿ ವತಿಯಿಂದ ಶ್ರೀ ಶಾರದಾಂಬ ಸಭಾಂಗಣ ಉದ್ಘಾಟನೆ ಮತ್ತು ಶ್ರೀ ಶಂಕರ ಸೇವಾ ಸಮಿತಿ ರಸ್ತೆ ಲೋಕರ್ಪಣೆ ಹಾಗೂ  ಗುರುವಂದನಾ ಕಾರ್ಯಕ್ರಮ.

ಶಾರದಾಂಬ ಸಭಾಂಗಣ ಉದ್ಘಾಟನೆಯನ್ನು ಶೃಂಗೇರಿ ಮಠದ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರಭಾರತೀ ಮಹಾಸ್ವಾಮಿಗಳು  ನೇರವೆರಿಸಿದರು.

ಶೃಂಗೇರಿ ಮಠ ಆಡಳಿತಾಧಿಕಾರಿ,ಪದ್ಮಶ್ರೀ ಪುರಸ್ಕೃತ ವಿ.ಆರ್.ಗೌರಿಶಂಕರ್ ರವರು,ಮಾಜಿ ಶಿಕ್ಷಣ ಸಚಿವರು,ಶಾಸಕರಾದ ಎಸ್.ಸುರೇಶ್ ಕುಮಾರ್ ರವರು,ಶ್ರೀ ಶಂಕರ ಸೇವಾ ಸಮಿತಿ ಅಧ್ಯಕ್ಷರಾದ ಆರ್.ಲಕ್ಷ್ಮೀಕಾಂತ್ ರವರು ಪಾಲ್ಗೊಂಡಿದ್ದರು.

ಶೃಂಗೇರಿ ಮಠದ ಜಗದ್ಗುರುಗಳಾದ  ಶ್ರೀ ಶ್ರೀ ವಿಧುಶೇಖರ ಸ್ವಾಮಿಗಳು ಮಾತನಾಡಿ ಜಗದ್ದುರು ಶಂಕರಚಾರ್ಯರು  ಲೋಕಕ್ಕೆ ಅನುಗ್ರಹ ಮಾಡಿದ್ದಾರೆ .

ಮನುಷ್ಯ ಜೀವನಕ್ಕೆ ಶಾಶ್ವತ ಶೇಯಸ್ಸು ಮತ್ತು ನೆಮ್ಮದ್ದಿ ಜೀವನಕ್ಕೆ ಶಂಕರಚಾರ್ಯ ಮಾರ್ಗದರ್ಶನ ಮಾಡಿದ್ದಾರೆ.

ಎಲ್ಲ ಕಷ್ಟಗಳ ನಿವಾರಣೆ,ಪರಮಾತ್ಮ ಸೇರಲು ಭಗತ್ಪಾದರು ಹೇಳಿದ್ದಾರೆ.




ಅಜ್ಞಾನವನ್ನು ತೊಲಗಿಸಲು,ಸಂಕಷ್ಟಗಳ ಪರಿಹಾರಕ್ಕೆ ಮಾರ್ಗದರ್ಶನವನ್ನು ಶಂಕರಚಾರ್ಯರು ಕೊಟ್ಟಿದ್ದಾರೆ.

ಅಜ್ಞಾನದ ಕತ್ತಲಿನಿಂದ ಜನರ ಸಂಕಷ್ಟ ಅನುಭವಿಸುತ್ತಿದ್ದಾರೆ , ಜ್ಞಾನವಿಲ್ಲದಿದ್ದರೆ ಅಜ್ಞಾನಿ ಬಹಳ ಕಷ್ಟ ಅನುಭವಿಸುತ್ತಾರೆ. ಮನುಷ್ಯನ ಅಜ್ಞಾನವನ್ನು ಹೊಗಲಾಡಿಸಲು ಜ್ಞಾನದಿಂದ ಮಾತ್ರ. ಎಲ್ಲ ಸಂಕಷ್ಟಗಳಿಗೆ ಪರಿಹಾರ ನೀಡಿದವರು ಶಂಕರಚಾರ್ಯ ಎಂದು ಹೇಳಿದರು.

ಶೃಂಗೇರಿ ಮಠಕ್ಕೆ ಸಾವಿರಾರು ವರ್ಷ ಇತಿಹಾಸ,ಪರಂಪರೆ ಇದೆ. ನಮ್ಮ ದೇಶ ಮತ್ತು ರಾಜ್ಯ ಅಭಿವೃದ್ದಿಯಾಗಲು ಸಾಧು ಸಂತರ,ಕೊಡುಗೆ ಅಪಾರ.  ಇಡಿ ರಾಜಾಜಿನಗರಕ್ಕೆ ಸಂತೋಷ ಸಮಯ ಪೂಜ್ಯ ಶ್ರೀಗಳ ಆಗಮನದಿಂದ , ಶಂಕರಚಾರ್ಯ ಸ್ಪೂರ್ತಿ ಚೇತನ . ಎಂದು ಶಾಸಕ ಎಸ್.ಸುರೇಶ್ ಕುಮಾರ್ ಹೇಳಿದರು.

ಶಿಕ್ಷಣ ಸಚಿವನಾಗಿದ್ದ ಸಂದರ್ಭದಲ್ಲಿ ಕೊವಿಡ್ ಸಂಕಷ್ಟದ ಸಮಯದಲ್ಲಿ ಎಸ್.ಎಸ್.ಎಲ್.ಸಿ.ಪರೀಕ್ಷೆ ಸಕಾಲಕ್ಕೆ ಮಾಡಲು ಶ್ರೀ ಶಾರದಾಂಬ ಶಕ್ತಿ ಕಾರಣ ಎಂದು ಹೇಳಿದರು

 ವಿ.ಆರ್.ಗೌರಿಶಂಕರ್ ಮಾತನಾಡಿ ಶಂಕರ ಸೇವಾ ಸಮಿತಿ ಶೃಂಗೇರಿ ಮಠದ ಮನೆಯಂತೆ . ರಾಜಾಜಿನಗರ ಶಂಕರ ಸೇವಾ ಸಮಿತಿ ನಾಡಿನ ಸಂಸ್ಕೃತಿ ಸಂಪ್ರಾದಯ ಉಳಿಸುವಲ್ಲಿ ಶ್ರಮಿಸುತ್ತಿದೆ. ಶಂಕರ ಪೀಠದ ಮಹಾಸ್ವಾಮೀಜಿಗಳ ಗುರುಪೀಠದಿಂದ ಸಂಸ್ಕೃತಿ ಉಳಿಯಲು ಸಾಧ್ಯವಾಗಿದೆ ಎಂದು ಹೇಳಿದರು.

ಶ್ರೀ ಶಂಕರ ಸೇವಾ ಸಮಿತಿ ಅಧ್ಯಕ್ಷರಾದ ಲಕ್ಷ್ಮೀಕಾಂತ್ ರವರು ಮಾತನಾಡಿ ರಾಷ್ಟ್ರ ಮತ್ತು ರಾಜ್ಯದ ಒಳಿತಿಗಾಗಿ ಶೃಂಗೇರಿ ಶ್ರೀಗಳು ಪ್ರವಾಸ ಮಾಡುತ್ತಿದ್ದಾರೆ.

ಶ್ರೀ ಶಾರದಾಂಬ ಸಭಾಂಗಣ ಶ್ರೀಗಳ ಕೃಪೆಯಿಂದ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ವಿಧುಶೇಖರ ಮಹಾಸ್ವಾಮಿಗಳ ದರ್ಶನ ಎಲ್ಲರ ಭಕ್ತರಿಗೆ ಸಿಗಲಿ. ಜನರ ಸಂಕಷ್ಟಗಳ ನಿವಾರಣೆಯಲ್ಲಿ ಎಂದು ಪ್ರಾರ್ಥಿಸುತ್ತೇನೆ.

ರಾಜಾಜಿನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ರಾಘವೇಂದ್ರರಾವ್,ಮಾಜಿ ಬಿ.ಬಿ.ಎಂ.ಪಿ.ಸದಸ್ಯರಾದ ದೀಪಾ ನಾಗೇಶ್,ಬಿ.ಜೆ.ಪಿ.ಮುಖಂಡರಾದ ಬಿ.ಎನ್.ಶ್ರೀನಿವಾಸ್,ಸತೀಶ್ ಭಗವಾನ್,ಯಶಸ್ ನಾಯಕ್,ಕಿರಣ್ ಮತ್ತು ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರುಗಳಾದ ರಾಮಪ್ರಸಾದ್,ಅಶೋಕ್ ಕುಮಾರ್, ನಾಗಭೂಷಣ್, ಹರಿಪ್ರಸಾದ್, ರಾಘವೇಂದ್ರ, ಶ್ಯಾಮ್ ಪ್ರಸಾದ್ ರವರು ಪಾಲ್ಗೊಂಡಿದ್ದರು.

Post a Comment

0 Comments

Ad Code

Responsive Advertisement