ಮಧುಗಿರಿ : ಪಟ್ಟಣದಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿಧ್ಯಾರ್ಥಿನಿಯನ್ನು ರೋಡ್ ರೋಮಿಯೋ ಒಬ್ಬ ಚುಡಾಯಿಸಿದ್ದಲ್ಲದೆ ಪ್ರೀತಿಸುವಂತೆ ಒತ್ತಾಯಿಸಿದ ಘಟನೆ ಬುಧವಾರ ಮಧ್ಯಾಹ್ನ ಕ್ಯಾಂಪಸ್ ನ ರಸ್ತೆಯಲ್ಲಿ ನಡೆದಿದ್ದರ ಪರಿಣಾಮ ವಿದ್ಯಾರ್ಥಿನಿಯ ಸಹೋದರರು ಮತ್ತು ಗುಂಪಿನಿಂದ ರಾತ್ರಿ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಥಳಿಸಿದ ಘಟನೆ ನಡೆದಿದೆ.
ಸೋಗೇನಹಳ್ಳಿ ಗೊಲ್ಲರಹಟ್ಟಿಯ ಹುಡುಗ ಶೆಟ್ಟಿಹಳ್ಳಿ ತಾಂಡಾದ ಪದವಿ ವಿಧ್ಯಾರ್ಥಿನಿಯನ್ನು ಪ್ರೀತಿಸುವಂತೆ ಅಗಾಗ್ಗೆ ಒತ್ತಾಯಿಸುತ್ತಿದ್ದನಂತೆ. ಪ್ರತಿನಿತ್ಯ ತನ್ನ ಸ್ವಂತ ದ್ವಿಚಕ್ರ ವಾಹನದಲ್ಲಿ ಈಕೆಯನ್ನು ಹಿಂಬಾಲಿಸುವುದೇ ಕೆಲಸವಾಗಿತ್ತು. ಗುರುವಾರದಂದು ಅತಿರೇಕಕ್ಕೆ ಹೋಗಿದ್ದು ನೊಂದ ವಿಧ್ಯಾರ್ಥಿನಿ ಆಕೆಯ ಸಹೋದರರಿಗೆ ಮಾಹಿತಿ ನೀಡಿದ್ದಾಳೆ. ಸಹೋದರ ಮತ್ತು ರೋಡ್ ರೋಮಿಯೋ ನಡುವೆ ದೂರವಾಣಿಯಲ್ಲಿ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಕ್ರೀಡಾಂಗಣದಲ್ಲಿ ಆತನನ್ನು ಥಳಿಸಿ ತಾಂಡಾಕ್ಕೆ ಕರೆದೊಯ್ದು ಕಾಲಿಗೆರಗಿಸಿ ಕ್ಷಮೆ ಕೇಳಿಸಿದ್ದಾರೆ. ಆದರೆ ತಲೆಗೆ ಪೆಟ್ಟಾಗಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಗಾಯಾಳುವಿನ ತಾಯಿ ಥಳಿಸಿದ್ದವ ವಿರುದ್ಧ ದೂರು ನೀಡಿದ್ದಾರೆ.

0 Comments