Ticker

6/recent/ticker-posts

Ad Code

Responsive Advertisement

"ಪ್ರೇಕ್ಷಕರ ಮನಗೆದ್ದ ಕಿಶೋರಿಗಳ ಗಾಯನ"

ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಶ್ರೀ ವಾಸವಿ ದೇವಸ್ಥಾನದಲ್ಲಿ ರಜತ ಮಹೋತ್ಸವ, ಕುಂಭಾಭಿಷೇಕ ಮತ್ತು ಶ್ರೀ ಸಾಯಿ ಮಂದಿರ ಪ್ರತಿಷ್ಠಾಪನೆಯ ಪ್ರಯುಕ್ತ  ಜುಲೈ 2, ಶನಿವಾರ ಏರ್ಪಡಿಸಿದ್ದ "ಭಕ್ತಿಗೀತೆಗಳ ಗಾಯನ" ಕಾರ್ಯಕ್ರಮದಲ್ಲಿ  ಕು|| ಅನ್ವಿತಾ ಸಾವಿತ್ರಿ ಮತ್ತು ಕು|| ಅನುಷಾ ಸಾವಿತ್ರಿ ಸಹೋದರಿಯರು, ಮೊದಲಿಗೆ, "ವಿನಾಯಕ ವಿನಾಯಕ" ಎಂಬ ಕೃತಿಯಿಂದ ವಿಘ್ನೇಶ್ವರನನ್ನು ಪ್ರಾರ್ಥಿಸುತ್ತಾ ತಮ್ಮ ಗಾಯನವನ್ನು ಆರಂಭಿಸಿ, "ಬಾರೋ ನಮ್ಮ ಮನೆಗೆ", "ಪಾಲಿಸೆಮ್ಮ ಮುದ್ದು ಶಾರದೆ", "ಶರಣು ಶರಣು", "ಇಂದ್ರಿಯಗಳನ್ನಿತ್ತೆ" (ಉಗಾಭೋಗ), "ದೃಷ್ಟಿ ನಿನ್ನ ಪಾದದಲ್ಲಿ", "ದಾರಿ ತೋರೆನಗೆ", "ಗೆಜ್ಜೆಯ ಕಟ್ಟಿ", "ವಾಣಿಯೇ ವೀಣಾ ಪಾಣಿ", "ಕಮಲೇ ಕೋಮಲೇ", "ತಿರುಪತಿ ವೆಂಕಟರಮಣ", "ತಾರಕ್ಕ ಬಿಂದಿಗೆ", "ಕಾದಿರುವಳು ಶಬರಿ", "ರಂಗನಾಥನ ನೋಡುವಾ ಬನ್ನಿ", "ಶರಣು ಶೇಷಾಚಲ", "ಮಾಮವತು ಶ್ರೀ ಸರಸ್ವತಿ" ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ, ವಿಜಯದಾಸರ ರಚನೆಯಾದ "ತೊಳಸದಕ್ಕಿಯ ತಿಂಬ ಕಿಲುಬು ತಳಿಗೆಯಳುಂಬ" ಎಂಬ ಕೃತಿಯೊಂದಿಗೆ ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.


 ನಂತರ ದೇವಸ್ಥಾನದ ಪದಾಧಿಕಾರಿಗಳು ಮಕ್ಕಳು ಸಂಗೀತ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಹೆಚ್ಚು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿ, ದೇವಿಯ ಪ್ರಸಾದ ವಿತರಿಸಿದರು.

Post a Comment

0 Comments

Ad Code

Responsive Advertisement