Ticker

6/recent/ticker-posts

Ad Code

Responsive Advertisement

ಧಾರವಾಡ: ವಿಶ್ವ ಮಾಧ್ಯಮ ಚರ್ಕವರ್ತಿ ಪ್ರಶಸ್ತಿ ಪ್ರಧಾನ

ದಿನಾಂಕ:-20/7/2022 ರಂದು ಧಾರವಾಡದ ರಂಗಾಯಣ ಸಭಾ ಭವನದಲ್ಲಿ ವಿಶ್ವ ದರ್ಶನ ದಿನ ಪತ್ರಿಕೆಯ ವಾರ್ಷಿಕೋತ್ಸವದ ಸಮಾರಂಭದಲ್ಲಿ ಸಂಪಾದಕರಾದ ಡಾ.ಎಸ್ಎಸ್.ಪಾಟೀಲ್ ನೇತೃತ್ವ ಜೊತೆಗೆ ದಿವ್ಯ ಸಾನಿಧ್ಯವನ್ನು ಧಾರವಾಡದ ಮುರುಘಾ ಮಠದ ಶ್ರೀ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಗಜೇಂದ್ರಗಡ ಕಾಲಜ್ಞಾನ ಮಠದ  ಶ್ರೀ ಡಾ.ಬ್ರಹ್ಮ ಸದ್ಗುರು ಶರಣಬಸವ ಮಹಾಸ್ವಾಮಿಗಳು,ಬದಾಮಿ ಶ್ರೀಸಿದ್ದರಾಮೇಶ್ವಮಠದ ಶ್ರೀವೀರಯ್ಯ ಮಹಾಸ್ವಾಮಿಗಳು,ಶ್ರೀಆರೂಢದರ್ಶನ ಜ್ಞಾನಪ್ರಕಾಶ ಆಶ್ರಮದ ಶ್ರೀವಿದ್ಯಾನಂದ ಮಹಾಸ್ವಾಮಿಗಳು,ಶ್ರೀಸಿದ್ದಾರೂಢ ಮಠದ ಶ್ರೀಭೀಮಾನಂದ ಮಹಾಸ್ವಾಮಿಗಳು,ಸಿದ್ದಾರೂಢಾಶ್ರಮದ ಶ್ರೀಶಿವಲಿಂಗಾನಂದ ಮಹಾಸ್ವಾಮಿಗಳು ಹಾಗೂ ಹಾಲಯ್ಯ ಶಿವಯೋಗಿಗಳ‌ ಮಠದ ಶ್ರೀಹಾಲಯ್ಯ ಮಹಾಸ್ವಾಮಿಗಳ ಆರ್ಶೀವಾದಗಳೊಂದಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ರವರಿಗೆ ವಿಶ್ವ ಮಾಧ್ಯಮ ಚರ್ಕವರ್ತಿ ಪ್ರಶಸ್ತಿಯನ್ನು ವಿತರಿಸಲಾಯಿತು.




ಕಾರ್ಯಕ್ರಮದ ಉದ್ಗಾಟನೆಯನ್ನು ಮಾಜಿ ಯೋಧರಾದ ಶ್ರೀಕೋರಗಲ್ ಮಠ ನೆರವೇರಿಸಿದರು,ಅತಿಥಿಗಳಾಗಿ ಡಾ.ಎ.ಡಿ.ಕೋಟ್ನಾಳ ಹಾಗೂ ಇನ್ನೀತರ ಗಣ್ಯಮಾನ್ಯರು ವಹಿಸಿದ್ದಂತ ಈ ಸಮಾರಂಭದಲ್ಲಿ ವಿವಿಧ ಪ್ರಶಸ್ತಿಗೆ ಆಯ್ಕೆಯಾದಂತವರೆಲ್ಲರಿಗೂ ಸನ್ಮಾನಿಸಲಾಯಿತು. ನೆರದಂತ ಜನತೆಗೆ ಗ್ರಾಮೀಣ ಸೊಬಗಿನ ನೃತ್ಯಗಳು ಹಾಗೂ ಡೊಳ್ಳಿನ ಪದಗಳು ಮನರಂಜಿಸಿದವು.

Post a Comment

0 Comments

Ad Code

Responsive Advertisement