ಉಡುಪಿ: ಉಡುಪಿ ಶ್ರೀ ಪಲಿಮಾರು ಮಠದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಧೀಶ ಶ್ರೀಪಾದರ 44ನೆಯ ಚಾತುರ್ಮಾಸ್ಯ ಸ್ವಾಗತ ಸಮಾರಂಭವನ್ನು ಇದೇ ದಿನಾಂಕ 23ರ ಶನಿವಾರದಂದು ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ಮಲ್ಲೇಶ್ವರದ ಶಾಖಾ ಮಠದಲ್ಲಿ ಕಾರ್ಯಕ್ರಮ ಆಯೋಜಿಸಿರುವುದು.
ಅದೇ ದಿನ ಸಂಜೆ 4-00 ಗಂಟೆಗೆ ಭವ್ಯ ಶೋಭಾ ಯಾತ್ರೆ ನಡೆಸಲು ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶೋಭಾ ಯಾತ್ರೆಯು ಮಲ್ಲೇಶವರ ಕಾಡು ಮಲ್ಲೇಶ್ವರ ದೇವಾಲಯದಿಂದ ಪಲಿಮಾರು ಮಠದ ಪಟ್ಟದ ದೇವರೊಂದಿಗೆ ಶ್ರೀ ಶ್ರೀ ಪಾದಂಗಳವರ ಮೆರವಣಿಗೆ ನೆರವೇರಲಿದೆ ಎಂದು ಚಾತುರ್ಮಾಸ್ಯ ಕಾರ್ಯಕಾರಿ ಸಮಿತಿಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
ಸಂಜೆ 5.30 ಗಂಟೆಗೆ ಸಭಾ ಕಾರ್ಯಕ್ರಮಗಳು ನೆರವೇರಲಿದ್ದು ವಿಶೇಷ ಆಹ್ವಾನಿತರಾಗಿ ಉನ್ನತ ಶಿಕ್ಷಣ ಸಚಿವರು ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು ಮಲ್ಲೇಶ್ವರ ಶಾಸಕರೂ ಆದ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಕಾಡುಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷರಾದ ಬಿ.ಕೆ. ಶಿವರಾಂ ಅವರು ಉಪಸ್ಥಿತರಿರುವರು. ಡಾ. ಆನಂದ ತೀರ್ಥಾಚಾರ್ ನಾಗ ಸಂಪಿಗೆ ಸಂಶೋಧಕರು, ಪೂರ್ಣಪ್ರಜ್ಞ ಸಂಶೋಧನಾ ಮಂದಿರ, ಬೆಂಗಳೂರು ಇವರು ಅಭಿನಂದನಾ ಭಾಷಣ ನೀಡಲಿದ್ದಾರೆ.
ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾಧೀಶ ಶ್ರೀಪಾದಂಗಳವರು ಅನಗ್ರಹ ಸಂದೇಶ ನೀಡಲಿದ್ದಾರೆ.

0 Comments