ಬಳ್ಳಾರಿ ಜು.05: ಸಂಶೋಧನ ತರಬೇತಿ ಕಾರ್ಯಾಗಾರಗಳು ಕ್ಷೇತ್ರಕಾರ್ಯ ಕೈಗೊಳ್ಳುವ ಸಂಶೋಧಕರಿಗೆ, ಪೂರ್ವಸಿದ್ದತೆ ಬಹಳ ಮುಖ್ಯ ಮತ್ತು ಅಗತ್ಯವೂ ಕೂಡ ಎಂದು ಕನ್ನಡ ವಿಶ್ವವಿದ್ಯಾಲಯದ ಮಾನ್ಯಕುಲಪತಿಗಳಾದ ಡಾ. ಸ.ಚಿ. ರಮೇಶ ಅವರು ಕೇಂದ್ರದ ಆವರಣದ ಮುಂದೆ ಸಸಿ ನೆಡುವುದರ ಮೂಲಕ ಉದ್ಘಾಟಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರವು ದಿನಾಂಕ 4.7.2022ರಿಂದ 7.7.2022ರ ವರೆಗೆ ಕೇಂದ್ರದಲ್ಲಿ ನಡೆಯಲಿರುವ 4 ದಿನಗಳ ಸಂಶೋಧನಾ ಸಹಾಯಕರ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಂಜಾರ ಸಾಂಸ್ಕøತಿಕ ಪದ ವಿವರಣಾಕೋಶದ ಅಗತ್ಯತೆ ಕುರಿತು ಮಾತನಾಡಿದ ಅವರು ಸಮುದಾಯ ಹಾಗೂ ನಮ್ಮ ಪೂರ್ವಿಕರ ಜ್ಞಾನ ಪರಂಪರೆಯನ್ನು ಹಾಗೂ ಸಾಂಸ್ಕøತಿಕ ಅನನ್ಯತೆಯನ್ನು ಸರಿಯಾದ ಕ್ರಮದಲ್ಲಿ ಅರ್ಥೈಸುವ ಮತ್ತು ದಾಖಲಿಸುವ ಕೆಲಸವಾಗಬೇಕಾಗಿದೆ. ಆದಕಾರಣ ಇಂತಹ ಈ ಹಿನ್ನೆಯಲ್ಲಿ ಕೇಂದ್ರವು ಸೂಕ್ತ ನಿರ್ಧಾರವನ್ನು ಕೈಗೊಂಡಿದೆ.
ಬಂಜಾರ ಸಾಂಸ್ಕøತಿಕ ಪದ ವಿವರಣಾಕೋಶದ ಯೋಜನೆ ಕುರಿತು ಪ್ರಾಸ್ತಾವಿಕವಾಗಿ ಬಂಜಾರ ಸಂಸ್ಕøತಿ, ಆಚಾರ-ವಿಚಾರ, ರೂಡಿ, ಸಂಪ್ರದಾಯ ಹಾಗೂ ಸಂಕೇತಗಳನ್ನು ಅರ್ಥೈಸಿ ಪರಿಪೂರ್ಣವಾಗಿ ದಾಖಲಿಸುವ ಮೂಲಕ ಸಮುದಾಯದ ಮುಂದಿನ ಪೀಳಿಗೆಗೆ ಸಾಂಸ್ಕøತಿಕ ಚಹರೆಗಳು, ಜ್ಞಾನ ಪರಂಪರೆಗಳನ್ನು ಉಳಿಸಬೇಕಾಗಿದೆ ಎಂದು ಕೇಂದ್ರದ ನಿರ್ದೇಶಕರಾದ ಡಾ. ಸಣ್ಣರಾಮ ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕುಲಸಚಿವರಾದ ಡಾ. ಎ. ಸುಬ್ಬಣ್ಣ ರೈ ಅವರು ಉಪಸ್ಥಿತರಿದ್ದರು. ಸಂಶೋಧನಾ ಅಧಿಕಾರಿಗಳಾದ ಡಾ.ರಮೇಶ ಕೆ, ಡಾ.ಕೆ.ಆರ್. ಕೇಶವಮೂರ್ತಿ, ಸಂಶೋಧನಾ ಸಹಾಯಕರು ಹಾಗೂ ಕೇಂದ್ರದ ಸಿಬ್ಬಂದಿಗಳು ಹಾಜರಿದ್ದರು.
0 Comments