Ticker

6/recent/ticker-posts

Ad Code

Responsive Advertisement

ಮುಸ್ಲಿಂ ಬಾಂಧವರು ಕಾನೂನಿನ ಚೌಕಟ್ಟಿನೊಳಗೆ, ಮತ್ತೊಬ್ಬರಿಗೆ ತೊಂದರೆಯಾಗದಂತೆ ಹಬ್ಬ ಆಚರಿಸಿ- ಸುರೇಶ್ ಎಚ್.ತಳವಾರ್

ಬಳ್ಳಾರಿ (ಕಂಪ್ಲಿ)ಜು.05: ಮುಸ್ಲಿಂ ಸಮುದಾಯದವರ ಅತ್ಯಂತ ಪವಿತ್ರ ಹಬ್ಬಗಳಲ್ಲಿ ಒಂದಾದ ಬಕ್ರೀದ್ ಹಬ್ಬವನ್ನು ನಾಡಿನಾದ್ಯಂತ ಜು.10ರಂದು ಆಚರಿಸಲಿದ್ದು, ಮುಸ್ಲಿಂ ಬಾಂಧವರು ಕಾನೂನು ಚೌಕಟ್ಟಿನೊಳಗೆ, ಮತ್ತೊಬ್ಬರಿಗೆ ತೊಂದರೆಯಾಗದಂತೆ ಹಬ್ಬವನ್ನು ಆಚರಿಸಬೇಕು ಎಂದು ಕಂಪ್ಲಿ ಪಿಐ ಸುರೇಶ ಎಚ್ ತಳವಾರ್ ತಿಳಿಸಿದರು. ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ತ ಸೋಮವಾರ  ಸಂಜೆ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ ಹಬ್ಬ ಹರಿದಿನಗಳು ಮಾನಸಿಕ,ಶಾಂತಿ,ನೆಮ್ಮದಿ ಹಾಗೂ ಸಂತೋಷವನ್ನು ಉಂಟು ಮಾಡಲಿವೆ ಆದರೆ, ಇವುಗಳ ನೆಪದಲ್ಲಿ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಸಮಾಜಿಕ ಜಾಲತಾಣಗಳಲ್ಲಿ ಬರುವ ಸಂಗತಿಗಳನ್ನೇ ನೆಪವಾಗಿಟ್ಟುಕೊಂಡು ಕೋಮು ಸಂಘರ್ಷಕ್ಕೆ ಯಾರೂ ಅವಕಾಶ ಮಾಡಿಕೊಡಬಾರದು, ಇಂತಹ ಕೆಲಸಗಳಲ್ಲಿ ತೊಡಗುವ ಯುವಕರ ಮೇಲೆ ಸಮಾಜದ ಮುಖಂಡರು ಜಾಗ್ರತೆ ವಹಿಸಬೇಕು, ಇಂತವರ ಬಗ್ಗೆ ಮುಂಚಿತವಾಗಿ ಪೊಲೀಸರಿಗೆ ಸೂಕ್ತ ಮಾಹಿತಿಗಳನ್ನು ನೀಡಬೇಕೆಂದರಲ್ಲದೆ, 10 ರಂದು ನಡೆಯುವ ಪವಿತ್ರ ಬಕರೀದ್ ಹಬ್ಬಕ್ಕೆ ಪೊಲೀಸ್ ಇಲಾಖೆ ಸಕಲ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದು, ಈದ್ಗಾ ಮೈದಾನದಲ್ಲಿ ನಡೆಯುವ ಸಾಮೂಹಿಕ ಪ್ರಾರ್ಥನೆ ಅಗತ್ಯವಾದ ಬಂದೋಬಸ್ತ್ ಏರ್ಪಡಿಸುವುದರ ಜೊತೆಗೆ ಆಯಕಟ್ಟಿನ ಸ್ಥಳಗಳಲ್ಲಿ ಸಿಬ್ಬಂದಿಗಳ ಕಾವಲನ್ನು ಏರ್ಪಡಿಸಲಾಗುವುದು ಎಂದರು.


ಇದುವರೆಗೂ ತಾಲ್ಲೂಕಿನಲ್ಲಿ ಯಾವುದೇ ಹಬ್ಬ ಹರಿದಿನಗಳಲ್ಲಿ ಅಹಿತಕರ ಘಟನೆಗಳು ಸಂಭವಿಸಿಲ್ಲ, ಮುಂದೆಯೂ ಸಂಭವಿಸುವುದು ಬೇಡೆ ಎಲ್ಲಾ ಸಮುದಾಯದವರು ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಜೀವನ ನಡೆಸಬೇಕೆಂದರು. ಪ್ರಾರ್ಥನೆ ನಂತರ ಹಸ್ತ ಲಾಘವ, ಆಲಿಂಗನ ಮಾಡಬಾರದು, ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿವಧೆ ಮಾಡುವಂತಿಲ್ಲ, ಪಶು ಪಾಲನಾ ಇಲಾಖೆಯ ಪರವಾನಿಗಯೊಂದಿಗೆ ಪ್ರಾಣಿವಧೆಯನ್ನು ಮಾಡಬೇಕು, ಪರಸ್ಪರ ಸಾಮರಸ್ಯ ಮತ್ತು ಸೌಹಾರ್ಧದಿಂದ ಹಬ್ಬವನ್ನು ಆಚರಿಸಬೇಕು, ಮಾರ್ಗಸೂಚಿ ಬಿಟ್ಟು, ಸಾಮರಸ್ಯಕ್ಕೆ ದಕ್ಕೆಯಾಗುವಂತೆ ಹಬ್ಬ ಆಚರಣೆ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು. ಸಭೆಯಲ್ಲಿ ಮುಖಂಡರಾದ ಕೆ.ಎಂ.ಹೇಮಯ್ಯಸ್ವಾಮಿ ಟಿ.ಜಾಫರ್, ಹಬೀಬ್ ರೆಹಮಾನ್,ಬಿ.ಜಾಫರ್,ಅಬ್ದಲ್ ವಾಹೀದ್, ಅಬ್ದುಲ್ ಖುದ್ದೂಸ್, ಕೆ.ಮೆಹಬೂಬ್, ಮೆಹಮೂದ್, ಲಡ್ಡು ಹೊನ್ನೂರವಲಿ, ಎಂ.ಉಸ್ಮಾನ್ ಬಿ.ಕೆ.ಬಾಬು, ಅಕ್ಕಿ ಜಿಲಾನ್, ರಾಜಾವಲಿ,ಹಸನ್‍ಸಾಬ್ ಸೇರಿದಂತೆ ವಿವಿಧ ಗ್ರಾಮಗಳ ಮಸೀದಿಗಳ ಮುತುವಲ್ಲಿಗಳು ಭಾಗವಹಿಸಿದ್ದರು.



 

Post a Comment

0 Comments

Ad Code

Responsive Advertisement