Ticker

6/recent/ticker-posts

Ad Code

Responsive Advertisement

ಮರಾಠ ಅಭಿವೃದ್ಧಿ ನಿಗಮ ಉದ್ಘಾಟನಾ ಸಮಾರಂಭದಲ್ಲಿ ಶ್ರೋತೃಗಳ ಮನಗೆದ್ದ ಹಾಡುಗಾರಿಕೆ

ಬೆಂಗಳೂರು : ನಗರದ ಅರಮನೆ ಮೈದಾನದಲ್ಲಿ ಮಂಗಳವಾರದಂದು  ಆಯೋಜಿಸಲಾಗಿದ್ದ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ  ನಿಗಮದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನಿಗಮದ ಅಧ್ಯಕ್ಷ ಎಂ.ಬಿ.ಮುಳೆ ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ, ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಮರಾಠ ಬಾಂಧವರ ಸಮ್ಮುಖದಲ್ಲಿ ನೆರವೇರಿಸಿದರು. 

ಸಂಭ್ರಮ ಸಡಗರದಿಂದ ಜರುಗಿದ  ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಭಿಕರ ಹಾಗೂ ಗಣ್ಯರ ಗಮನವನ್ನು ವಿಶೇಷವಾಗಿ ಸೆಳೆದದ್ದು ದಾಸವಾಣಿ ಹಾಗು ಜಾನಪದ ಗಾಯನ ಕಾರ್ಯಕ್ರಮ. ಖ್ಯಾತ ಸಂಗೀತ ವಿದ್ವಾನ್ ಚಿಂತಲಪಲ್ಲಿ ವಿ. ಶ್ರೀನಿವಾಸರವರ ದಾರ್ಶೀಕನದಲ್ಲಿ ಮೂಡಿಬಂದ ಸುಶ್ರಾವ್ಯ  ಹಾಡುಗಾರಿಕೆಯು ಕೇಳುಗರ ಮನವನ್ನು ಮುಟ್ಟುವಂತೆ ದಾಸರಪದ ಹಾಗೂ ಜಾನಪದ ಗೀತೆಗಳ ಗಾಯನವು ಸಭೆಯ ಮೆರುಗನ್ನು ಹೆಚ್ಚಿಸಿತ್ತು. 



ವಿದ್ವಾನ್ ಕನಕಗಿರಿ ಹುಸೇನ್ ಸಾಬ್, ವಿಧೂಷಿ ಅಂಭುಜಾಕ್ಷಿ ಭೀರೇಶ್, ವಿಧೂಷಿ ನಂದಿನಿ ಪ್ರಸಾದ್, ವಾದ್ಯ ಸಹಕಾರ ವಿದ್ವಾನ್ ಶಿವಕುಮಾರ್ ಮಹಂತ, ಹಾರ್ಮೋನಿಯಂ, ವಿದ್ವಾನ್ ಷಣ್ಮುಖಯ್ಯ ತಬಲವಾದನದಿಂದ ಗೋಷ್ಠಿಯು ಕೇಳುಗರ ಮನದಲ್ಲಿ ಬಹುಕಾಲ ನೆನಪಿನಲ್ಲುಳಿಯುವಂತೆ ಮೂಡಿಬಂದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

Post a Comment

0 Comments

Ad Code

Responsive Advertisement