ಬೆಂಗಳೂರು ಜೂಲೈ ೯: ಪ್ರಣವಾಂಜಲಿ ಅಕಾಡೆಮಿ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆ ಆಯೋಜಿಸಿದ್ದ ನೃತ್ಯ ಸಂಗೀತ ಕಾರ್ಯಕ್ರಮ ಸಭಿಕರ ಮೆಚ್ಚುಗೆಗೆ ಪಾತ್ರವಾಗಿದೆ. ನಗರದ ದಕ್ಷಿಣ ಭಾಗದಲ್ಲಿರುವ ಅಚ್ಚುತ ಪಾರ್ಟಿ ಹಾಲ್ ನಲ್ಲಿ ಜೂಲೈ ೯ ರ್ ಸಂಜೆ ಆರು ಗಂಟೆಗೆ ಈ ಕಾರ್ಯಕ್ರಮವನ್ನು ಸಂಸ್ಥೆ ಆಯೋಜಿಸಿತ್ತು.
ಪ್ರಣವಾಂಜಲಿ ಸಂಸ್ಥೆಯವತಿಯಿಂದ ಆಯೋಜಿಸಲಾಗಿದ್ದ ಈ ನೃತ್ಯ ಕಾರ್ಯಕ್ರಮ, ಕುಮಾರಿ ರಮ್ಯಳ ಗಣೇಶ ಕೌತ್ವಂ ಮೂಲಕ ಪ್ರಾರಂಭವಾಗಿ ಕುಮಾರಿ ದೀಕ್ಷಾ ಭೋ ಶಂಭೋ ಎನ್ನುವ ಶಿವನ ಕೃತಿಯೊಂಧಿಗೆ ಮುಂದುವರಿಸಿ ಕೊನೆಯದಾಗಿ ಕುಮಾರಿ ಶ್ರೀಹಿತ ನಟೇಶ ಕೌತ್ವಂ ನೃತ್ಯವನ್ನು ಅದ್ಭುತವಾಗಿ ನರ್ತಿಸಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು.
ಶ್ರೀ ಸ್ಕಂದ ಪಿ ಭಟ್ಟಾ ರವರು ಮ್ಯಾಂಡೊಲಿನ್ ವಾದ್ಯ ವನ್ನು ಅದ್ಭುತವಾಗಿ ನುಡಿಸಿದರು. ಮೊದಲು ನಗುಮೋಮು ಕೃತಿಯನ್ನು ನುಡಿಸಿ ನಂತರ ಧನಶ್ರೀ ತಿಲ್ಲಾನದೊಂದಿಗೆ ಕಾರ್ಯಕ್ರಮಕ್ಕೆ ಮುಕ್ತಯ ಹೇಳಿದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿಯರಾದ ಹಿತಾಸಿನಿ, ಭೂಮಿಕಾ ಹಾಗು ನಕ್ಷತ್ರ ಅದ್ಭುತವಾಗಿ ನೆರೆವೇರಿಸಿದರು.
ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀ ಮಂಜುನಾಥರವರು ಎಲ್ಲ ಕಲಾವಿದರಿಗೆ ಪ್ರಮಾಣ ಪಾತ್ರವನ್ನು ನೀಡಿ ಗೌರವಿಸಿದರು.


.jpeg)
0 Comments