Ticker

6/recent/ticker-posts

Ad Code

Responsive Advertisement

"ಶಾಸ್ತ್ರೀಯ ನೃತ್ಯೋತ್ಸವ" ಮತ್ತು "ಪ್ರಶಸ್ತಿ ಪ್ರದಾನ" ಸಮಾರಂಭ

ನಾಟ್ಯ ನಿನಾದ ಅಕಾಡೆಮಿಯ ವತಿಯಿಂದ, ಜುಲೈ 3, ಭಾನುವಾರ ಸಂಜೆ 6 ಗಂಟೆಗೆ ಜೆ ಸಿ ರಸ್ತೆಯಲ್ಲಿ  ನಯನ ರಂಗಮಂದಿರದಲ್ಲಿ, ವಿ|| ಶ್ರೀಮತಿ ಸೀತಾ ಗುರುಪ್ರಸಾದ್  ಇವರ ಶಿಷ್ಯೆಯರಾದ ಕು||  ನಿಧಿ ಎ ಭಕ್ತನ್ ಮತ್ತು ಕು|| ಸಂವೃತ ಕಿಶೋರ್ ಇವರಿಂದ "ಭರತನಾಟ್ಯ", ಕು|| ಶ್ರಾವಣಿ ಕುಲಕರ್ಣಿ ಮತ್ತು ಅಶ್ವಿನಿ ನಂಬಿಯಾರ್  ಇವರಿಂದ "ಕೂಚಿಪುಡಿ" ನೃತ್ಯ ಪ್ರದರ್ಶನ ಇರುತ್ತದೆ. ಈ ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಸಂಕರ್ಷಣ ಅಕಾಡೆಮಿಯ ಕಲಾತ್ಮಕ ನಿರ್ದೇಶಕರಾದ ಡಾ||  ಸುಮನ ರಂಜಾಳ್ಕರ್ ಆಗಮಿಸುವರು. 





ಇದೇ ಸಂದರ್ಭದಲ್ಲಿ ಭರತಾಂಜಲಿ ನಾಟ್ಯ ಶಾಲೆಯ ಕಲಾತ್ಮಕ ನಿರ್ದೇಶಕರಾದ ವಿ|| ಶ್ರೀಮತಿ ಸೀತಾ ಗುರುಪ್ರಸಾದ್ ಅವರಿಗೆ "ಊರ್ಮಿಕ ಪ್ರಶಸ್ತಿ" ಪ್ರದಾನ ಮಾಡಿ, ಸನ್ಮಾನಿಸಲಾಗುವುದು ಎಂದು ಸಂಸ್ಥೆಯ ಉತ್ಸವ ನಿರ್ದೇಶಕರಾದ ವಿ|| ಶ್ರೀಮತಿ ಧರಣಿ ಟಿ. ಕಶ್ಯಪ್ ಅವರು ತಿಳಿಸಿದ್ದಾರೆ.

Post a Comment

0 Comments

Ad Code

Responsive Advertisement