Ticker

6/recent/ticker-posts

Ad Code

Responsive Advertisement

ರಾಯರ ಸನ್ನಿಧಿಯಲ್ಲಿ ರಚನಾ ಗಾಯನ ಸೇವೆ

ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಜೂನ್ 30, ಗುರುವಾರ ಏರ್ಪಟ್ಟಿತ್ತು.

  "ಹರಿದಾಸವಾಣಿ" ಕಾರ್ಯಕ್ರಮದಲ್ಲಿ ಕು|| ರಚನಾ ಶರ್ಮಾ ಅವರು ಮೊದಲಿಗೆ ವಿಘ್ನನಿವಾರಕನನ್ನು ಕುರಿತು ಶ್ರೀ ವೆಂಕಟವಿಠಲರ "ಗಣಪತಿ ಎನ್ನ ಪಾಲಿಸೋ" ಎಂಬ ಕೃತಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿ, "ಅಡಿಗಡಿಗೊಂದಿಪೆ ಪುರಂದರ ಗುರುವೇ" (ವಿಜಯದಾಸರು), "ಏಕೆ ಬೃಂದಾವನದಿ ನೆಲೆಸಿರುವೆ ಗುರುವೇ", "ಗುರು ರಾಘವೇಂದ್ರರ ಚರಣ" (ಕಮಲೇಶದಾಸರು), "ಅಮ್ಮಾ ಗುಮ್ಮ ಬಂದಿದೆ ಬಾಗಿಲ ಮುಚ್ಚೆ" (ವಿಜಯದಾಸರು), ನಂತರ ಸಾಲಾಗಿ ಪುರಂದರದಾಸರ ಕೃತಿಗಳಾದ, "ಹರಿಯ ಬಿಟ್ಟವಗೆ", "ದುರ್ಗೆ ಪಾಲಿಸು ಮಾತೇ", "ರಾಮ ರಾಮ ಎನ್ನಿರೋ", ಕುಣಿದಾಡೋ ಕೃಷ್ಣ ಕುಣಿದಾಡೋ", "ನೀನೇ ಗತಿ ನೀನೇ ಮತಿ", "ಅಂತಕನ ದೂತರಿಗೆ ಕಿಂಚಿತ್ತೂ ದಯವಿಲ್ಲ", "ಇರಬೇಕು ಹರಿದಾಸರ ಸಂಗ" ಹೀಗೇ ಇನ್ನೂ ಮುಂತಾದ ಕೆಲವು ಅಪರೂಪದ ಕೃತಿಗಳನ್ನು ಸುಶ್ರಾವ್ಯವಾಗಿ ಹಾಡಿ, ಕಾರ್ಯಕ್ರಮದ ಕೊನೆಯಲ್ಲಿ "ಇಂದಿನ ದಿನವೇ ಶುಭದಿನವು" ಎಂಬ ಉಗಾಭೋಗದೊಂದಿಗೆ ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು. ಇವರ ಗಾಯನಕ್ಕೆ ವಾದ್ಯ ಸಹಕಾರದಲ್ಲಿ, ವಿ|| ಶ್ರೀಮತಿ ವಾಸುಕಿ ಪರಿಮಳ ಅವರು ಪಿಟೀಲು ವಾದನದಲ್ಲಿ, ವಿ|| ಶ್ರೀನಿವಾಸ್ ಅನಂತರಾಮಯ್ಯ ಅವರು ಮೃದಂಗ ವಾದನದಲ್ಲಿ ಸಾಥ್ ನೀಡಿದರು. ಶ್ರೀ ನಂದಕಿಶೋರ್ ಆಚಾರ್ಯ ಅವರು ವಂದನಾರ್ಪಣೆ ಮಾಡಿದರು. ಆನಂತರ ಕಲಾವಿದರಿಗೆ ರಾಯರ ಪ್ರಸಾದ ವಿತರಿಸಲಾಯಿತು.

Post a Comment

0 Comments

Ad Code

Responsive Advertisement