Ticker

6/recent/ticker-posts

Ad Code

Responsive Advertisement

ಪತ್ರಿಕಾ ದಿನಾಚರಣೆ; ಸಾಧಕರಿಗೆ “ಕಾಯಕ ರತ್ನ” ಪ್ರಶಸ್ತಿ ಪ್ರದಾನ

ಚಿತ್ರದುರ್ಗ: ಬೆಂಗಳೂರು ಹಾಗೂ ವಿಜಯಪುರ ಜಿಲ್ಲೆಯ ಮೂಲಕ “ನಮ್ಮೂರ ಅಭಿವೃದ್ಧಿ ವಿವಿಧೋದ್ದೇಶಗಳ ಸೇವಾಸಂಸ್ಥೆ” ರಾಜ್ಯಮಟ್ಟದಲ್ಲಿ ಸೇವೆ ಸಲ್ಲಿಸುತ್ತಿದ್ದು, ಹಲವು ವರ್ಷಗಳಿಂದ ಪ್ರಶಸ್ತಿ ಪ್ರದಾನ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡು ರಾಜ್ಯದಲ್ಲಿ ವಿವಿಧ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುತ್ತದೆ.

ಇದೇ ಜುಲೈ 31 ಭಾನುವಾರದಂದು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಮಾಜಿ ಉಪ ಮುಖ್ಯಮಂತ್ರಿ  ಕೆ.ಎಸ್.ಈಶ್ವರಪ್ಪನವರು ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.


ಈ ಬಾರಿ ಸಂಸ್ಥೆಯು ಕೊಡಮಾಡುವ ಪ್ರತಿಷ್ಠಿತ “ಕಾಯಕ ರತ್ನ” ಪ್ರಶಸ್ತಿಗೆ ಚಿತ್ರದುರ್ಗದವರೇ ಆದ ರಾಜ್ಯದ ಹಿರಿಯ ಪತ್ರಕರ್ತ ವೆಂಕಟಸುಬ್ಬು ಮೋಕ್ಷಗುಂಡ0 ಅವರನ್ನು ಆಯ್ಕೆ ಮಾಡಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಚಿತ್ರದುರ್ಗ ಜಿಲ್ಲೆಯಿಂದ ಮೋಕ್ಷಗುಂಡA ಅವರನ್ನು ಹಾಗೂ ಜಿಲ್ಲೆಯ ಮಹಿಳಾ ವಿಭಾಗದಿಂದ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಖ್ಯಾತ ವಕೀಲೆ ನಾಗಲಕ್ಷಿ ಬಾಯಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿರುತ್ತದೆ.

ಮೋಕ್ಷಗುಂಡ0 ಅವರಿಗೆ ಈಗಾಗಲೇ 1967ರಲ್ಲಿಯೇ ರಾಷ್ಟçಪತಿ ಪ್ರಶಸ್ತಿ (ಸ್ಕೌಟ್ಸ್ ನಲ್ಲಿನ ವಿಶಿಷ್ಟ ಪ್ರತಿಭೆಗಾಗಿ) ಲಭಿಸಿದೆ. ಬೆಂಗಳೂರು ಪ್ರೆಸ್ ಕ್ಲಬ್‌ನ ವಿಶೇಷ ಪ್ರಶಸ್ತಿ, ರಾಜ್ಯಮಟ್ಟದ ಕನ್ನಡಪರ ಸಂಘಟನೆಗಳ ರಾಜ್ಯೋತ್ಸವ ಪ್ರಶಸ್ತಿ, ಚಿತ್ರದುರ್ಗ ಜಿಲ್ಲಾ ಬ್ರಾಹ್ಮಣ ಸಂಘದ ಶತಮಾನೋತ್ಸವ ಸಂದರ್ಭದ ವಿಶೇಷ ಪುರಸ್ಕಾರ ದೊರೆತಿವೆ.

ಕೋಟೆನಾಡು ಚಿತ್ರದುರ್ಗದ “ಕನ್ನಡ ಸಂಪಿಗೆ” ಈ ಹಿಂದೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಮುರುಘಾಶರಣರ ದಿವ್ಯ ಸಾನಿಧ್ಯದಲ್ಲಿ ಶ್ರೀ ವೆಂಕಟಸುಬ್ಬು ಅವರನ್ನು ಗೌರವಿಸಲಾಗಿದೆ. ಇವರು ಶ್ರೀ ಕೂಡಲೀ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನದ ಪತ್ರಿಕಾ(ಮಾಧ್ಯಮ) ಸಲಹೆಗಾರರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಇಂತಹ ಸಾಧಕರಾದ ಮೋಕ್ಷಗುಂಡ0 ಅವರಿಗೆ ರಾಜ್ಯಮಟ್ಟದ ಸೇವಾ ಸಂಸ್ಥೆಯೊ0ದು “ಕಾಯಕ ರತ್ನ” ಪ್ರಶಸ್ತಿ ನೀಡಿ ಗೌರವಿಸುತ್ತಿರುವುದಕ್ಕೆ ಹಲವು ಸಂಘ-ಸ0ಸ್ಥೆಗಳು, ಗಣ್ಯರು ಶುಭ ಹಾರೈಸಿದ್ದಾರೆ.

Post a Comment

0 Comments

Ad Code

Responsive Advertisement