Ticker

6/recent/ticker-posts

Ad Code

Responsive Advertisement

ಅಂತರಾಷ್ಟಿಯ ವುಮೆನ್ ಬಾಡಿ ಬಿಲ್ಡಿಂಗ್‌ಗೆ ಕು|| ಪೂಜಿತಾ ಆಯ್ಕೆ

ತುಮಕೂರು: ಬೆಂಗಳೂರಿನಲ್ಲಿ ನಡೆದ ರಾಷ್ಟಿçÃಯ ಮಟ್ಟದ ನ್ಯಾಷನಲ್ ಬಾಡಿ ಬಿಲ್ಡಿಂಗ್ ಚಾಂಪಿಯನ್ ಶಿಪ್‌ನಲ್ಲಿ ಹದಿನೇಳು ರಾಜ್ಯಗಳ ಪ್ರತಿಸ್ಪರ್ಧಿಗಳ ಎದುರು ವುಮೆನ್ ಪಿಟ್‌ನೆಸ್ ಮಾಡೆಲ್‌ನಲ್ಲಿ ಪ್ರಥಮ ಸ್ಥಾನ ಹಾಗೂ ಚಿನ್ನದ ಪದಕ ಪಡೆದು ಅಂತರಾಷ್ಟಿçÃಯ ಮಟ್ಟಕ್ಕೆ ಆಯ್ಕೆಯಾದ ಪೂಜಿತಾರನ್ನು ಜುಲೈ 30ರಂದು ತುಮಕೂರು ವಿಶ್ವವಿದ್ಯಾನಿಲಯದ ಕ್ರೀಡಾಂಗಣದಲ್ಲಿ ರೊಟರಿ ಅಧ್ಯಕ್ಷರಾದ ಮಲ್ಲಸಂದ್ರ ಶಿವಣ್ಣ ಅವರು ಮುಂಜಾನೆ ಗೆಳೆಯರ ಬಳಗ ಮತ್ತು ಅಂತರಾಷ್ಟಿçÃಯ ಕ್ರೀಡಾ ಪಟು ಟಿ.ಕೆ.ಆಂನAದ್ ಅವರ ಪರವಾಗಿ ಅಭಿನಂದಿಸಿದರು.

 ಈ ಸಂದರ್ಭದಲ್ಲಿ ಮಲ್ಲಸಂದ್ರ ಶಿವಣ್ಣನವರು ಮಾತನಾಡಿ, ಕ್ರೀಡೆಯಲ್ಲಿ ಹೆಣ್ಣು ಮಕ್ಕಳು ಭಾಗವಹಿಸುವುದೇ ವಿರಳ ಇಂತಹ ಸಂದರ್ಭದಲ್ಲಿ ಬಾಡಿ ಬಿಲ್ಡಿಂಗ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿ ಅಂತರಾಷ್ಟಿçÃಯ ಮಟ್ಟಕ್ಕೆ ಆಯ್ಕೆಯಾಗಿರುವುದು ತುಂಬಾ ಹೆಮ್ಮೆಯ ವಿಷಯ.

 ಪೂಜಿತಾರವರು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ಮಾಟನಹಳ್ಳಿಯಲ್ಲಿ ಶಿಕ್ಷಕರಾಗಿರುವ ರಂಗನಾಥ್ ಅವರ ಮಗಳಾಗಿ ತುಮಕೂರು ಜಿಲ್ಲೆಗೆ ಕೀರ್ತಯನ್ನು ತಂದವರಾಗಿದ್ದಾರೆ, ಒಬ್ಬ ಸಾಮಾನ್ಯ ಶಿಕ್ಷಕರ ಮಗಳು ಅಂತರಾಷ್ಟಿçÃಯ ಮಟ್ಟಕ್ಕೆ ಆಯ್ಕೆಯಾಗಿರುವುದು ಜಿಲ್ಲೆಯ ಎಲ್ಲಾ ಕ್ರೀಡಾಪಟುಗಳು ಸಂತೋಷ ಪಡುವಂತಹವುದು ಎಂದರು.

 ಕನ್ನಡ ರಕ್ಷಣಾವೇದಿಕೆಯ ಅಧ್ಯಕ್ಷರಾದ ಧನಿಯಾಕುಮಾರ್ ಮಾತನಾಡಿ ಅಡಿಗೆ ಮಾಡುವ ಕೈಗಳು ಕ್ರೀಡಾ ಸಾಮಾಗ್ರಿಗಳನ್ನು ಕೈಯಲ್ಲಿಡಿದು ಕ್ರೀಡೆಯಲ್ಲಿ ಭಾಗವಹಿಸಿ ಅಂತರಾಷ್ಟಿçÃಯ ಮಟ್ಟಕ್ಕೆ ಕು|| ಪೂಜಿತಾರವರು ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ, ಕ್ರೀಡೆಯಿಂದ ದೈಹಿಕ ಸೌಂದರ್ಯ ಹೆಚ್ಚುವುದಲ್ಲದೆ, ಮಾನಸಿಕ ಆರೋಗ್ಯವೂ ವೃದ್ಧಿಸುತ್ತದೆ ಎಂದರು. 

 ಈ ಸಂದರ್ಭದಲ್ಲಿ ಪೂಜಿತಾರಿಗೆ ಕ್ರೀಡೆ ಸಾಧನೆಗೆ ಮೆಚ್ಚಿ ಧನಿಯಾಕುಮಾರ್ ಮತ್ತು ವರ್ತಕರಾದ ಪಟೇಲ್  ಅವರುಗಳು ಧನ ಸಹಾಯ ನೀಡಿದರು.


 ಈ ಸಂದರ್ಭದಲ್ಲಿ ಅಂತರಾಷ್ಟಿಯ ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್ ಆವರು ಮಾತನಾಡಿ ಕ್ರೀಡೆಯಲ್ಲಿ ಸಾಧನೆ ಮಾಡುವುದು ಸುಲಭದ ಮಾತಲ್ಲ, ಪೂಜಿತಾರವರ ಸಾಧನೆ ಬೇರೆ ಎಲ್ಲಾ ಕ್ರೀಡಾಪಟುಗಳಿಗೆ ಮಾರ್ಗದರ್ಶನವಾಗಿದೆ. ಚಿಕ್ಕ ವಯಸ್ಸಿನಲ್ಲೇ ಅಂತರಾಷ್ಟಿಯ ಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ, ಕ್ರೀಡೆಯಲ್ಲೇ ಅತ್ಯಂತ ದುಬಾರಿಯಾದ ಕ್ರೀಡೆಯೆಂದರೆ ಬಾಡಿ ಬಿಲ್ಡಿಂಗ್. ಇಂತಹ ಕ್ರೀಡೆಯಲ್ಲಿ ಅಂತರಾಷ್ಟಿಯ ಮಟ್ಟಕ್ಕೆ ಪೂಜಿತಾ ಆಯ್ಕೆಯಾಗಿರುವುದು ಅಭಿನಂದನೀಯ ಎಂದರು.

ಅಭಿನAದನೆ ಸ್ವೀಕರಿಸಿದ ಪೂಜಿತಾರವರು ಮಾತನಾಡಿ ನನ್ನನ್ನು ಕರೆಸಿ ಅಭಿನಂದನೆ ಮಾಡಿದ ಮುಂಜಾನೆ ಗೆಳೆಯರ ಬಳಗ ಮತ್ತು ಅಂತರಾಷ್ಟಿಯ ಕ್ರೀಡಾ ಪಟುವಾದ ಟಿ.ಕೆ.ಆನಂದ್ ಅವರಿಗೆ ಧನ್ಯವಾದ ತಿಳಿಸಿದರು.

ಅಂತರಾಷ್ಟಿçÃಯ ಕಬಡ್ಡಿ ಕೋಚ್ ಈಸ್ಮಾಯಿಲ್‌ರವರು ಪೂಜಿತಾರವರ ಸಾಧನೆಯನ್ನು ಸಂಕ್ಷಿಪ್ತವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲರಾದ ವೆಂಕಟೇಶ್, ಶಿವರಾಜು, ದೇವರಾಜು, ಹೆಚ್.ಎಂ.ಟಿ ಬಾಲರಾಜು, ಪ್ರಕಾಶ್, ಮೂರ್ತಿ, ಸಮಾಜಸೇವಕ ನಟರಾಜು, ಕ್ರೀಡಾಪಟುಗಳಾದ ಚಿಕ್ಕತಿಮ್ಮಯ್ಯ, ನರೇಶ್‌ಬಾಬು ಹಾಗೂ ಯೊಗೇಂದ್ರ, ಪಟೇಲರು, ಶ್ರೀನಿವಾಸ್ ಇನ್ನೂ ಮುಂತಾದವರಿದ್ದರು.

Post a Comment

0 Comments

Ad Code

Responsive Advertisement