ಬೆಂಗಳೂರು: ಬೆಂಗಳೂರು ಹಾಗೂ ವಿಜಯಪುರ ಜಿಲ್ಲೆಯಲ್ಲಿ ಬಹಳ ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವಾ ನಿರತವಾಗಿರುವ ಅತ್ಯುನ್ನತ ಸಂಸ್ಥೆಗಳಲ್ಲಿ ನಮ್ಮೂರ ಸುದ್ದಿಯೂ ಒಂದು. ಈಗಾಗಲೇ ಆರು ಯಶಸ್ವಿ ವಸಂತಗಳನ್ನು ಪೂರೈಸಿರುವ ನಮ್ಮೂರ ಸುದ್ದಿ ನಾಡಿನಾದ್ಯಂತ ಓದುಗರನ್ನು ಹೊಂದಿರುವುದು ಹೆಮ್ಮೆಯ ವಿಷಯವೇ ಸರಿ.
ಇದೇ ಜುಲೈ 31ರ ಭಾನುವಾರದಂದು ಆರು ವರ್ಷಗಳನ್ನು ಪೂರೈಸಿರುವ ಸವಿ ನೆನಪಿನಲ್ಲಿ ವಿವಿಧ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ಮಾಡಲಾಗುತ್ತಿದೆ.
ಕಾರ್ಯಕ್ರಮದ ಪ್ರಧಾನ ಆಯೋಜಕರು, ನಮ್ಮೂರ ಸುದ್ದಿ ಮುಖ್ಯ ಸಂಪಾದಕರೂ ಆದ ಶ್ರೀಯುತ ಮೌರ್ಯ ಪೂಜಾರಿ ಯಲ್ಲಪ್ಪ ಭೀಮಸೇನ್ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುವರು. ಶ್ರೀಯುತ ಮೌರ್ಯ ಪೂಜಾರಿ ಯಲ್ಲಪ್ಪ ಭೀಮಸೇನ್ ಹಲವು ಸುದ್ದಿ ವಾಹಿನಿಗಳಲ್ಲಿ ತಮ್ಮ ಸೇವಾ ಅವಧಿಯನ್ನು ಧಾರೆಯೆರೆದಿದ್ದಾರೆ. ಬೆಂಗಳೂರು ಹಾಗೂ ವಿಜಯಪುರ ಜಿಲ್ಲೆಯಲ್ಲಿ ಶಾಖಾ ಕಛೇರಿಗಳನ್ನು ನಮ್ಮೂರ ಸುದ್ದಿ ಈ ಸಂದರ್ಭದಲ್ಲಿ ಅತ್ಯುತ್ಕಷ್ಟ ಸೇವಾ ಕೈಂಕರ್ಯವನ್ನು ಮಾಧ್ಯಮ ಕ್ಷೇತ್ರದಲ್ಲಿ ಅಂತೆಯೇ, ಇಂತಹ ಅದ್ಭುತ ಕಾರ್ಯಕ್ಕೆ ಮೌರ್ಯ ಪೂಜಾರಿ ಅವರು ತಮ್ಮನ್ನು ತೊಡಗಿಸಿಕೊಂಡಿರುವುದು ಪತ್ರಿಕಾ ರಂಗದ ಸರಿಸಾಟಿ ಎನ್ನಲೇಬೇಕು.
ಇದೇ ಜುಲೈ 31 ಭಾನುವಾರದಂದು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಮಾಜಿ ಉಪ ಮುಖ್ಯಮಂತ್ರಿ ಶ್ರೀ ಕೆ.ಎಸ್.ಈಶ್ವರಪ್ಪನವರು ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಈ ಬಾರಿ ಸಂಸ್ಥೆಯು ಕೊಡಮಾಡುವ ಪ್ರತಿಷ್ಠಿತ “ಕಾಯಕ ರತ್ನ” ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ಶ್ರೀಯುತ ವೆಂಕಟನಾರಾಯಣ್, ಶ್ರೀಯುತ ಜಾಣಗೆರೆ ವೆಂಕಟರಾಮಯ್ಯ, ಶ್ರೀಯುತ ವೆಂಕಟಸುಬ್ಬು ಮೋಕ್ಷಗುಂಡ0, ಕು. ನಾಗಲಕ್ಷಿಬಾಯಿ, ಶ್ರೀ ರಾಮಣ್ಣ ನಾಯಕ ಡಿ. ಕರಡಿಗುಡ್ಡ, ಶ್ರೀಯುತ ಕೆ. ಸತ್ಯನಾರಾಯಣ, ಶ್ರೀಯುತ ಬಿ.ಕೆ. ಅವರನ್ನು ಆಯ್ಕೆ ಮಾಡಲಾಗಿದೆ.
ಇಂತಹ ಮಹಾನ್ ಸಾಧಕರಿಗೆ ರಾಜ್ಯಮಟ್ಟದ ಸೇವಾ ಸಂಸ್ಥೆಯೊ0ದು “ಕಾಯಕ ರತ್ನ” ಪ್ರಶಸ್ತಿ ನೀಡಿ ಗೌರವಿಸುತ್ತಿರುವುದಕ್ಕೆ ಹಲವು ಸಂಘ-ಸ0ಸ್ಥೆಗಳು, ಗಣ್ಯರು ಶುಭ ಹಾರೈಸಿದ್ದಾರೆ.


0 Comments