ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ,ಅಗ್ರಹಾರ ದಾಸರಹಳ್ಳಿ ಶ್ರೀ ಪಟ್ಟಾಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜಾ ಸಮಾರಂಭದಲ್ಲಿ *ಅವಧೂತ ಶ್ರೀ ವಿನಯ್ ಗುರೂಜೀರವರು ಮತ್ತು ಸ್ಥಳೀಯ ಶಾಸಕರು,ವಸತಿ ಸಚಿವರಾದ ವಿ.ಸೋಮಣ್ಣರವರು* ಪಟ್ಟಾಲಮ್ಮ ದೇವಿಯ ದರ್ಶನ ಪಡೆದು,ವಿಶೇಷ ಪೂಜಾ ಸಮಾರಂಭದಲ್ಲಿ ಭಾಗವಹಿಸಿದ್ದರು.
*ಸಚಿವರಾದ ವಿ.ಸೋಮಣ್ಣರವರು* ಮಾತನಾಡಿ ನಂಬಿಕೆಯೆ ದೇವರು,ಭಕ್ತರು ನಂಬಿದ ದೇವರು ನಮ್ಮನ್ನು ಕಾಪಾಡುತ್ತಾನೆ ಎಂದು ದೇವಸ್ಥಾನಕ್ಕೆ ಬರುತ್ತಾರೆ.
ದೇವಸ್ಥಾನಕ್ಕೆ ಬರುವ ಭಕ್ತರಿಗೆ ದರ್ಶನ ವ್ಯವಸ್ಥೆ,ಪ್ರಸಾದ ನಿಲಯ ಮತ್ತು ಧ್ಯಾನ ಮಾಡುವ ಕೇಂದ್ರ, ದೇವಾಲಯ ಅವರಣ ಸುಸಜ್ಜಿತ,ಸ್ವಚ್ಚತೆಯಿಂದ ಇರಬೇಕು.
ಶ್ರೀ ಪಟ್ಟಾಲಮ್ಮ ದೇವಸ್ಥಾನ 200ವರ್ಷಯ ಹಳೆಯ ಪುರಾತನ ದೇವಸ್ಥಾನ ಅದು ಶೀತಲಾವಸ್ಥೆಯಲ್ಲಿ ಇತ್ತು.
ಶ್ರೀ ಪಟ್ಟಾಲಮ್ಮ ದೇವಸ್ಥಾನವನ್ನು ನವೀಕರಿಸಲಾಗಿದೆ.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಭಕ್ತ ಜನರು, ದೇವಸ್ಥಾನ ಆಡಳಿತ ಮಂಡಳಿಯವರು ದೇವಾಲಯಗಳು ಜೀರ್ಣೋದ್ದಾರಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಭಕ್ತರ ಆಶಯದಂತೆ ನಮ್ಮ ಕ್ಷೇತ್ರದ 57ದೇವಸ್ಥಾನಗಳನ್ನು ನವೀಕರಿಸಿ,
ಗೋವಿಂದರಾಜನಗರ ವಿಧಾನಸಭಾ ಸಂಸ್ಕೃತಿ,ಸಂಪ್ರಾದಯ, ದೇವಾಲಯಗಳ ಪವಿತ್ರ ಕ್ಷೇತ್ರವಾಗಿ ರೂಪಿಸಲಾಗಿದೆ ಎಂದು ಹೇಳಿದರು
*ಗೋವಿಂದರಾಜನಗರ ಮಂಡಲ ಬಿ.ಜೆ.ಪಿ.ಅಧ್ಯಕ್ಷರಾದ ವಿಶ್ವನಾಥಗೌಡ, ಕಾಡ ಅಧ್ಯಕ್ಷರಾದ ಸಿ.ಸೋಮಶೇಖರ್, ಬಿ.ಜೆ.ಪಿ.ಮುಖಂಡರಾದ* *ಶ್ರೀಧರ್,ವೇಣುಗೋಪಾಲ್ ಶಾಮಣ್ಣರವರು ಭಾಗವಹಿಸಿದ್ದರು*.



0 Comments