Ticker

6/recent/ticker-posts

Ad Code

Responsive Advertisement

ಮತ್ತೆ ಹರಿದಳು ಜಯಮಂಗಲಿ

ವಾರ್ತಾಜಾಲ ಸುದ್ದಿ ಮಧುಗಿರಿ: 

ತಾಲೂಕಿನ ಪುರವರ ಹೋಬಳಿಯಲ್ಲಿ  ಹರಿಯುವ ಜಯಮಂಗಲಿ ನದಿಯು  ತುಂಬಿ ಹರಿಯುತ್ತಿದ್ದು ,ಕೋಡಗದಾಲ ಪಂಚಾಯಿತಿ ವ್ಯಾಪ್ತಿಯ ಚನ್ನ ಸಾಗರದ ಬಳಿಯಿರುವ ಚೆಕ್ ಡ್ಯಾಂ ತಂಬಿ ಮುಂದಕ್ಕೆ ಹರಿಯುತ್ತಿದೆ. 

ಕಳೆದ ವರ್ಷದ ನವಂಬರ್ ತಿಂಗಳ ಹಿಂದೆ ಮುಂದೆ ಬಿದ್ದ ಭಾರಿ ಮಳೆಯಿಂದಾಗಿ ,ನವಂಬರ್ ತಿಂಗಳಲ್ಲಿ ಜಯಮಂಗಲಿ ನದಿ ಹರಿದಿತ್ತು.ಕೊರಟಗೆರೆ ಮತ್ತು ಮಧುಗಿರಿ ತಾಲ್ಲೂಕಿನಲ್ಲಿ ನದಿ ಪಾತ್ರದಲ್ಲಿರುವ ಎಲ್ಲ ಚೆಕ್ ಡ್ಯಾಂಗಳೂ ತುಂಬಿ ಹರಿದು ,ಆಂಧ್ರ ಪ್ರದೇಶದ 'ಪರಿಗಿ' ಕೆರೆ ಸೇರಿತ್ತು.

ಆಗ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಹಾಲಿ ಶಾಸಕರಾದ ಡಾ.ಜಿ.ಪರಮೇಶ್ವರ್ ರವರು ಮಾಜಿ ಶಾಸಕರಾದ ಪಿ.ಸುಧಾಕರ್ ಲಾಲ್ ರವರು ತಮ್ಮ ಬೆಂಬಲಿಗರು ಮತ್ತು ರೈತರೊಂದಿಗೆ ಆಗಮಿಸಿ ಗಂಗಾಪೂಜೆ ನೆರವೇರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಹಿಂದಿನ ಮಳೆಗಾಲದಲ್ಲಿ ನದಿ ಹರಿದ ಕಾರಣ  ಕೆರೆ ಕಟ್ಟೆ ,ಬಾವಿಗಳಲ್ಲಿ ನೀರು ತುಂಬಿ ಕೊಂಡು ಅಂತರ್ಜಲ ಹೆಚ್ಚಿದ್ದು ಕುಡಿಯುವ ನೀರಿನ ಬವಣೆಯೂ ನೀಗಿದೆ. ಧನ ಕರುಗಳಿಗೆ ಮೇವು ಕೂಡ ದೊರೆತಿದೆ. ಅಳಿವಿನಂಚಿನಲ್ಲಿದ್ದ ಅಡಿಕೆ ಮತ್ತು ತೆಂಗಿನ ತೋಟಗಳು ಉಳಿದು ಕೊಂಡಿವೆ.ಎಂದು ರೈತರು ಸಂತಸ ಹಂಚಿಕೊಂಡರು.

ನುರಿತ ಕೆಲಸಗಾರರ ಕೊರತೆ,ದಿಡೀರನೆ  ಬೆಲೆಯೇರಿಸಿಕೊಂಡು ಸಮಯಕ್ಕೆ ಸಿಗದ ರಸ ಗೊಬ್ಬರಗಳ ಕೊರತೆ ,ಬೆಳೆಗೆ ಸೂಕ್ತ ಬೆಲೆ ಸಿಗದಿರುವುದು. ಮುಂತಾದ ಹಲವು ಕಾರಣ ಗಳಿಂದಾಗಿ ವ್ಯವಸಾಯ ಯೋಗ್ಯ ಭೂಮಿಗೆಲ್ಲ ಬೆಳೆ ಇಡುವುದು ಅಸಾಧ್ಯವಾಗುತ್ತಿದೆ. ಮನೆಯ ಮಟ್ಟಿಗೆ ಮಾತ್ರ ಬೆಳೆದುಕೊಂಡು ಸುಮ್ಮನಾಗುತ್ತಿದ್ದೇವೆ.
ಜಲ ಸಂಪತ್ತನ್ನು ವ್ಯವಸಾಯಕ್ಕೆ ಬಳಸಿಕೊಳ್ಳಲಾಗದ ಅಸಹಾಯಕ ಪರಿಸ್ಥಿತಿ ಯಲ್ಲಿದ್ದೇವೆ ಎಂದು ಪ್ರಜ್ಞಾ ವಂತ ರೈತರು ನೊಂದು ನುಡಿದಿದ್ದಾರೆ.

ವರದಿ:ನಾಗೇಶ್ ಜೀವಾ ಮಧುಗಿರಿ

Post a Comment

0 Comments

Ad Code

Responsive Advertisement