Ticker

6/recent/ticker-posts

Ad Code

Responsive Advertisement

ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮಿಯವರಿಂದ 501 ಮಹಿಳೆಯರಿಗೆ ಉಡಿತುಂಬುವ ಕಾರ್ಯಕ್ರಮ ಯಶಸ್ವಿ

ಬಳ್ಳಾರಿ  ಜುಲೈ 05. ಕಳೆದ ಹಲವು ವರ್ಷಗಳಿಂದ ತಾಯಿಂದರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯುತ್ತಿದೆ ಎಂದು ಕೊಟ್ಟೂರು ಸಂಸ್ಥಾನಮಠದ ಜಗದ್ಗುರು ಕೊಟ್ಟೂರು ಬಸವಲಿಂಗ ಮಹಾಸ್ವಾಮೀಜಿ ಹೇಳಿದರು. ತಾಲೂಕಿನ ಶ್ರೀಧರಗಡ್ಡೆಯ ಶಾಖಾ ವಿರಕ್ತ ಮಠದಲ್ಲಿ ಲಿಂ. ಜಗದ್ಗುರು ಡಾ. ಸಂಗನಬಸವ ಮಹಾಸ್ವಾಮೀಜಿ ದಿವ್ಯಪ್ರಕಾಶದಲ್ಲಿ ಮಂಗಳವಾರ ನಡೆದ ಅಧ್ಯಾತ್ಮ ಪ್ರವಚನ ಮಂಗಲಮಹೋತ್ಸವ ಹಾಗೂ 501 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂತಹ  ಉಡಿ ತುಂಬುವು ಕಾರ್ಯಕ್ರಮ ಮಾಡುವ ಮೂಲಕ ಮಹಿಳೆಯರನ್ನು ಗೌರವದಿಂದ ಕಾಣುತ್ತದೆ ಈ ನಮ್ಮ ಮಠ. ಈ ವರ್ಷ ಐದನೂರ ಒಂದು ತಾಯಿಂದರಿಗೆ ಉಡಿ ತುಂಬಿದೆ. ಹೆತ್ತ ತಾಯಿಯನ್ನು ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲಾದದ್ದು ಎಂದರು. ಅಂತಹ ತಾಯಿಯನ್ನು ಗೌರವಿಸಿ ಪೂಜಿಸಬೇಕು ಎಂದರು.


ಕಂಪ್ಲಿ ಶಾಸಕ ಜೆ. ಎನ್. ಗಣೇಶ ಮಾತನಾಡಿ, ಹಲವು ವರ್ಷಗಳಿಂದ ಧಾರ್ಮಿಕ ಕ್ಷೇತ್ರವು ಸಾಮಾಜಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಈ ಮಠಗಳಲ್ಲಿ ಒಂದಾದ ಮಠವೇ ಕೊಟ್ಟೂರು ಸಂಸ್ಥಾನ ಮಠ. ನಮ್ಮೆಲ್ಲರಿಗೂ ನೆಮ್ಮದಿ ಸಿಗುವ ಮಠ. ಹೆಣ್ಣು ಮಕ್ಕಳನ್ನು ಬಾಲ್ಯ ವಿವಾಹ ಮಾಡದೇ ಉನ್ನತ ಶಿಕ್ಷಣ ನೀಡುವಲ್ಲಿ ಎಲ್ಲರೂ ಮುಂದಾಗಬೇಕು. ಇತ್ತೀಚಿನ ದಿನಗಳಲ್ಲಿ ಶಿಕ್ಷಣಕ್ಕಿಂತ ಮಿಗಿಲಾದ್ದದ್ದು ಯಾವುದು ಇಲ್ಲ.  ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ತಾವು ಕಡಿಮೆಯಿಲ್ಲ ಎಂಬಂತೆ ಸಾಧಿಸಿದ್ದಾರೆ. ಆದ್ದರಿಂದ ಎಲ್ಲರಿಗೂ ಶಿಕ್ಷಣ ದೊರೆಯುವಂತೆ ಆಗಬೇಕು ಎಂದರು. ಕಾರ್ಯಕ್ರಮದಲ್ಲಿ ಐದೂನೂರು ಒಂದು ಮಹಿಳೆಯರಿಗೆ ಉಡಿ ತುಂಬಲಾಯಿತು.

ಈ ಸಂದರ್ಭದಲ್ಲಿ ಶ್ರೀಧರಗಡ್ಡೆ ಶಾಖಾ ಮಠದ ಮರಿಕೊಟ್ಟೂರು ದೇವರು, ಕುರುಗೋಡು ಶಾಖಮಠದ  ನಿರಂಜನ ಪ್ರಭು ದೇವರು,  ಸೋಮ ಸಮುದ್ರದ ಶಾಖಮಠದ ಸಿದ್ಧಲಿಂಗ ದೇವರು,  ಬೂದಗುಂಪ ಶಾಖಮಠ ಸಿದ್ದೇಶ್ವರ ದೇವರು, ಸಾಲಿ ಸಿದ್ಧಯ ಸ್ವಾಮಿ,  ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುμÉೂೀತ್ತಮ ಗೌಡ, ಜಿ. ಎಂ. ವೀರಭದ್ರಯ್ಯ,  ಮಸೀದಿಪುರ ಸಿದ್ಧರಾಮನಗೌಡ, ಎಸ್.ಎರೆಪ್ಪ,  ಎಂ. ಬಸವರಾಜ,  ಎಸ್.ಬಿ. ಅಶೋಕಗೌಡ,  ಎಸ್.ಬಿ. ನಂದಿಶ್ ಗೌಡ,  ಬಸವಲಿಂಗಪ್ಪ ಯು., ಮಲ್ಲಿಕಾರ್ಜುನ ಪಾಟೀಲ್  ಹಾಗೂ ಇತರರಿದ್ದರು.



 


Post a Comment

0 Comments

Ad Code

Responsive Advertisement