Ticker

6/recent/ticker-posts

Ad Code

Responsive Advertisement

ಗಾಳಿಪಟ ಉತ್ಸವ – 2022

ಬೆಂಗಳೂರು, ಜುಲೈ 27 (ಕರ್ನಾಟಕ ವಾರ್ತೆ) :ಕರ್ನಾಟಕ ಜಾನಪದ ಪರಿಷತ್ತು, ರಾಜ್ಯ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ರಾಮನಗರ ಜಿಲ್ಲೆ – ಇವರ ಸಂಯುಕ್ತಾಶ್ರಯದಲ್ಲಿ ಜುಲೈ 29 ರಂದು ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ  32ನೇ ವರ್ಷದ ಗಾಳಿಪಟ ಉತ್ಸವ / ಸ್ಪರ್ಧೆಯ ಉದ್ಘಾಟನೆ ಮತ್ತು ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರೇಕ್ಷಕರಿಗೆ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ಉಚಿತ ಪ್ರವೇಶವಿದೆ.


ಗಾಳಿಪಟ ಉತ್ಸವ – 2022ಕ್ಕೆ ನಾಡಿನ ನಾನಾ ಭಾಗಗಳಿಂದ ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಎಳೆಯ ಮಕ್ಕಳಿಂದ ಹಿಡಿದು ಹಿರಿಯರು, ಹಳ್ಳಿಗರು ಮತ್ತು ನಗರದವರೂ ಪಾಲ್ಗೊಳ್ಳುವ ಈ ಉತ್ಸವದಲ್ಲಿ ಗ್ರಾಮೀಣ ಮೂಲದ ಬೋರಂಟಿ, ಗುಂಡು ಚಕ್ರದಂತಹ ಪಟಗಳೊಂದಿಗೆ ನಗರ ಮೂಲಕ ಸಂಯೋಜನೆಯ ಸರಮಾಲೆ ಪಟ, ಎರಡು ದಾರಗಳ ಪಟಗಳಂತಹ ಪಟಗಳು ಇಲ್ಲಿ ಪಾಲ್ಗೊಳ್ಳುವುದಿದೆ. ಒಟ್ಟಿನಲ್ಲಿ ಮರೆತು ಹೋಗುತ್ತಿದ್ದ ಈ ಕಲೆ ಈಗ ಪುನಶ್ಚೇತನಗೊಂಡಿವೆ. ಅದರ ಪ್ರತೀಕ ಈ ಉತ್ಸವವಾಗಿದೆ. ಗಾಳಿಪಟ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳೆಲ್ಲರೂ ಬೆಳಗ್ಗೆ 8.30 ಗಂಟೆಗೆ ಬಂದು ಸ್ಥಳದಲ್ಲೇ ನೋಂದಾಯಿಸಿಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ಈ ಗಾಳಿಪಟ ಉತ್ಸವನ್ನು ರಾಮನಗರದ ಉಸ್ತುವಾರಿ ಸಚಿವರಾದ ಡಾ. ಸಿ. ಎನ್. ಅಶ್ವಥ್‍ನಾರಾಯಣ ಹಾಗೂ ಕಾರ್ಯಗಾರವನ್ನು ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಅನಂದ್ ಸಿಂಗ್ ಅವರು ಉದ್ಘಾಟನೆ ಮಾಡಲಿದ್ದಾರೆ. ಉತ್ಸವದ ಅಧ್ಯಕ್ಷತೆಯನ್ನು ರಾಮನಗರ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀಮತಿ ಅನಿತಾ ಕುಮಾರಸ್ವಾಮಿಯವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ   ಮಾಜಿ ಸಚಿವರುಗಳು, ಶಾಸಕರುಗಳು ಭಾಗವಹಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಗಾಳಿಪಟ ಕಲಾವಿದರಾದ  ವಿ.ಕೆ. ರಾವ್ ಅವರು ಮತ್ತು ಇತರ ಗಾಳಿಪಟ ಕಲಾವಿದರುಗಳಿಂದ ಸುಮಾರು 50 ಕ್ಕಿಂತ ಹೆಚ್ಚು ಗಾಳಿಪಟ ಹಾರಾಟ ಮತ್ತು ಪ್ರದರ್ಶನವು ಇರುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

0 Comments

Ad Code

Responsive Advertisement