Ticker

6/recent/ticker-posts

Ad Code

Responsive Advertisement

ಬೇಕರಿ ತರಬೇತಿ

ಬೆಂಗಳೂರು, ಜುಲೈ 27 (ಕರ್ನಾಟಕ ವಾರ್ತೆ) :ಬೇಕರಿ ತರಬೇತಿ ಘಟಕದ ವತಿಯಿಂದ 4 ವಾರಗಳ ಬೇಕರಿ ತರಬೇತಿ ಕಾರ್ಯಕ್ರಮವನ್ನು ಆಸಕ್ತಿಯುಳ್ಳ ಬೇಕರಿದಾರರಿಗೆ ಉದ್ದಿಮೆ ಮತ್ತು ಗೃಹಿಣಿಯರಿಗಾಗಿ ಆಯೋಜಿಸಲಾಗಿದೆ.

ತರಬೇತಿಯು ಆಗಸ್ಟ್ 1 ರಿಂದ ಪ್ರಾರಂಭವಾಗಲಿದೆ. ಈ ತರಬೇತಿಯಲ್ಲಿ ಬ್ರೆಡ್, ಬನ್, ಪಪ್ಸ್, ಕೇಕ್‍ಗಳು, ವಿಶೇಷ  ಬಿಸ್ಕತ್ತುಗಳು, ರೋಲ್ಸ್‍ಗಳು ಮತ್ತಿತರ ಆಕರ್ಷಕ ಬೇಕರಿ ಪದಾರ್ಥಗಳನ್ನು ಕಲಿಸಲಾಗುವುದು.  
ಅಭ್ಯರ್ಥಿಗಳು ಸ್ವತ: ಪದಾರ್ಥ ತಯಾರಿಸುವ ಮೂಲಕ ಕಲಿಯುವ ಸೌಲಭ್ಯವಿದೆ. ಯಾವುದೇ ವಿದ್ಯಾರ್ಹತೆ ಅವಶ್ಯಕತೆಯಿಲ್ಲ. ತಯಾರಿಕೆಗೆ ಬೇಕಾದ ಕಚ್ಛಾ ಪದಾರ್ಥಗಳನ್ನು ತರಬೇತಿ ಘಟಕದಲ್ಲೇ ಒದಗಿಸಲಾಗುವುದು.
 ಹೆಚ್ಚಿನ ವಿವರಗಳಿಗೆ ಸಂಯೋಜಕರು, ಬೇಕರಿ ತರಬೇತಿ ಕೇಂದ್ರ, ವಿಸ್ತರಣಾ ನಿರ್ದೇಶನಾಲಯ, ಕೃಷಿ ವಿಶ್ವವಿದ್ಯಾನಿಲಯ, ಹೆಬ್ಬಾಳ, ಬೆಂಗಳೂರು-560 024, ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 080-23513370 ಮೂಲಕ ಕಛೇರಿಯ ಕೆಲಸದ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

0 Comments

Ad Code

Responsive Advertisement