ತುಮಕೂರು: ಕುಮಾರಸ್ವಾಮಿ ಒಬ್ಬ ಊಸರವಳ್ಳಿ ಇದ್ದಂತೆ, ಬಣ್ಣ ಬದಲಿಸುವ ಮನಸ್ಥಿತಿ ಅವನದು. ಬೆಳಿಗ್ಗೆ ಒಂದು ಮಾತನಾಡ್ತಾರೆ, ಸಂಜೆ ಒಂದು ಮಾತನಾಡುತ್ತಾರೆ. ಅವನೇನು ಉತ್ತಮನಾ ?. ಕುಮಾರಸ್ವಾಮಿ ಗಂಡಸೇ ಆಗಿದ್ದರೇ, ನನ್ನ ಎದುರು ನಿಂತು ಗೆಲ್ಲಲಿ ಎಂಬುದಾಗಿ ಹೆಚ್ ಡಿ ಕೆ ವಿರುದ್ಧ, ಜೆಡಿಎಸ್ ಶಾಸಕ ಗುಬ್ಬಿ ಶ್ರೀನಿವಾಸ್ ತೊಡೆತಟ್ಟಿ, ಸವಾಲ್ ಹಾಕಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದಂತ ಅವರು, ಕುಮಾರಸ್ವಾಮಿದು ಕಚ್ಚೆ ಸರಿ ಇಲ್ಲ, ಬಾಯಿ ಸರಿ ಇಲ್ಲ, ಹರಕಲು ಬಾಯಿ. ಹೀಗಿದ್ದೂ ಇನ್ನೊಬ್ಬರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ ರೀ ಇವರಿಗೆ?. ಇವನ ವಿರುದ್ಧ ಹೋರಾಟ ಮಾಡೋದೇ ನನ್ನ ಮುಂದಿನ ಗುರಿ ಹಾಗು ನಡೆ ಎಂಬುದಾಗಿ ಘೋಷಿಸಿದರು.
ನಾನು ಸೋತರೂ ಪರವಾಗಿಲ್ಲ. ಇಲ್ಲಿ ಇವನು ನಿಲ್ಲಿಸೋ ಅಭ್ಯರ್ಥಿಯನ್ನು ಗೆಲ್ಲಿಸೋದಕ್ಕೆ ನಾನು ಬಿಡೋದಿಲ್ಲ. ಕುಮಾರಸ್ವಾಮಿ ಗಂಡಸೇ ಆಗಿದ್ದರೇ, ನನ್ನ ಎದುರು ನಿಂತು ಗೆದ್ದು ತೋರಿಸಲಿ. ಆಗ ನಾನು ನನ್ನ ಜೀವನ ಪೂರ್ತಿ ಅವರ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಇರುತ್ತೇನೆ ಎಂಬುದಾಗಿ ಸವಾಲ್ ಹಾಕಿದರು.
ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಕುಮಾರಸ್ವಾಮಿಗೆ ಜೆಡಿಎಸ್ ಪಕ್ಷ ನಡೆಸೋ ಯೋಗ್ಯತೆಯೇ ಇಲ್ಲ. ಕಾರ್ಯಕರ್ತರನ್ನ ಬೆಳಸುವುದನ್ನು ಬಿಟ್ಟು ಗೂಂಡಗಳನ್ನ ಬೆಳೆಸಿದ್ದಾನೆ. ಅಂತವನು ನನ್ನ ಮನೆ ಮುಂದೆ ಪ್ರತಿಭಟನೆ ಮಾಡೋದಕ್ಕೆ ಕೆಲ ಪುಡಿಗೂಂಡಗಳನ್ನ ಕಳುಹಿಸಿದ್ದಾನೆ. ನನ್ನ ಕ್ಷೇತ್ರದಲ್ಲಿ ನನ್ನ ವಿರುದ್ಧವೇ ಅಭ್ಯರ್ಥಿ ಘೋಷಿಸಿದ ಮೇಲೆ ಹೆದರಿಕೊಳ್ಳೋದು ಏನ್ ಬಂತು, ನಾನೇನ್ಯಾಕೆ ಇವನಿಗೆ ಹೆದರಿಕೊಳ್ಳಲಿ ಎಂಬುದಾಗಿ ಗುಡುಗಿದರು. ದುಡ್ಡಿರುವವರಿಗೆ ಮಾತ್ರ ಜೆಡಿಎಸ್ ಪಕ್ಷದಲ್ಲಿ ಇರೋದಿಕ್ಕೆ ಅವಕಾಶ, ನಿಷ್ಠವಂತರಿಗಲ್ಲ. ಬಡಕಾರ್ಯಕರ್ತರನ್ನ ಬೆಳಸುವುದನ್ನು ಬಿಟ್ಟು ಹಣವಂತರನ್ನ ಬೆಳಸವುದು ಹಾಗು ಗೂಂಡಗಳನ್ನ ಬೆಳಸುವುದು ಇವನ ಜಾಯ್‌ಮಾನ.
Varthajala daily, Bengaluru
0 Comments