Ticker

6/recent/ticker-posts

Ad Code

Responsive Advertisement

ಒಂಟಿಯಾಗಿ ಓಡಾಡುವವರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಆರೋಪಿಗಳ ಬಂಧನ.

ದಿನಾಂಕ 23-05-2022 ರಂದು ಬೆಳಗ್ಗೆ 08-12 ಗಂಟೆಗೆ ಪಿರ್ಯಾದುದಾರರು ವಾಯು ವಿಹಾರಕ್ಕೆ ಜೆ.ಸಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೆನ್ಸನ್ ಕ್ರಾಸ್ ರಸ್ತೆಯ ಮಾಂಗಲ್ಯ ಅಪಾರ್ಟ್‍ಮೆಂಟ್ ಹತ್ತಿರ ಹೋಗುತ್ತಿರುವಾಗ ದ್ವಿಚಕ್ರವಾಹನದಲ್ಲಿ ಸುಮಾರು 20 ರಿಂದ 22 ವಯಸ್ಸಿನ ಇಬ್ಬರು ಅಪರಿಚಿತ ಆಸಾಮಿಗಳು ಪಿರ್ಯಾದುದಾರರ ಬಳಿ ಬಂದು ಅವರ ಬಳಿ ಇದ್ದ ಸ್ಯಾಮ್‍ಸಂಗ್ ಮೊಬೈಲ್‍ಅನ್ನು ಕಿತ್ತುಕೊಂಡು ಸ್ಕೂಟರ್‍ನಲ್ಲಿ ಪರಾರಿಯಾಗಿರುತ್ತಾರೆ. ಸುಲಿಗೆಯಾಗಿರುವ ತನ್ನ ಸ್ಯಾಮ್‍ಸಂಗ್ ಮೊಬೈಲ್ ಫೋನನ್ನು ಪತ್ತೆ ಮಾಡಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಜೆ.ಸಿ.ನಗರ ಪೊಲೀಸ್ ಠಾಣೆ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.


ಈ ಪ್ರಕರಣದಲ್ಲಿ ಇಬ್ಬರು ಆರೋಪಿಯನ್ನು ದಸ್ತಗಿರಿ ಮಾಡಿ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಸುಮಾರು 5.95 ಲಕ್ಷ ರೂ. ಬೆಲೆ ಬಾಳುವ ವಿವಿಧ ಕಂಪನಿಯ 6-ದ್ವಿಚಕ್ರವಾಹನಗಳನ್ನು ಹಾಗೂ ವಿವಿಧ ಕಂಪನಿಯ 5-ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಳ್ಳುವಲ್ಲಿ ಜೆ.ಸಿ.ನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ. 

ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಎ1) ಆರೋಪಿಯು ಹಳೆಯ ಎಂಓ ಆಸಾಮಿಯಾಗಿದ್ದು, ಆರೋಪಿಯು ಈ ಹಿಂದೆ ಶಿವಾಜಿನಗರ, ಕಮರ್ಷೀಯಲ್ ಸ್ಟ್ರೀಟ್, ಉಪ್ಪಾರಪೇಟೆ, ಬಾಣಸವಾಡಿ ಪೊಲೀಸ್ ಠಾಣೆಗಳ ಸುಲಿಗೆ, ದ್ವಿಚಕ್ರವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ. ಸದರಿ ಆರೋಪಿಯು ಸಂಪಿಗೇಹಳ್ಳಿ ದ್ವಿಚಕ್ರವಾಹನ ಕಳವು ಪ್ರಕರಣದಲ್ಲಿ ಜೈಲಿಗೆ ಹೋಗಿ ದಿನಾಂಕ 14-05-2022 ರಂದು ಜಾಮೀನಿನ ಮೇಲೆ ಹೊರ ಬಂದಿರುತ್ತಾನೆ. ಎ3) ಆರೋಪಿಯು ಹಳೆಯ ಎಂಓ ಆಸಾಮಿಯಾಗಿದ್ದು, ಶಿವಾಜಿನಗರ, ಕಮರ್ಷೀಯಲ್ ಸ್ಟ್ರೀಟ್, ಹೆಣ್ಣೂರು, ಕಬ್ಬನ್ ಪಾರ್ಕ್, ಜ್ಞಾನ ಭಾರತಿ, ಜೆ.ಸಿ.ನಗರ ಪೊಲೀಸ್ ಠಾಣೆಗಳ ಕೊಲೆ, ಸುಲಿಗೆ, ಗಾಂಜಾ ಸೇವನೆ, ದ್ವಿಚಕ್ರವಾಹನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.  ಸದರಿ ಆರೋಪಿಯು ಹೆಣ್ಣೂರು ಪೊಲೀಸ್ ಠಾಣೆಯ ಸುಲಿಗೆ ಪ್ರಕರಣದಲ್ಲಿ ದಸ್ತಗಿರಿ ಜೈಲಿಗೆ ಹೋಗಿ ದಿನಾಂಕ 24-12-2021 ರಂದು ಜಾಮೀನಿನ ಮೇಲೆ ಹೊರ ಬಂದು ತನ್ನ ಹಳೆ ಚಾಳಿಯನ್ನು ಮುಂದುವರೆಸಿಕೊಂಡು ಬಂದಿರುತ್ತಾನೆ. ಆರೋಪಿಗಳು ಬೆಳಗಿನ ಮತ್ತು ಸಂಜೆ ಸಮಯದಲ್ಲಿ ವಾಯು ವಿಹಾರಕ್ಕೆ ಬರುವ ಒಂಟಿ ಮಹಿಳೆಯನ್ನು ಗುರಿಯಾಗಿಸಿಕೊಂಡು ಮೊಬೈಲ್ ಸುಲಿಗೆ ಮಾಡುವುದು. ಮನೆಯ ಮುಂದೆ ನಿಲ್ಲಿಸಿರುವ ದ್ವಿಚಕ್ರವಾಹನಗಳನ್ನು ಗಮನಿಸಿಕೊಂಡು ನಕಲಿ ಕೀ ಬಳಸಿ ಮತ್ತು ಹ್ಯಾಂಡ್ ಲಾಕ್ ಮುರಿದು ಕಳವು ಮಾಡುತ್ತಿದ್ದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.

ಆರೋಪಿಗಳ ಬಂಧನದಿಂದ 1-ಸುಲಿಗೆ ಪ್ರಕರಣ (ಜೆ.ಸಿ.ನಗರ ಪೊಲೀಸ್ ಠಾಣೆ) ಮತ್ತು          6-ದ್ವಿಚಕ್ರವಾಹನ ಕಳವು ಪ್ರಕರಣಗಳು (ಆರ್.ಟಿ.ನಗರ-2, ಜೀವನ್ ಭೀಮಾನಗರ-1, ಕೆ.ಜಿ.ಹಳ್ಳಿ-1, ಡಿ.ಜೆ.ಹಳ್ಳಿ-1, ಹೆಬ್ಬಾಳ-1) ಸೇರಿದಂತೆ ಒಟ್ಟು 7 ಪ್ರಕರಣಗಳು ಪತ್ತೆಯಾಗಿರುತ್ತವೆ. ಉಳಿದ ಮೊಬೈಲ್ ಫೋನ್‍ಗಳ ವಾರಸುದಾರರನ್ನು ಪತ್ತೆ ಮಾಡಬೇಕಾಗಿರುತ್ತದೆ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯು ತಲೆ ಮರೆಸಿಕೊಂಡಿದ್ದು, ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ. 

ಈ ಪ್ರಕರಣದಲ್ಲಿ ಶ್ರೀಮತಿ ಎನ್ ರೀನಾ ಸುವರ್ಣ, ಎಸಿಪಿ, ಜೆ.ಸಿ.ನಗರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ  ಡಿ.ಹೆಚ್.ಮುನಿಯಪ್ಪ, ಪೊಲೀಸ್ ಇನ್ಸ್‍ಪೆಕ್ಟರ್, ಜೆ.ಸಿ.ನಗರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಪಿಎಸ್‍ಐಗಳಾದ  ರಘುಪತಿ ಹೆಚ್.ಎಸ್., ಶ್ರೀ ಅಜಿತ್ ಕುಮಾರ್, ಶ್ರೀ ಪವನ್ ನಾಯಕ್ ಮತ್ತು ಶ್ರೀ ಕಾರ್ತೀಕ್ ರವರುಗಳ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಯವರುಗಳಾದ  ಶ್ರೀ ತಿಮ್ಮಾಚಾರಿ, ಶ್ರೀನಿವಾಸಮೂರ್ತಿ, ಜಗದೀಶ್ ಎಂ.ಬಿ.,ನವೀನ್‍ಕುಮಾರ್, ಶ್ರೀಮಂತ ರಾಠೋಡ್ , ರಮೇಶ್ ತೊಂಡಿಹಾಳ,  ಶಿವಾಜಿ ಪಿಸಿ,ಪ್ರವೀಣ, ಶ್ರೀಮತಿ ಪಾರ್ವತಿ ಮಪಿಸಿ ರವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

 


Post a Comment

0 Comments

Ad Code

Responsive Advertisement