ಬಳ್ಳಾರಿ ಜೂನ್ 16. ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ : 15-06-2022 ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ,ಐಐಸಿ,ಎಸ್.ಬಿ.ಎಂ, ಎಸ್.ಡಬ್ಲು.ಸಿ ಘಟಗಳು, ¨ಬಳ್ಳಾರಿ ಜಿಲ್ಲಾ ಆರೋಗ್ಯ ಸಮಾಜಕಳ್ಯಾಣ ಘಟ , ¨ಳ್ಳಾರಿ ಜಿಲ್ಲಾ ಟಾಸ್ಕ ಫೋರ್ಸ್ ಬ್ಲಡ್ ಸೆಫ್ಟೀ ಹಾಗು ಸ್ವಾಮಿ ವಿವೇಕಾನಂದ ಚಾರಿಟಬಲ್ ರಕ್ತ ಭಂಡಾರ ಇವರುಗಳ ಆಶ್ರಯದಲ್ಲಿ ಜರುಗಿತು.
ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗುರುಸಿದ್ದಸ್ವಾಮಿ, ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಹಾಗು ಉಪಾಧ್ಯಕ್ಷರಾದ ಅಲ್ಲಂಚನ್ನಪ್ಪ, ಕಾರ್ಯದರ್ಶಿ ಬಿ.ವಿ. ಬಸವರಾಜ್, ಸಹಕಾರ್ಯದರ್ಶಿ ಜೆ. ಶಾಂತವೀರನಗೌಡರು, ಕೋಶಾಧಿಕಾರಿ ಗೋನಾಳ್ ರಾಜಶೇಖರ್‍ಗೌಡರು , ಆರ್.ವೈ.ಎಮ್,ಇ,ಸಿ ಆಡಳಿತ ಮಂಡಳಿಯ ಸದಸ್ಯರಾದ ಜಿ.ಎಂ ಮಲ್ಲಿಕಾರ್ಜುನ ರೆಡ್ಡಿ, ಬಸವರಾಜ ರೂಪನಗುಡಿ, ಜಾನೆಕುಂಟೆÉ ಪೋಂಪನ ಗೌಡ, ಕೊರ್ಲಗುಂದಿ ಬಸವನ ಗೌಡ, ಹಲಕುಂದಿ ಸತೀಶ್ ಕುಮಾರ್ ಉಧ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಸುಮಾರು 280 ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು. ಈ ಶಿಬಿರದಲ್ಲಿ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದ, ಪ್ರಾಚಾರ್ಯರಾದ ಡಾ|| ಟಿ. ಹನುಮಂತರೆಡ್ಡಿ ಉಪಪ್ರಾಂಶುಪಾಲರು ಡಾ|| ಸವಿತಾ ಸೊನೋಳಿ, ಎನ್.ಎಸ್.ಎಸ್ ಹಾಗು ವಿವಿಧ ಘಟPಗಳ ಆಫಿಸರ್ಗಳು ಡಾ|| ವಿರೂಪಾಕ್ಷಗೌಡರು, ಡಾ||ಸ್ವಾಮಿ.ಎನ್, (ಎನ್.ಎಸ್.ಎಸ್ ಘಟಕ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ) ಡಾ|| ಸಾಯಿ ಮಾಧವಿ (ಆರ್.ವೈ.ಎಂ.ಸಿ.ಈ-ವಿಧ್ಯಾರ್ಥಿ ವಿಭಾಗ), ಡಾ|| ಗೋಪಾಲರೆಡ್ಡಿ (ಸ್ವಾಮಿ ವಿವೇಕಾನಂದ ಚಾರಿಟಬಲ್ ರಕ್ತ ಭಂಡಾರ), ಡಾ|| ನರಸಿಂಹಮೂರ್ತಿ(ವಿಮ್ಸ್ , ಬಳ್ಳಾರಿ) ಎಲೆಕ್ಟ್ರಿಕಲ್ ಇಂಜಿನೀಯರಿಂಗ್ ವಿಭಾಗ, ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

0 Comments