ಬಳ್ಳಾರಿ ಜೂನ್ 16. ಬಿಜೆಪಿ ಯುವ ಮೋರ್ಚಾ ಬಳ್ಳಾರಿ ನೇತೃತ್ವದಲ್ಲಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಜೀ ಅವರ ಎಂಟು ವರ್ಷಗಳ ಆಡಳಿತ ಅವಧಿ ಪೂರ್ಣಗೊಂಡ ಸಂಭ್ರಮದ ಹಿನ್ನೆಲೆಯಲ್ಲಿ ದೇಶದಾದ್ಯಂತ ನಡೆಯುತ್ತಿರುವ ವಿಕಾಸ ತೀರ್ಥ ಬೈಕ್ ಯಾತ್ರೆ ಅಂಗವಾಗಿ ಬಳ್ಳಾರಿ ನಗರದಲ್ಲಿ ಇಂದು ಹಮ್ಮಿಕೊಂಡಿದ್ದ ಬೈಕ್ ಯಾತ್ರೆಗೆ ಮಾನ್ಯ ಮಂತ್ರಿಗಳದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಶ್ರೀರಾಮುಲು ಹಾಗೂ ಬಳ್ಳಾರಿ ನಗರದ ಮಾನ್ಯ ಶಾಸಕರಾದ ಸೋಮಶೇಖರ ರೆಡ್ಡಿಯವರು ಹಾಗೂ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಹನುಮಂತರಾಯ ಬಿರಾದರ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮತ್ಕ ರ್ ಮುಖಂಡರಾದ ಓಬಳೇಶ್, ಉಮೇಶ್, ಬುಡಾ ಪಾಲಣ್ಣ, ಯುವ ಮೋರ್ಚಾದ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಅಡವಿ ಸ್ವಾಮಿ ,ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷರಾದ ಆರ್ ಸೋಮಶೇಖರಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಸ್ ರಾಘವೇಂದ್ರ,ಸುದರ್ಶನ ರೆಡ್ಡಿ ಯುವ ಮೋರ್ಚಾ ನಗರ ಅಧ್ಯಕ್ಷರಾದ ಅರುಣ್ ಬಾಲಚಂದ್ರ ಪ್ರಧಾನ ಕಾರ್ಯದರ್ಶಿಗಳಾದ ಓಂ ಪ್ರಕಾಶ್ ಸತೀಶ್ ಪವನ್ ಸುಧಾಕರ್ ಜೀವನ್ ದುರ್ಗಾ ಪ್ರಸಾದ್ ವಿನೋದ್ ಅಕ್ಷಯ್ ನವೀನ್ ಪ್ರಕಾಶ್ ಹಾಗೂ ಯುವ ಮೋರ್ಚಾ ನಗರ ಮಂಡಲ ಮತ್ತು ಗ್ರಾಮಾಂತರ ಮಂಡಲ ಹಾಗೂ ಕಾಲ್ ಬಜಾರ್ ಮಂಡಲದ ಪದಾಧಿಕಾರಿಗಳು, ಮೋರ್ಚಾದ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ಸೇರಿದಂತೆ ಕಾರ್ಯಕರ್ತರು, ಯುವಕರು ಉಪಸ್ಥಿತರಿದ್ದರು.
.jpg)
0 Comments