ಬಳ್ಳಾರಿ ಜೂನ್ 16. ನಗರದ ಪ್ರತಿಷ್ಠಿತ ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿನಾಂಕ : 16-06-2022 ರಂದು ವಿದ್ಯುತ್ ಇಂಜನೀರಿಂಗೆ ವಿಭಾಗ ವತಿಯಿಂದ “ ವಿದ್ಯುತ್‍ಉತ್ಸವ -2022” ಕಾರ್ಯಕ್ರಮದ ಉಧ್ಘಾಟನಾ ಸಮಾರಂಭವು ಜರುಗಿತು.
ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಟೆಕ್ ಫಾರ್ಚುನ್ ಟೆಕ್ನಾಲಜೀಸ್‍ನ ಚೀಫ್ ಎಕ್ಜಿಕ್ಯೂಟಿವ್ ಆಫೀಸರ್ ಮಲ್ಲಿಕಾರ್ಜುನ ಕುಲಕರ್ಣಿ ಮಾತನಾಡುತ್ತಾ “ಮುಂಬರುವ ದಶಕದಲ್ಲಿ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ ಇಂಜಿನೀರಿಂಗ್ ಸಂಭಂದಿತ ಕ್ಷೇತ್ರಗಳು- ಇಲೆಕ್ಟ್ರಿಕಲ್ ವೆಹಿಕಲ್ಸ್, ಇಲೆಕ್ಟ್ರಾನಿಕ್ ಡಿಜೈನ್ ಇಂಜಿನೀಯರ್‍ಗಳು, ಸೋಲಾರ್,ಪವನ ವಿದ್ಯುತ್ ಉತ್ಪಾದನೆ ಮುಂತಾದವುಗಳು, ಪೆಟ್ರೋಲಿಯಂ ಉತ್ಪನ್ನಗಳ ಆಮದಕ್ಕಿಂತ ಮೇಲುಗೈ ಸಾಧಿಸಲಾಗುವುವು, ಸುಮಾರು 30 ಲಕ್ಷ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ ಇಂಜಿನೀರಿಂಗ್ ಡಿಜೈನ್ ಇಂಜಿನೀಯರ್‍ಗಳ ಬೇಡಿಕೆ ಇರುವುದು. ಆದರೆ ಅದಕ್ಕೆ ತಕ್ಕಂತೆ ಡಿಜೈನ್ ಹಾಗು ಮೆಯಿಂಟನನ್ಸ್ ಇಂಜಿನೀಯರ್‍ಗಳ ಲಭ್ಯತೆ ಇರುವುದಿಲ್ಲ. ಇಂತಹ ಶಿಬಿರಗಳಿಂದ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಯಾರಲ್ಲಿ ಯಾವ ಪ್ರತಿಭೆ ಇದೆ ಎಂದು ಗುರುತಿಸಿ ಅವರಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತಂದಾಗ ಮಾತ್ರ ವಿದ್ಯಾರ್ಥಿಗಳ ಈ ಕಲಿಕೆಯು ಅರ್ಥಪೂರ್ಣವಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ಆಳವಾದ ತಾಂತ್ರಿಕ ಜ್ಞಾನವುಳ್ಳ ವಿದ್ಯಾರ್ಥಿಗಳು ಅವಶ್ಯಕವಾಗಿದ್ದು ಅವರನ್ನು ತಯಾರಿಸುವಲ್ಲಿ ಶಿಕ್ಷಕರ ಪಾತ್ರ ಹೆಚ್ಚಾಗಿರುತ್ತದೆ” ಎಂದು ವಿವರಿಸಿದರು
ಬಸವರಾಜ ರೂಪನಗುಡಿ, ಕೊರ್ಲಗುಂದಿ ಬಸವನ ಗೌಡ ಮಾತನಾಡುತ್ತಾ ``ತಾಂತ್ರಿಕ ಶಿಕ್ಷಣದಲ್ಲಿ ಅಮೂಲಾಗ್ರ ಸುಧಾರಣೆಗಳನ್ನು ತರುವ ಅಗತ್ಯವಿದೆ. ಕೇವಲ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಂದ ಅವಿಷ್ಕಾರಗಳು ಸಾಧ್ಯವಾಗುವುದಿಲ್ಲ. ಸೃಜನ ಶೀಲತೆಯನ್ನು ಹಾಗು ಸಮಾಜದ ಸಮಸ್ಯೆಗಳಿಗೆ ತಾಂತ್ರಿಕತೆಯ ಮೂಲಕ ಪರಿಹಾರ ಹುಡುಕುವ ಮನೋಭಾವವನ್ನು ತಾಂತ್ರಿಕತೆಯಲ್ಲಿ ನಾಯಕರನ್ನು ರೂಪಿಸುವುದು ಶಿಕ್ಷಣ ಸಂಸ್ಥೆಗಳ ಕರ್ತವ್ಯವಾಗಬೇಕು'' ಎಂದು ಅಭಿಪ್ರಾಯಪಟ್ಟರು. ಉಪಪ್ರಾಂಶುಪಾಲರು ಡಾ|| ಸವಿತ ಸೊನೊಳಿ ಅವರು ಮಾತನಾಡುತ್ತಾ “ತಾಂತ್ರಿಕ ಜ್ಞಾನವು ಮನುಷ್ಯನಲ್ಲಿ ಅತೀ ತೀವ್ರ ಜಿಜಾÐಸೆ ಹೆಚ್ಚಿಸುತ್ತದೆ, ಇನ್ನು ಹೊಸದನ್ನು ಬೇಕೆಂದು ಕೋರುತ್ತದೆ, ನಿಮ್ಮಲ್ಲಿರುವ ಜ್ಞಾನವನ್ನು ಇತರರಿಗೆ ಹಂಚಿದಾಗ ಮಾತ್ರ ಕಲೆತದ್ದು ಸಾರ್ಥಕವಾಗುತ್ತಿದೆ. ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿನ ಹೊಸ ಆವಿಕ್ಷಾರಗಳನ್ನು ಕಲಿಯುವುದರ ಮೂಲಕ ಉತ್ತಮ ಸುಸಜ್ಜಿತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವುದರಲಿ ಯಶಸ್ವಿಯಾಗುತ್ತಾರೆ. ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ನಡೆಸುತ್ತೇವೆ ”. ಎಂದು ನುಡಿದರು. ಈ ಕಾರ್ಯಕ್ರಮದಲ್ಲಿ ವಿದ್ಯುತ್ ಇಂಜನೀರಿಂಗೆ ವಿಭಾಗ ವತಿಯಿಂದ ಡಾ||ಕೊಟ್ರೇಶ, ಡಾ|| ಕೆ.ರಾಘವೇಂದ್ರ ಪ್ರಾಸಾದ, ಡಾ||ದೊಡ್ಡಬಸವನಗೌಡರು, ಡಾ||ಯು.ಎಂ.ನೇತ್ರಾವತಿ, ಡಾ||ಶಂಭುಲಿಂಗನಗೌಡರು, ಶ್ರೀಮತಿ ಅನುಸುಯ ಪಾಟೀಲ್, ಶರಣಬಸಪ್ಪ, ಲಿಂಗನಗೌಡÀರು, ಶಾಂತಕುಮಾರ, ರಾಜಶೇಖರ, ರವಿಕುಮಾರ, ಶ್ರೀಮತಿ ದೀಪ, ಶ್ರೀಮತಿಮೀನಾಕ್ಷಿ, ಇನ್ನಿತರ ಸಿಬ್ಬಂದಿವರ್ಗ ಭಾಗವಹಿಸಿದರು.
ವಿ.ವೀ.ಸಂಘದ ಅಧ್ಯಕ್ಷರಾದ ಗುರುಸಿದ್ದಸ್ವಾಮಿ, ಕಾರ್ಯದರ್ಶಿಗಳಾದ ಬಿ.ವಿ. ಬಸವರಾಜ್, ಸಹ ಕಾರ್ಯದರ್ಶಿಗಳಾದ ದರೂರು ಶಾಂತವೀರನ ಗೌಡ, ಖಜಾಂಚಿಗಳಾದ ಗೋನಾಳ್ ರಾಜಶೇಖರ್ ಗೌಡ ಶುಭ ಹಾರೈಸಿದರು. ಆರ್.ವೈ.ಎಮ್,ಇ,ಸಿ ಆಡಳಿತ ಮಂಡಳಿಯ ಸದಸ್ಯರಾದ ಜಿ.ಎಂ ಮಲ್ಲಿಕಾರ್ಜುನ ರೆಡ್ಡಿ, ಬಸವರಾಜ ರೂಪನಗುಡಿ, ಜಾನೆಕುಂಟೆÉ ಪೋಂಪನ ಗೌಡ, ಕೊರ್ಲಗುಂದಿ ಬಸವನ ಗೌಡ, ಹಲಕುಂದಿ ಸತೀಶ್ ಕುಮಾರ್ , ಪ್ರಾಂಶುಪಾಲರು ಡಾ|| ಟಿ.ಹನುಮಂತ ರೆಡ್ಡಿ ಶುಭಹಾರೈಸಿದರು.
.jpg)
0 Comments