Ticker

6/recent/ticker-posts

Ad Code

Responsive Advertisement

ಕೇಂದ್ರ ಗ್ರಂಥಾಲಯಕ್ಕೆ ಬೇಟಿ ನೀಡಿದ ಮಹಾನಗರ ಪಾಲಿಕೆಯ ಮೇಯರ್ ಎಂ.ರಾಜೇಶ್ವರಿ

ಬಳ್ಳಾರಿ ಜೂ 16 : ಬಳ್ಳಾರಿಯ ನಗರದ ಡಾ.ರಾಜ್ ಕುಮಾರ ರಸ್ತೆಯಲ್ಲಿರುವ  ಸಾರ್ವಜನಿಕ ಕೇಂದ್ರ ಗ್ರಂಥಾಲಯಕ್ಕೆ ಭೇಟಿ ನೀಡಿದ ಬಳ್ಳಾರಿ ಮಹಾನಗರ ಪಾಲಿಕೆ ಮಹಾಪೌರರಾದ ಎಂ ರಾಜೇಶ್ವರಿ ಸುಬ್ಬಾರಾಯುಡು  2022-23ನೇ ಸಾಲಿನ  ಅಂದಾಜು ಆಯವ್ಯಯ ಕುರಿತು ಸಭೆಯಲ್ಲಿ ಪಾಲ್ಗೊಂಡು  ಅನೇಕ ವಿಷಯಗಳನ್ನು ಚರ್ಚಿಸಿದರು. ನಂತರ ಗ್ರಂಥಾಲಯಕ್ಕೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದಾಗಿ ತಿಳಿಸಿದರು. ಈ ಸಭೆಯಲ್ಲಿ 35ನೇ ವಾರ್ಡಿನ ಸದಸ್ಯರು ವಿ.ಶ್ರೀನಿವಾಸುಲು ಮಿಂಚು ,ಹಾಗೂ ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ,ಮಾಜಿ ಮೇಯರ್ ನಾಗಮ್ಮ ಹಾಗೂ ಮುಖ್ಯ ಗ್ರಂಥಾಲಯ ಅಧಿಕಾರಿಗಳಾದ ನರಸಣ್ಣ ,ಉಪ ನಿರ್ದೇಶಕರು, ಲಕ್ಷ್ಮಿ ಕಿರಣ್ ಬಿಕೆ ,ಎಸ್.ಸಂತೋಷ ,ಸಿದ್ದಪ್ಪ ಉಪಸ್ಥಿತರಿದ್ದರು.




 


Post a Comment

0 Comments

Ad Code

Responsive Advertisement