ಬಳ್ಳಾರಿ ಜೂ 16 : ದಿನಾಂಕ 15/06/2022 ರಂದು ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿಗಳ ಆದೇಶದ ಮೇರೆಗೆ ಹಗರಿ ಕೃಷಿ ವಿಜ್ಞಾನ ಪದವಿ ಕಾಲೇಜು 2022-23 ನೇ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗಲಿದೆ ಎಂದು ಪ್ರಕಟಿಸಲಾಗಿದೆ. ಸರ್ಕಾರದ ಈ ಆದೇಶದಿಂದ ಈ ಭಾಗದ ಯುವಕರಿಗೆ ಕೃಷಿ ಪದವಿ ಪಡೆಯಲು ಸಹಾಯಕವಾಗಲಿದೆ , ಆ ಕಾರಣಕ್ಕಾಗಿ ರಾಜ್ಯ ಸರ್ಕಾರದ ಈ ಆದೇಶವನ್ನ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಮುಂದುವರೆದು ಹಗರಿ ಕೃಷಿ ವಿಜ್ಞಾನ ಕೇಂದ್ರ 1906 ರಲ್ಲಿ ಆರಂಭವಾಗಿದ್ದು ಸಂಶೋಧನೆ ಮತ್ತು ಕೃಷಿ ಡಿಪೆÇ್ಲಮಾ ಪದವಿ ಕಾಲೇಜು ಕಾರ್ಯ ನಿರ್ವಹಿಸುತ್ತಿವೆ.
ಅಲ್ಲದೆ ಕೃಷಿ ಪದವಿ ಕಾಲೇಜು ನಡೆಸಲು ಬೇಕಾದ ಎಲ್ಲಾ ಮೂಲ ಸೌಕರ್ಯಗಳನ್ನು ಹೊಂದಿದೆ. ಕಾರಣ ಬೇರೆ ಹೊಸ ಕಾಲೇಜಗಳ ಪ್ರಾರಂಭ ಮಾಡಲು ನೀಡಿದ 30 ಸೀಟುಗಳನ್ನು ಮಾತ್ರ ನೀಡಿರುವುದು ನಮ್ಮ ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಸಿಬ್ಬಂದಿ ಹಾಗೂ ಇತರೆ ವೆಚ್ಚಗಳನ್ನು ಸಂಸ್ಥೆಯಲ್ಲಿ ಎಷ್ಟೋ ವಿದ್ಯಾರ್ಥಿಗಳು ಇದ್ದರೂ ಭರಿಸಬೇಕಾಗುತ್ತದೆ, 50 ಸೀಟುಗಳನ್ನು ಮಂಜೂರು ಮಾಡುವುದರಿಂದ ಯಾವುದೇ ಹೆಚ್ಚುವರಿ ಹಣಕಾಸಿನ ಅವಶ್ಯಕತೆ ಇರುವುದಿಲ್ಲ. ಆದ್ದರಿಂದ, ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶವಾಗಿದ್ದು , ಹಗರಿ ಕೃಷಿ ಪದವಿ ಕಾಲೇಜಿಗೆ ಈಗ ನೀಡಿರುವ 30 ಸೀಟುಗಳನ್ನು 50ಕ್ಕೆ ಹೆಚ್ಚಿಸಬೇಕೆಂದು ಈ ಮೂಲಕ ಆಗ್ರಹಿಸುತ್ತಾ, ಜಿಲ್ಲಾ ಉಸ್ತವಾರಿ ಸಚಿವರು ಹಾಗೂ ಜಿಲ್ಲೆಯ ಎಲ್ಲಾ ಜನ ಪ್ರತಿನಿಧಿಗಳೂ ದ್ವನಿ ಎತ್ತಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಕೋರಿದ್ದಾರೆ.
.jpg)
0 Comments