ಬಳ್ಳಾರಿ ಜೂನ್ 16.ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಘಟಕದ ವತಿಯಿಂದ ಸ ಹಿ ಪ್ರಾ ಶಾಲೆ ಹಂದಿಹಾಳು ಗ್ರಾಮದಲ್ಲಿ(ಮಹಾದೇವ ತಾತನವರ ಮಠದ ಆವರಣ) ನಡೆದ ಶ್ರೀ ವೈ.ಲಿಂಗಾರೆಡ್ಡಿ ಶ್ರೀಮತಿ ಪಾರ್ವತಮ್ಮ ದತ್ತಿ ಕಾರ್ಯಕ್ರಮದಲ್ಲಿ ಖ್ಯಾತ ಮಕ್ಕಳ ತಜ್ಞರು ಹಾಗೂ ದತ್ತಿ ದಾನಿಗಳಾದ ಡಾ.ವೈ.ಸಿ.ಯೋಗಾನಂದರೆಡ್ಡಿಯವರು ಕನ್ನಡ ಸಾಹಿತ್ಯ ನಮಗೆ ಸಂತೋಷವನ್ನು ಸಂಸ್ಕಾರವನ್ನು ಕಲಿಸುತ್ತದೆ ಅದಕ್ಕೆ ಕನ್ನಡ ಭಾಷೆಯನ್ನು ಪ್ರೀತಿಯಿಂದ ಕಲಿಯಬೇಕು ಕನ್ನಡ ಭಾಷೆ, ಸಾಹಿತ್ಯ ಹಾಗೂ ಮಕ್ಕಳ ವ್ಯಕ್ತಿತ್ವ ವಿಕಸನ ಮನೆಯಿಂದ ಆರಂಭವಾಗಿ ಶಾಲೆಯಲ್ಲಿ ಅರಳಿ ಸಮಾಜದಲ್ಲಿ ಪಸರಿಸಬೇಕು. ವ್ಯಕ್ತಿತ್ವ ಧನಾತ್ಮಕವಾಗಿ ವಿಕಾಸವಾಗಲು ನಿನ್ನನ್ನು ನೀನು ನಂಬಿ ನೀರು ಹಾಕಿದಾಗ ಮಾತ್ರ ಭೌತಿಕವಾಗಿ, ಬೌದ್ಧಿಕವಾಗಿ ಅಭಿವೃದ್ಧಿಯಾಗಿ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯವೆಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ವೈದ್ಯರು ಕರ್ನಾಟಕ ರಾಜ್ಯ ವೈದ್ಯ ಬರಹಗಾರರ ಬಳಗದ ರಾಜ್ಯಾಧ್ಯಕ್ಷರಾದ ಡಾ. ಅರವಿಂದ ಪಟೇಲ್ ರವರು ನಮ್ಮ ಆರೋಗ್ಯ ಹದಗೆಡಲು, ವಾಯುಮಾಲಿನ್ಯ, ಜಲ ಮಾಲಿನ್ಯವಾಗಲು ಮುಖ್ಯಕಾರಣ ಆಹಾರದಲ್ಲಿ ಮಿಶ್ರಣ ಮಾಡುವ ರಾಸಾಯನಿಕ ಬಣ್ಣಗಳು. ಹಬ್ಬಗಳಲ್ಲಿ ಹೋಳಿ ಹಬ್ಬ, ಗಣೇಶನ ಮೂರ್ತಿ ತಯಾರಿಕೆಯಲ್ಲಿ ಬಳಸುವ ಬಣ್ಣ, ದೀಪಾವಳಿಯಲ್ಲಿ ಸಿಡಿಸುವ ಬಣ್ಣ ಬಣ್ಣದ ಪಟಾಕಿಗಳಿಂದ ಹೊರಹೊಮ್ಮುವ ರಾಸಾಯನಿಕ ದಿಂದ, ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಇದನ್ನು ತಡೆಯದಿದ್ದರೆ ಮನುಕುಲಕ್ಕೆ ಮಾರಕವೆಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಖ್ಯಾತ ಮಕ್ಕಳ ಶಸ್ತ್ರಚಿಕಿತ್ಸಕ ವೈದ್ಯರಾದ ಡಾ. ಗಡ್ಡಿ ದಿವಾಕರ ರವರು ಮಕ್ಕಳು ಅತಿಯಾದ ಮೊಬೈಲ್ ಬಳಕೆ ವೇಗವಾಗಿ ಬೈಕ್ ಓಡಿಸುವುದನ್ನು ನಿಲ್ಲಿಸಿ ಓದುವ ಅಭ್ಯಾಸವನ್ನು ರೂಢಿಸಿಕೊಂಡಾಗ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ನೇತ್ರ ತಜ್ಞರಾದ ಡಾಕ್ಟರ್ ಪರಸಪ್ಪ ಬಂದರಕಳ್ಳಿ ರವರು ಮನುಷ್ಯನಿಗೆ ಬಹುಮುಖ್ಯವಾದ ಅಂಗ ಕಣ್ಣು ಅದನ್ನು ಹೆಚ್ಚು ಮೊಬೈಲ್ ನೋಡುವುದು ಕಂಪ್ಯೂಟರ್ ಬಳಕೆಯಿಂದ ಕಣ್ಣಿನ ದೃಷ್ಟಿ ಹೀನವಾಗುತ್ತದೆಂದು ತಿಳಿಸಿದರು.
ಆಯುರ್ವೇದ ವೈದ್ಯಾಲಯದ ವೈದ್ಯಾಧಿಕಾರಿಗಳಾದ ಡಾ. ದ್ರಾಕ್ಷಾಯಿಣಿ ಚಿತ್ರಿಕಿ ರವರು ಮನುಷ್ಯನ ದೇಹಕ್ಕೆ ಸಿಹಿಕಹಿ ಎರಡನ್ನು ಬಳಸಿದರೆ ಸದೃಢ ದೇಹ ನಿರ್ಮಾಣವಾಗುತ್ತದೆ ಮತ್ತು ಮನಸ್ಸು ನಿರ್ಮಲವಾಗಿರುತ್ತದೆ ಅದರಂತೆ ಸುಂದರ ಜೀವನಕ್ಕೆ ಸುಖ-ದುಃಖಗಳು ಬಂದರು ಅನುಭವಿಸಿ ಜೀವಿಸಬೇಕು ಎಂದು ತಿಳಿಸಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ರಂಗ ಕಲಾವಿದರು ಆದಂತಹ ಪುರುಷೋತ್ತಮ ಹಂದಿಹಾಳು ರವರು ಕಲೆ ಸಾಹಿತ್ಯ ಸಂಸ್ಕøತಿ ಬೆಳೆಯಲು ಮಕ್ಕಳು ಹೆಚ್ಚೆಚ್ಚು ಅಧ್ಯಯನ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮ ಕಲೆಯನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿದ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾಕ್ಟರ್ ಶಿವಲಿಂಗಪ್ಪ ಹಂದಿಹಾಳು ಅವರು ಮಕ್ಕಳ ಸಾಹಿತ್ಯ ಮತ್ತು ವ್ಯಕ್ತಿತ್ವ ವಿಕಸನವಾಗಲು ಕಥೆಗಳು ಕವನಗಳು ಭಾವಗೀತೆಗಳು ಭಕ್ತಿಗೀತೆಗಳು ನಾಟಕಗಳು ಕಾದಂಬರಿಗಳು ಕಾವ್ಯಗಳು ಸಣ್ಣ ಕಥೆಗಳು ಜಾನಪದ ಗೀತೆಗಳು ಪೂರಕವಾಗಿರುತ್ತವೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಮುಖ್ಯಗುರುಗಳಾದ ಟಿಸಿ ಪಂಪಾಪತಿ ಅವರು ಕನ್ನಡ ಸಾಹಿತ್ಯ ಪರಿಷತ್ತುನಿಂದ ಕನ್ನಡ ಭಾμÉ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಶಾಲಾ ಮಕ್ಕಳಿಗೆ ಶಾಲೆಗಳಲ್ಲಿ ಹೆಚ್ಚೆಚ್ಚು ನಡೆಸಿದರೆ ಕನ್ನಡ ಭಾμÉ ಕಲಿಕೆ, ಉತ್ಸಾಹ, ನಾಡಿನ ನೆಲ-ಜಲ ರಾಜ್ಯ, ದೇಶಾಭಿಮಾನ ಹೆಚ್ಚಾಗುತ್ತದೆ ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತು ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಘಟಕದ ಅಧ್ಯಕ್ಷರಾದ ಎ ಎರ್ರಿಸ್ವಾಮಿ ರವರು ಸಮಾಜಕ್ಕೆ ಸತ್ಯ ಸಂದೇಶವನ್ನು ಸಾರುವ ಕನ್ನಡ ಭಾಷೆಯೇ ಸಾಹಿತ್ಯ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ ಸಾಹಿತ್ಯವೇ ಮಕ್ಕಳ ಸಾಹಿತ್ಯ ಈ ಕನ್ನಡ ಕಾಯಕವನ್ನು ಮಾಡಲು, ಎಲ್ಲರೂ ಕೂಡಿ ಕನ್ನಡ ಕನ್ನಡತನವನ್ನು ಉಳಿಸಿ-ಬೆಳೆಸಲು, ಎಲ್ಲರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಈ ಮಲ್ಲಯ್ಯ , ಪ್ರೌಢಶಾಲೆಯ ಪ್ರಭಾರಿ ಮುಖ್ಯಗುರುಗಳಾದ ಎಸ್ ಜಗದೀಶ್ , ಮಹಾದೇವ ತಾತನವರ ಮಠದ ಧರ್ಮದರ್ಶಿಗಳಾದ ದೊಡ್ಡ ವೀರಣ್ಣ, ಹಿರಿಯ ಮುಖಂಡರಾದ ಹೆಚ್ ಕೆ ವೀರೇಂದ್ರ ರೆಡ್ಡಿ ಎಲ್ಲಾ ಶಿಕ್ಷಕರು ಊರಿನ ಪ್ರಮುಖರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
.jpg)
0 Comments