ಆಂಧ್ರದ ಸಚಿವ ಜಯರಾಮ್,ಪಿ.ಪಾಲಣ್ಣ ಭಾಗಿ
ಬಳ್ಳಾರಿ ಜೂನ್ 03. ಕರ್ನಾಟಕದ ಬಳ್ಳಾರಿ ಜಿಲ್ಲೆಯ ಗಡಿ ಭಾಗವಾಗಿರುವ ಆಂಧ್ರಪ್ರದೆಶದ ಕರ್ನೂಲ್ ಜಿಲ್ಲೆಯ ಮೆದೆಹಾಳು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಶಿರಿಡಿ ಸಾಯಿಬಾಬ ಮಂದಿರದ ಮತ್ತು ಶ್ರೀ ಬಾಬಾರವರ ವಿಗ್ರಹ ಪ್ರತಿಷ್ಠಾಪನೆ ಹಾಗೂ ಕುಂಭಾಬಿಷೇಕ ಮಹೋತ್ಸವವನ್ನು ಶುಕ್ರವಾರ 03-06-2022 ನೆರವೇರಿಸಿದರು. ಸದ್ಗುರುಗಳ ಪ್ರೇರಣೆಯಾಗಿರುವುದರಿಂದ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಾಬಾ ಕೃಪೆಗೆ ಪಾತ್ರರಾದರು. ಗಂಗಾ ಪೂಜೆಯೊಂದಿಗೆ ಆಲಯ ಪ್ರವೇಶ, ಗೋಪೂಜೆ, ಗಣಪತಿ ಪೂಜೆ, ಸ್ವಸ್ತಿ ಪುಣ್ಯ ವಾಚನ ಪೂಜೆ, ನಾಂದಿ ಪೂಜೆ, ಸಾಯಿಬಾಬಾರವರ ವಿಗ್ರಹವನ್ನು ಜಲಾಧಿವಾಸ, ಪ್ರಾಣ ಪ್ರತಿಷ್ಠಾಪನೆ, ರುದ್ರಭಿಷೇಕ 108 ಕುಂಭ ಕಲಶಗಳೊಂದಿಗೆ ಕುಂಭಾಭಿಷೇಕ ಪೂರ್ಣಾಹುತಿ ಕಾರ್ಯಕ್ರಮ ಮಹಾ ಮಂಗಳಾರತಿಯನ್ನು ನೆರವೇರಿಸಿದರು.
ಈ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ ಶ್ರೀ ಷ. ಬ್ರ. ಅಜಾತ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಪುರವರ್ಗಮಠ, ಜಂಗಮರ ಹೊಸಹಳ್ಳಿ, ಶ್ರೀ ಕಲ್ಯಾಣ ಸ್ವಾಮಿಗಳು ಕಲ್ಯಾಣಸ್ವಾಮಿ ಮಠ ಸಂಸ್ಥಾನ ಕಮ್ಮರಚೇಡು ಉಪಸ್ಥಿತರಿದ್ದರು. ಗುಮ್ಮನೂರು ಜಯರಾಮ್ ಕಾರ್ಮಿಕ ಮಂತ್ರಿಗಳು, ಆಂದ್ರಪ್ರದೇಶ,ಪಾಲಣ್ಣ ಬುಡಾ ಅಧ್ಯಕ್ಷರು, ಬಳ್ಳಾರಿ, ಸುನಿಲ್ ಕುಮಾರ್ ಮಾಲಿಕರು, ನೀರಜಾಕ್ಷಿ ಐರಾನ್ ಅಂಡ್ ಸ್ಪೀಲ್ ಫ್ಯಾಕ್ಟರಿ ಭಾಗವಹಿಸಿ ಸಾಯಿಬಾಬಾ ಆಶಿರ್ವಾದ ಪಡೆದರು.
.jpg)
0 Comments