Ticker

6/recent/ticker-posts

Ad Code

Responsive Advertisement

ವಿಜಯನಗರ ಜಿಲ್ಲೆಯಲ್ಲಿ ವಿಶ್ವ ಬೈಸಿಕಲ್ ದಿನ ಆಚರಣೆ

ಹಂಪಿಯಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಾಣ: ಡಿಸಿ ಅನಿರುದ್ಧ ಶ್ರವಣ್

ಹೊಸಪೇಟೆ(ವಿಜಯನಗರ),ಜೂ.03: ವಿಜಯನಗರ ಜಿಲ್ಲಾಡಳಿತ ಹಾಗೂ ಹಂಪಿ ವಿಶ್ವಪರಂಪರೆ ಅಭಿವೃದ್ಧಿ ಪ್ರಾಧಿಕಾರ(ಹವಾಮಾ)ದ ಜೊತೆಗೂಡಿ ವಿಜಯನಗರ ಜಿಲ್ಲೆಯ ವಿಶ್ವಪಾರಂಪರಿಕ ಐತಿಹಾಸಿಕ ತಾಣವಾದ ಹಂಪಿಯಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಾಣ ಮತ್ತು ಸೈಕಲ್ ಸ್ನೇಹಿ ಸೌಲಭ್ಯಗಳನ್ನು ಮುಂದಿನವರ್ಷದೊಳಗೆ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಪಿ.ಶ್ರವಣ್ ಅವರು ಹೇಳಿದರು.

75ನೇ ಅಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ವಿಜಯನಗರ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ನೆಹರು ಯುವಕೇಂದ್ರ ಮತ್ತು ಹೊಸಪೇಟೆ ಸೈಕ್ಲಿಂಗ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಸೈಕಲ್ ಜಾಥಾಕ್ಕೆ ಶುಕ್ರವಾರ ಬೆಳಗ್ಗೆ ಚಾಲನೆ ನೀಡಿ ಮಾತನಾಡಿದರು.

ಸೈಕಲ್ ಚಾಲನೆ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಜೊತೆ ಒಳ್ಳೆಯ ಪ್ರಭಾವ ಬೀರುವುದಲ್ಲದೇ ಪರಿಸರಕ್ಕೂ ಪೂರಕವಾಗಲಿದೆ ಎಂದು ಹೇಳಿದ ಅವರು ಹಂಪಿ ಐತಿಹಾಸಿಕ ತಾಣವಾಗಿದ್ದು, ಸೈಕಲ್ ಸವಾರರಿಗೆ ಉತ್ತಮ ಸ್ಥಳವಾಗಿದೆ ಹಾಗೂ ಹಂಪಿ ವಿಶ್ವ ಪರಂಪರೆ ತಾಣದಲ್ಲಿ ಇಂತಹ ವಾತವರಣವು ಪರಿಸರ ಸ್ನೇಹಿಗೆ ಪೂರಕವಾಗಲಿದೆ ಮತ್ತು ಪ್ರವಾಸಿಗರಿಗೆ ಉತ್ತಮ ಅನುಭವ ಲಭಿಸಿದಂತಾಗುತ್ತದೆ ಎಂದು ಹೇಳಿದರು.

ಸದರಿ ಐತಿಹಾಸಿಕ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ವಿಜಯನಗರ ಜಿಲ್ಲೆಯಲ್ಲಿ ದೇಶದ 75 ಐತಿಹಾಸಿಕ ಸ್ಥಳಗಳಲ್ಲಿ ಒಂದಾದ ಹಾಗೂ “ವಿಶ್ವ ಪರಂಪರೆ ತಾಣಾ ಹಂಪಿ”ಯಲ್ಲಿ ವಿಶ್ವ ಬೈಸಿಕಲ್ ದಿನ ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು ಮತ್ತು ಸೈಕಲ್ ಓಟದ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಜಾಥಾ ಏರ್ಪಡಿಸಲಾಗಿದೆ ಎಂದು ವಿವರಿಸಿದರು.

ಸೈಕಲ್ ಜಾಥಾವು ಕಮಲಾಪುರ ಕ್ರಾಸ್‍ನಿಂದ ಹಂಪಿಯ ಎದುರು ಬಸವಣ್ಣ ಮಂಟಪದವರೆಗೂ ಅಂದಾಜು 7 ಕಿ.ಮೀ ವಿವಿಧ ಸ್ಮಾರಕಗಳ ಮಾರ್ಗವಾಗಿ ಹೊರಟಿತು.

ಈ ಸಂದರ್ಭದಲ್ಲಿ ಜಿಪಂ ಸಿಇಒ ಹರ್ಷಲ್ ಭೋಯರ್ ನಾರಾಯಣ, ಎಸ್‍ಪಿ ಡಾ.ಎಸ್.ಕೆ.ಅರುಣ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಹೊಸಪೇಟೆ ಸಹಾಯಕ ಆಯುಕ್ತರಾದ ಸಿದ್ಧರಾಮೇಶ್ವರ, ನೆಹರು ಯುವ ಕೇಂದ್ರದ ಮಾಂಟು ಪತ್ತಾರ್, ಕೇಂದ್ರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಿ.ಡಿ.ಹಳ್ಳಿಕೇರಿ, ಮಕ್ಕಳ ಹಕ್ಕು ರಕ್ಷಣಾಧಿಕಾರಿಗಳಾದ ರಾಘವೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಕೊಟ್ರೇಶ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸತ್ಯನಾರಾಯಣ,ಹೊಸಪೇಟೆ ಸೈಕ್ಲಿಂಗ್ ಕ್ಲಬ್ ಪದಾಧಿಕಾರಿಗಳು ಸೇರಿದಂತೆ ಹಂಪಿಯ ವಿವಿಧ ಶಾಲೆಯ ಮಕ್ಕಳು,ಪತ್ರಕರ್ತರು,ಸಾರ್ವಜನಿಕರು ಸೇರಿದಂತೆ 150 ಜನರು ಪಾಲ್ಗೊಂಡಿದ್ದರು.



 


Post a Comment

0 Comments

Ad Code

Responsive Advertisement