ಬಳ್ಳಾರಿ ಜೂನ್ 07. ರಾಯಚೂರು ಮೂಲದ ಪಿ.ವೇಂಕಟೇಶ್ ಬಳ್ಳಾರಿ ಕೆಎಂಎಫ್ ಹಾಲು ಕೇಂದ್ರ ದಲ್ಲಿ ಇಂಜಿನಿಯರ್ ಆಗಿ ನಾಲ್ಕು ವರ್ಷಗಳಿಂದ ಕೆಲಸ ಮಾಡುತಿದ್ದಾರೆ, ವಿಧ್ಯಾನಗರದಲ್ಲಿ ವಾಸ ಇದ್ದಾರೆ. ಕೆಲ ತಿಂಗಳ ಹಿಂದೆ ಮದುವೆಯಾಗಲು ಕನ್ಯ ನೋಡಲು ಹೋಗಿದ್ದರು.
ಆದರೆ ಹುಡುಗಿ ಒಪ್ಪಿಗೆ ಆಗಿಲ್ಲ,ಕೆಲ ದಿನಗಳು ಕಳೆದ ಮೇಲೆ ಹುಡುಗಿಯ ಸಂಬಂಧಿಕರು ಮತ್ತೊಬ್ಬ ಹುಡುಗಿ ಇದ್ದಾಳೆ ನೋಡಿ ಎಂದು ವೆಂಕಟೇಶಗೆ "ಪ್ರಿಯಾಂಕ " ಅನ್ನುವ ಹುಡುಗಿಯ ಮಾಹಿತಿ ವಾಟ್ಸಾಪ್‍ಗೆ ಹಾಕಿದ್ದಾರೆ. ಅದನ್ನು ನೋಡಿದ ಭುಪ ಸಂಪ್ರದಾಯವಾಗಿ ಹಿರಿಯರು ಜೊತೆಯಲ್ಲಿ ನೋಡಿ ಮದುವೆ ಪ್ರಯತ್ನಗಳು ಮಾಡಿಕೊಂಡಿದ್ದರೆ ಯಾವುದೇ ಸಮಸ್ಯೆಗಳು ಆಗುತಿರಲಿಲ್ಲ. ಮೊದಲೆ ತುಪ್ಪ,ಹಾಲು,ಮೊಸರು,ನಂದಿನಿ ಸಿಹಿ ಪದಾರ್ಥಗಳ ಕಂಪನಿಯಲ್ಲಿ ಉದ್ಯೋಗ ಮಾಡ್ತಿದ್ದಾನೆ ಏನು ಮಾಡೋದು ? ಹೀಟ್ ಜಾಸ್ತಿ ಆಗಿ ಅಡ್ಡ ದಾರಿಯಲ್ಲಿ ಮೊಬೈಲ್ ಮೂಲಕ ಯುವತಿ ಜೊತೆಯಲ್ಲಿ ಸ್ನೇಹ ಸಂಬಂಧ ಮಾಡಿಕೊಂಡು,ನಂಬಿಸಿ ದೈಹಿಕ ವಾಗಿ ಸಂಪರ್ಕ ಬೆಳೆಸುವ ಮೂಲಕ ಮದುವೆ ಆಗುತ್ತಿನಿ ಎಂದು ಮೋಸ ಮಾಡಿದ್ದಾನೆ. ಇವನ ನಡತೆ, ಅನುಮಾನಗಳನ್ನು ಕಂಡು ಹಿಡಿದ ಯುವತಿ ಮನೆಯಲ್ಲಿ ಹೇಳಿದ್ದಾಳೆ ಮೋಸ ಹೊಗಿರವ ವಿಷಯವನ್ನು.
ಇವರು ಇಬ್ಬರು ಒಂದೇ ಸಮಾಜದ ಅವರು, ಚನ್ನಾಗಿ ವಿದ್ಯಾಭ್ಯಾಸ ಕೂಡ ಮಾಡಿದ್ದಾರೆ. ಮದುವೆ ಆಗುವುದಾಗಿ ನಂಬಿಸಿ ಯುವತಿಯೊಬ್ಬಳ ಜೊತೆ ದೈಹಿಕ ಸಂಪರ್ಕ ಬೆಳಸಿ ಕೈಕೊಟ್ಟು ಅರೋಪದ ಅಡಿಯಲ್ಲಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲೆ ಮಾಡಿದ್ದಾರೆ. ವೆಂಕಟೇಶ ಮತ್ತು ಅವರ ಅಣ್ಣ ತಮ್ಮಂದಿರು ಕಂಬಿ ಎಣಿಸುತ್ತಿದ್ದಾರೆ. ಕೆಎಂಎಫ್ ಪಿ.ವೆಂಕಟೇಶ್ ಹಾಗೂ ಅವನಿಗೆ ಸಹಕಾರ ನೀಡಿದ ಹಿನ್ನಲೆ ಅಣ್ಣ ರಾಮಕೃಷ್ಣ ತಮ್ಮ ತಾಯಣ್ಣ ಅವರ ಮೇಲೆ ಎಫ್‍ಐಆರ್ ದಾಖಲಿಸಿ ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಇದರಲ್ಲಿ ಸ್ಥಳೀಯ ಶಾಸಕ ಸೋಮಶೇಖರ್ ರೆಡ್ಡಿ ಕೂಡ ರಾಜಿ ಮೂಲಕ ಒಂದು ಮಾಡೋಣ ಎಂದು ಪ್ರಯತ್ನ ಮಾಡಿದ್ದಾರೆ,ಆದರೆ ಕಾಮ ಪಿಶಾಚಿ ಒಪ್ಪಲಿಲ್ಲ. ಇದರಲ್ಲಿ ಸ್ಥಳೀಯ ಕೆಲ ಅಧಿಕಾರಿಗಳು ಕೂಡ ಸರ್ವ ಪ್ರಯತ್ನ ಮಾಡಿದ್ದಾರೆ, ಇವನು ನಿರ್ಲಕ್ಷ್ಯ ದ ಉತ್ತರ ಕೊಟ್ಟಿದ್ದಾನೆ ಇದು ಮಾಮೂಲು ವಿಚಾರ ಬೆಂಗಳೂರಲ್ಲಿ ಇಂತಹ ವಿಚಾರಗಳು ಮಾಮೂಲಾಗಿ ಇರುತ್ತವೆ ಎಂದು, ಕೆಲ ರಾಜಿ ಪ್ರಯತ್ನ ಮಾಡುವ ಅವರ ಮುಂದೆ ಹೇಳಿದ್ದಾನೆ ಎಂದು ತಿಳಿದುಬಂದಿದೆ . ಇವನು ಇಂತಹ ಕಥೆಗಳು ಇನ್ನೂ ಎಷ್ಟು ಮಾಡಿರಬಹುದು ಅನ್ನವದು ಅನುಮಾನಗಳು ಮೂಡಿಸಿವೆ.
ಈರೀತಿಯಲ್ಲಿ ಮದುವೆ ಆಗುವ ಹೆಣ್ಣು ಮಕ್ಕಳು ಜೊತೆಯಲ್ಲಿ ಚಲ್ಲಾಟವನ್ನು ಆಡಿ ಸಮಾಜಕ್ಕೆ ಕಳಂಕ ತರುವ ವಿಷದ ಹುಳಗಳನ್ನು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಸಂಘ ಸಂಸ್ಥೆಗಳು ಒತ್ತಾಯ ಮಾಡಿವೆ. ಇನ್ನುಮುಂದೆ ಪೋಷಕರು ಕೂಡ ಯುವತಿಯರು ಡಾಟಾ ಕೊಡುವ ಸಮಯದಲ್ಲಿ ಹೆಚ್ಚರ ವಹಿಸಬೇಕು.ಈ ಪ್ರಕರಣದಲ್ಲಿ ಇನ್ನಷ್ಟು ಮಾಹಿತಿ ಸಿಗಬೇಕಾಗಿದೆ, ಕಾದು ನೋಡೋಣ.
.jpg)
0 Comments