ಬಳ್ಳಾರಿ ಜೂನ್ 07. ರಥಯಾತ್ರೆ ಉಸ್ತುವಾರಿ ನೀಡಿ ಒಂದು ಬಾರಿಯು ಶಾಸಕರಾಗಿರದ ದೆಹಲಿಯ ಗಲ್ಲಿಯಲ್ಲಿ ತಿರುಗಾಡಿಕೊಂಡಿದ್ದ ಮೋದಿಯವರನ್ನ ಕರೆಯಿಸಿಕೊಂಡು ಮುಖ್ಯಮಂತ್ರಿ ಯನ್ನಾಗಿಸಿದ್ದು ಉಕ್ಕಿನ ಮನುಷ್ಯ ಎಲ್.ಕೆ.ಅಡ್ವಾನಿ. ಅಂತಹ ಅಡ್ವಾನಿಯವರನ್ನ ಅತಿಥಿಗಳ ಸಾಲಿನಲ್ಲಿ ನಿಂತಾಗ ಮಾತನಾಡಿಸುವ ಕನಿಷ್ಟ ಸೌಜನ್ಯ ತೋರದ ಪ್ರಧಾನಿ. ಅವರು ಕೈಮುಗಿದುಕೊಂಡು ನಿಂತರು ಕಂಡು ಕಾಣದಂತೆ ಮುಂದೆ ಹೋಗುವ ಮೂಲಕ ಗುರು ದ್ರೋಹ ಮಾಡಿದ್ದು ಅವರಿಗೆ ರಾಜಕೀಯವಾಗಿ ಯಾವುದೇ ಸ್ಥಾನ ಮಾನ ಕಲ್ಪಿಸದಂತೆ ರಾಜಕೀಯವಾಗಿ ಮುಗಿಸಿದ್ದು ಉಂಡ ಮನೆಗೆ ದೋಹ ಬಗೆದಂತಲ್ಲವೆ, ಯಡಿಯೂರಪ್ಪ ಅವರ ನೆರವಿನಿಂದ ರಾಜ್ಯದಲ್ಲಿ ಎರೆಡು ಬಾರಿ ಅಧಿಕಾರಕ್ಕೆ ಬಂದ ಬಿಜೆಪಿ ಅವರನ್ನೆ ಜೈಲಿಗೆ ಕಳುಹಿಸಿ ಕಡೆಗೆ ಅವರ ಮಗ ವಿಜಯೇಂದ್ರ ಅವರಿಗೆ ಎಂಎಲ್‍ಸಿ ಮಾಡದೆ ವಂಚಿಸಿದ್ದು ಉಂಡ ಮನೆಗೆ ದ್ರೋಹ ಬಗೆದಂತಲ್ಲವೆ, ಬೆಳಗಾವಿಯಲ್ಲಿ ಸುರೇಶ್ ಅಂಗಡಿ ನಿಧನರಾದಾಗ ಅವರ ಪತ್ನಿಗೆ ಟಿಕೇಟ್ ನೀಡಿ ನಂತ್ರ ಅನಂತಕುಮಾರ್ ನಿಧನರಾದಾಗ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೇಟ್ ನೀಡದೆ ತೇಜಸ್ವಿ ಸೂರ್ಯ ಎಂಬ ಬಕೇಟ್ ಗಿರಾಕಿಗೆ ಟಿಕೇಟ್ ನೀಡಿ ಎಂಪಿ ಮಾಡಿದ್ದು ಉಂಡ ಮನೆಗೆ ದ್ರೋಹ ಬಗೆದಂತೆ ಅಲ್ಲವೆ, ಎಸ್.ಎಂ.ಕೃಷ್ಣ ಅವರು ಕಾಂಗ್ರೇಸ್ ನಲ್ಲಿ ಮುಖ್ಯಮಂತ್ರಿ ಗಳಾಗಿ ರಾಜ್ಯಪಾಲರಾಗಿ ಅತ್ಯುನ್ನತ ಸ್ಥಾನಗಳನ್ನ ಅಲಂಕರಿಸಿ ಕಡೆಗೆ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿಕೊಂಡಿದ್ದು ಉಂಡ ಮನೆಗೆ ದ್ರೋಹ ಬಗೆದಂತೆ ಅಲ್ಲವೆ ಎಂದು ಎಂ.ಜಿ ಕನಕ ಕೆಪಿಸಿಸಿ ಸಾಮಾಜಿಕ ಜಾಲತಾಣ ಘಟಕದ ಬಳ್ಳಾರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟೀಕಿಸಿದ್ದಾರೆ.
ಹೀಗೆ ಹೇಳುತ್ತಾ ಹೋದರೆ ಉಂಡ ಮನೆಗೆ ದ್ರೋಹ ಬಗೆದ ಬಿಜೆಪಿಯವರ ಪುಸ್ತಕವೆ ಬರೆಯಬೇಕಾಗುತ್ತದೆ.ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿರುವಾಗ ಇನ್ನೊಬ್ಬರ ತಟ್ಟೆಯಲ್ಲಿ ಬಿದ್ದಿರುವ ಇರುವೆ ಬಗ್ಗೆ ಮಾತನಾಡುವ ಔಚಿತ್ಯವೇನು ,ಬಿಜೆಪಿ ಬಾಯಿಯಲ್ಲಿ ನೈತಿಕತೆ ಭೂತದ ಬಾಯಿಯಲ್ಲಿ ಭಗವತ್ ಗೀತೆಯೇ ಸರಿ ಎಂದು ಕನಕನವರು ಕಿಡಿಕಾರಿದ್ದಾರೆ.
.jpg)
0 Comments