Ticker

6/recent/ticker-posts

Ad Code

Responsive Advertisement

ಆರ್.ವೈ.ಎಂ.ಇ.ಸಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದ ವತಿಯಿಂದ “ನ್ಯಾಷನಲ್ ಲೆವೆಲ್ ಟೆಕ್ ಫೆಸ್ಟ್ – ಟ್ಯಾಲೆಂಟ್ರಾನಿಕ್ಸ್

ಬಳ್ಳಾರಿ ಜೂನ್ 07. ನಗರದ ಪ್ರತಿಷ್ಠಿತ ರಾವ್ ಬಹದ್ದೂರ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ವಿಭಾಗದವರಿಂದ ದಿನಾಂಕ : 02-06-2022 ರಿಂದ 06-06-2022 ವರೆಗೆ ವಿದ್ಯಾರ್ಥಿ ಪ್ರತಿಭಾನ್ವೇಷಣೆಯ “ನ್ಯಾಷನಲ್ ಲೆವೆಲ್ ಟೆಕ್ ಫೆಸ್ಟ್ ಟ್ಯಾಲೆಂಟ್ರಾನಿಕ್ಸ್-2022”:  (National Level Tech Fest–“ TALENTRONICS-2022”) – ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದ ಮುಖ್ಯ ಉದ್ದೇಶ, ತಾಂತ್ರಿಕ ವಿದ್ಯಾರ್ಥಿಗಳಲ್ಲಿ, ಅಡಗಿರುವ ವಿವಿಧ ಪ್ರತಿಭೆಗಳನ್ನು ಹೊರತರುವುದು ಹಾಗೂ ಹೊಸ ಅವಿಷ್ಕಾರಗಳನ್ನು ಪ್ರೋತ್ಸಾಹಿಸುವುದು. 


 ವಿ.ವೀ.ಸಂಘದ ಅಧ್ಯಕ್ಷರಾದ ಗುರುಸಿದ್ದಸ್ವಾಮಿ, “ಇಂದಿನ ಯುವ ವಿದ್ಯಾರ್ಥಿವೃಂದದವರಲ್ಲಿ, ಪ್ರತಿ ಒಬ್ಬರು ಕನಿಷ್ಠ ಒಂದು ಹೊಸ ಆವಿಷ್ಕಾರ ಮಾಡಬಲ್ಲರು, ಸಾವಿರಾರು ಹೊಸ ಆವಿಷ್ಕಾರಗಳು ಹಾಗು ಉದ್ಯಮಗಳನ್ನು ವಿವಿಧ ಕ್ಷೇತ್ರಗಳಲ್ಲಿ ಭಾರತದೇಶಕ್ಕೇ ನೀಡಬಲ್ಲರು. ಉದ್ಯೋಗಾರ್ಥಿ ಆಗಬೇಡಿ, ದೇಶದ ಜನತೆಗೆ ಉದಯ ಸೂರ್ಯನಂತೆ ಹಲವಾರು ವಿಧವಾದ ಉದ್ಯೋಗ ಕಿರಣಗಳನ್ನು ನೀಡಿರಿ”  ಎಂದು ಕರೆನೀಡಿದರು. ಇದೆ ಸಂಧರ್ಭದಲ್ಲಿ ವಿವಿಧ ಸ್ಪರ್ಧೆಯ ಪ್ರತಿಭಾನ್ವಿತ ವಿಜೇತರಿಗೆ ಪ್ರಶಸ್ತಿ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಿದರು. ಮುಖ್ಯ ಅಥಿತಿಯಾಗಿ ಆಗಮಿಸಿದ ಡಾ|| ಟಿ.ಗಂಗಾಧರ ಗೌಡ ನಿರ್ದೇಶಕರು  ವಿಮ್ಸ್ ಬಳ್ಳಾರಿ ಅವರು ಮಾತಾನಾಡುತ್ತಾ ಮಾಹಿತಿ ಮತ್ತು ತಂತ್ರಜ್ನಾನದ ಜೋತೆಗೆ ಆರೋಗ್ಯದ ಕಡೆಗೆ ಗಮನಕೊಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು ವಿ.ವೀ.ಸಂಘದ ಶಿಕ್ಷಣ ಸಂಸ್ಥೆಗಳಲ್ಲಿ ಓದಿದ ವಿದ್ಯಾರ್ಥಿಗಳು ಉತ್ತಮ ಸ್ಥಾನದಲ್ಲಿದ್ದಾರೆ, ತಾವು ಸಹ ಈ ಸಂಘದ ಹಳೆಯ ವಿದ್ಯಾರ್ಥಿ ಎಂದು ಹೇಳಿ ಕೊಳ್ಳಲು ಹೆಮ್ಮೆ ಅನಿಸುತ್ತಿದೆ ಎಂದು ತಿಳಿಸಿದರು. ಇದೆ ಸಂಧರ್ಭದಲ್ಲಿ ಇ.ಸಿ.ಇ ವಿಭಾಗದ ಸಾದನೆಗೈದ ಭೋಧಕ ಸಿಬ್ಬಂದಿಗಳನ್ನು ಸನ್ಮಾನಿಸಿದರು. ಈ ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ಡಾ|| ಸುರೇಶ್ ಸಿ.ಎಮ್ ಅಧೀಕ್ಷಕರು ಟಿ,ಬಿ ಮತ್ತು ಎದೆಯ ರೋಗ ತಜ್ಞರು, ಡಾ|| ರಾಘವೇಂದ್ರ ಹಿರಿಯ ವೈದ್ಯಾಧೀಕಾರಿಗಳು ವಿಮ್ಸ್ ಬಳ್ಳಾರಿ, ಇವರು ಆಗಮಿಸಿ ವಿದ್ಯಾರ್ಥಿಗಳನ್ನು ಶುಭ ಹಾರೈಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವೀ.ವಿ.ಸಂಘದ ಉಪಾಧ್ಯಕ್ಷರು ಹಾಗೂ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾದ  ಅಲ್ಲಂ ಚನ್ನಪ್ಪ, ರವರು ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಈ ರೀತಿಯ ಪ್ರತಿಭಾನ್ವೇಷಣೆಯ  ಕಾರ್ಯಕ್ರಮಗಳು ಮುಖ್ಯ ಪಾತ್ರವನ್ನು ವಹಿಸುತ್ತವೆ, ಇನ್ನು ಹೆಚ್ಚಿನ ಈ ರೀತಿಯ ಕಾರ್ಯಕ್ರಮಗಳು ಜರುಗಬೇಕೆಂದು ಅಭಿಪ್ರಾಯಿಸಿದರು.ವಿ.ವೀ.ಸಂಘದ ಕಾರ್ಯದರ್ಶಿಗಳಾದ ಬಿ.ವಿ. ಬಸವರಾಜ್, ಸಹ ಕಾರ್ಯದರ್ಶಿಗಳಾದ ದರೂರು ಶಾಂತವೀರನ ಗೌಡ, ಖಜಾಂಚಿಗಳಾದ ಗೋನಾಳ್ ರಾಜಶೇಖರ್ ಗೌಡ ಶುಭ ಹಾರೈಸಿದರು.  ಆರ್.ವೈ.ಎಮ್,ಇ,ಸಿ ಆಡಳಿತ ಮಂಡಳಿಯ ಸದಸ್ಯರಾದ   ಜಿ.ಎಂ ಮಲ್ಲಿಕಾರ್ಜುನ ರೆಡ್ಡಿ, ಬಸವರಾಜ ರೂಪನಗುಡಿ,  ಜಾನೆಕುಂತೆ ಪೋಂಪನ ಗೌಡ, ಕೊರ್ಲಗುಂದಿ ಬಸವನ ಗೌಡ, ಹಲಕುಂದಿ ಸತೀಶ್ ಕುಮಾರ್ ಕಾರ್ಯಕ್ರಮವನ್ನು ಆಯೋಜನೆಗಾಗಿ ಅಭಿನಂದಿಸಿದರು. ಈ ಕಾರ್ಯಕ್ರಮದಲ್ಲಿ “ಖಿಂಐಇಓಖಿಖಔಓIಅS ಖಿIಒಇS”  ನ್ಯೂಸ್ ಲೆಟರನ್ನು ಬಿಡುಗಡೆಗೊಳಿಸಲಾಯಿತು.ಸಭೆಯನ್ನುದ್ದೇಶಿಸಿ ಪ್ರಾಂಶುಪಾಲರಾದ  ಡಾ|| ಟಿ. ಹನುಮಂತರೆಡ್ಡಿ ಸಕಲರಿಗೂ ಶುಭಕೋರಿ, ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವದಿಂದ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಉತ್ತಮ ಪ್ರತಿಫಲವನ್ನು ನೀರಿಕ್ಷಿಸುವುದರೊಂದಿಗೆ ಜ್ಞಾನದ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು,  ಉಪಪ್ರಾಂಶುಪಾಲರು ಹಾಗೂ  ಎಲೆಕ್ಟ್ರಾನಿಕ್ಸ ಮತ್ತು ಕಮ್ಯುನಿಕೆಷನ್ ವಿಭಾಗದ ಮುಖ್ಯಸ್ಥರಾದ ಡಾ|| ಸವಿತ ಸೊನೊಳಿ ಅವರು ಈ ಕಾರ್ಯಕ್ರಮದಲ್ಲಿ ಮಾತನಾಡುತ್ತ ಪ್ರಾಜೆಕ್ಟ್ ಮಾಡೆಲ್, ಟೆಕ್ನಿಕಲ್ ಪೇಪರ್ ಪ್ರಜೆಂಟೇಷನ್, ಕೋಡಿಂಗ್, ಡಿಸೈನ್ ಥಿಂಕಿಂಗ್, ಪೋಟೋಗ್ರಫಿ, ಸಂಗೀತ ಗಾಯನ, ಚರ್ಚಾಗೋಷ್ಟಿ ಹಾಗೂ ಇತರೆ ಸ್ಪರ್ಧೆಗಳಲ್ಲಿ, ವಿವಿಧ ವಿದ್ಯಾರ್ಥಿಗಳನ್ನು ಪಾಲ್ಗೋಳ್ಳುವಂತೆ ಪ್ರೋತ್ಸಾಯಿಸಿ, ಕ್ರಿಯಾಶಿಲತೆಯನ್ನು ಪೋಷಿಸುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವೆಂದರು. ಈ ಕಾರ್ಯಕ್ರಮದಲ್ಲಿ  ನೆರೆಯ ರಾಜ್ಯದ ಕರ್ನೂಲ್,ಅನಂತಪುರ, ರಾಜ್ಯದ ಬೆಂಗಳೂರು,ದಾವಣಗೆರೆ, ಹೋಸಪೆಟೆ, ಹಾಗೂ ಬಳ್ಳಾರಿಯ ವಿವಿಧ ಕಾಲೆಜುಗಳಿಂದ ವಿಧ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ ಎಂದು ತಿಳಿಸಿದರು. ಡಾ|| ಎಸ್ ಪ್ರಭಾವತಿ ಸ್ವಾಗತಿಸಿದರು, ಪ್ರಶಾಂತ ಕೇಣಿ, ಶ್ರೀಮತಿ ವಾಣಿ ಹೆಚ್ ಕಾರ್ಯಕ್ರಮವನ್ನು ನಿರೂಪಿಸಿದರು ಹಾಗೂ ಶ್ರೀಮತಿ ಅಶ್ವಿನಿ .ಕೆ ವಂದಿಸಿದರು, ವಿವಿಧ ವಿಭಾಗದ ಮುಖ್ಯಸ್ಥರು, ಭೋಧಕ, ಭೋಧಕೇತರರ ಸಿಬ್ಬಂದಿಯವರು, ವಿಧ್ಯಾರ್ಥಿಗಳು ಮತ್ತು ಇನ್ನಿತರರು ಭಾಗವಹಿಸಿದ್ದರು. 



 


Post a Comment

0 Comments

Ad Code

Responsive Advertisement