ಬಳ್ಳಾರಿ ಜೂನ್ 13. ಮಕ್ಕಳ ಕಲಿಕೆಯಲ್ಲಿ ಆದ ನಷ್ಟವನ್ನು ಸರಿದೂಗಿಸಬೇಕಾಗಿದೆ.ಅದರ ಗುರಿ ತಲುಪಲು ವಿದ್ಯಾಪ್ರವೇಶ ಹಾಗೂ ಕಲಿಕಾ ಚೇತರಿಕೆ ಉಪಕ್ರಮವನ್ನು ಇಲಾಖೆ ಜಾರಿಗೆ ತಂದಿದೆ ಎಂದು ಶಾಲೆಯ ಮುಖ್ಯ ಗುರುಗಳು ಹಾಗೂ ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾದ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್. ಡಿ.ಎಂ.ಸಿ ಅಧ್ಯಕ್ಷರಿಗು,ಸದಸ್ಯರಿಗು ಹಾಗೂ ಪೋ ಷಕರಿಗು ಹಮ್ಮಿಕೊಂಡಿದ್ದ ಕಲಿಕಾ ಚೇತರಿಕೆ ಸಭೆಯಲ್ಲಿ ಭಾಗವಹಿಸಿ ಹೇಳಿದರು.
ಊರಿನ ಪ್ರಮುಖ ಆರ್. ಸೋಮಶೇಖರ ಗೌಡ ಕನ್ನಡಾಂಬೆಗೆ ಮಾಲಾರ್ಪಣೆ ಮಾಡುವುದರ ಜೊತೆಗೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿ,ವಿದ್ಯಾರ್ಥಿಗಳು ಚೆನ್ನಾಗಿ ಓದಿ ಊರಿಗೆ ಕೀರ್ತಿ ತರಬೇಕೆಂದು ಹೇಳಿದರು. ಎಸ್. ಡಿ.ಎಂ.ಸಿ.ಅಧ್ಯಕ್ಷ ದೊಡ್ಡ ಕುಮಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಬಸಮ್ಮ, ಸಣ್ಣ ಗಂಗಮ್ಮ, ಉಪಾಧ್ಯಕ್ಷೆ ಗಾಯತ್ರಿ, ಸದಸ್ಯರಾದ ವಸಂತ, ಶಿಕ್ಷಕರಾದ ಬಸವರಾಜ, ಮೋದಿನ್ ಸಾಬ್, ಶ್ವೇತಾ, ದಿಲ್ಷಾದ್ ಬೇಗಂ, ಅಂಗನವಾಡಿ ಕಾರ್ಯಕರ್ತೆಯರಾದ ಪದ್ಮಾವತಿ, ಶ್ರೀದೇವಿ, ನಿಂಗಮ್ಮ, ಆರೋಗ್ಯ ಇಲಾಖೆಯ ಡೋನೇಶ್ವರ, ಕಿರಣ್ ಮುಂತಾದವರು ಉಪಸ್ಥಿತರಿದ್ದರು.
.jpg)
0 Comments