ಬಳ್ಳಾರಿ ಜೂನ್ 13. ಹರಿದಾಸ ಸಾಹಿತ್ಯದ ಆದ್ಯ ಪ್ರವರ್ತಕರು,ಧೃವಾಂಶ ಸಂಭೂತರು ಕನ್ನಡ ಸಾಹಿತ್ಯ ಲೋಕಕ್ಕೆ ಅದರಲ್ಲಿ ವಿಶೇಷವಾಗಿ ಹರಿದಾಸ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಶ್ರೀಶ್ರೀಪಾದರಾಜರ ಆರಾಧನಾ ಮಹೋತ್ಸವವನ್ನು ಸ್ಥಳೀಯ ರೇಡಿಯೋ ಪಾರ್ಕ್‍ನಲ್ಲಿರುವ ಶ್ರೀ ವ್ಯಾಸರಾಜರ ಮಠದಲ್ಲಿ ಬಹಳ ಭಕ್ತಿ ಸಡಗರದಿಂದ ಆಚರಿಸಲಾಯಿತು.ಶ್ರೀಪಾದರಾಜರ ಆರಾಧನಾಅಂಗವಾಗಿ ಪಂಡಿತ್ ಜಯಸಿಂಹಾಚಾರ್ಯ ರಾಜಪುರೋಹಿತರಿಂದ ಶ್ರೀಪಾದರಾಜರ ಜೀವನ ಸಾಧನೆ ಗಳು ಹಾಗೂ ಅವರ ಕೃತಿ ಗಳಬಗ್ಗೆ ವಿಶೇಷ ಉಪನ್ಯಾಸ ಜರುಗಿತು.
ಆರಾಧನಾ ನಿಮಿತ್ತ ಬೆಳಿಗ್ಗೆ ಮಠದಲ್ಲಿ ಅಷ್ಟೋತ್ತರ,ವಾಯುಸ್ತುತಿಪಾರಾಯಣ ಜರುಗಿದವು ನಂತರ ಪಂಚಬೃಂದಾವನಗಳಿಗೆ ಫಲ ಪಂಚಾಮೃತ ಅಭಿಷೇಕ ಜರುಗಿತು. ಶ್ರೀಪಾದರಾಜರ ಭಾವಚಿತ್ರ ನನ್ನು ರಜತ ರಥದಲ್ಲಿ ಇರಿಸಿ ರಥೋತ್ಸವ ನೇರವೇರಿಸಲಾಯಿತು. ಈ ಸಮಯದಲ್ಲಿ ಹಲವಾರು ಭಜನಾ ಮಂಡಳಿ ಗಳಿಂದ ಕೋಲಾಟ ಜರುಗಿದವು. ನೆರೆದಿದ್ದ ಭಕ್ತರು ಭಕ್ತಿಭಾವದಿಂದ ಶ್ರೀಪಾದರಾಜರ ಕೃತಿಗಳನ್ನು ಹಾಡುವುದರ ಮೂಲಕ ಭಕ್ತಿ ಯ ಪರಾಕಾμÉ್ಟ ಮೆರೆದ ರು. ಪಂಚಬೃಂದಾವನ ಗಳಿಗೆ ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥಪ್ರಸಾದ ಜರುಗಿದವು. ಮಠದ ಅರ್ಚಕರಾದ ಕೆ.ಪಾಂಡುರಂಗಾಚಾರ್ಯ ಪೂಜಾ ಕೈಂಕರ್ಯಗಳನ್ನು ನೇರವೇರಿಸಿದರು. ಎಲ್ಲಾ ಕಾರ್ಯಕ್ರಮಗಳು ಮಠದ ವ್ಯವಸ್ಥಾಪಕರಾದ ಅಶೋಕ್ ಕುಲಕರ್ಣಿ ಇವರ ನೇತೃತ್ವದಲ್ಲಿ ಜರುಗಿದವು. ಕಾರ್ಯಕ್ರಮದಲ್ಲಿಮಠದ ಭಕ್ತಾಧಿಗಳಾದ ಅರಳಿಕಟ್ಟಿ ಶ್ರೀನಿವಾಸ ಆಚಾರ್ಯ,, ಸುಬ್ರಹ್ಮಣ್ಯ ಆಚಾರ್ಯ,ಬಿ.ಅನಂತಾಚಾರ್ಯ, ಗುಬ್ಬಿ ಶ್ರೀನಿವಾಸ ಮೂರ್ತಿ,ಎಂ.ಭೀಮರಾವ್ ಕುಲಕರ್ಣಿ, ರಘುನಂದನ್ ಬಾದನಹಟ್ಟಿ ,ವೈ.ರಮೇಶ, ಜಿ.ಹೆಚ್ . ರಾಮಕೃಷ್ಣ ರಾವ್ ,ಸಿ.ಕೆ.ನಾಗರಾಜ ಎಂ.ಜಯಸಿಂಹಕುಲಕರ್ಣಿ,,ಜಿ.ಎಂ.ಹರಿ ಹುಲಿರಾಜವಕೀಲರುಹಾಗೂ ಮಹಿಳಾ ಭಜನಾ ಮಂಡಳಿ ಸದಸ್ಯರಾದ ಶ್ರೀಮತಿಯರಾದಕೆ.ಎಸ್.ವಾಣಿಶ್ರಿ,ಮೇಘ,ಪರಿಮಳಜನಕ ಕು.ವೈಷ್ಣವಿ ಕುಲಕರ್ಣಿ,ವಂದನಾ ಕುಲಕರ್ಣಿ,ಜಿ.ಎಂ.ಸುಗುಣ, ಶ್ರೀಮತಿ ಉಮಾ ನಾಡಗೌಡರಭಾಗವಹಿಸಿ ಗುರುಗಳ ಅನುಗ್ರಹ ಕ್ಕೆ ಪಾತ್ರರಾದರು. ಕುಮಾರಿ ವೈಷ್ಣವಿ ಕುಲಕರ್ಣಿ ಹಾಗೂ ತಂಡದವರಿಂದ ಭರತನಾಟ್ಯ ಪ್ರದರ್ಶನ ಗಳು ಜರುಗಿದವು.

0 Comments